ಬೆಂಗಳೂರು: ಜನಸಾಮಾನ್ಯರಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಲು ಕರ್ನಾಟಕ ಸಾಹಿತ್ಯ ಅಕಾಡೆಮಿ ‘ಸಂತೆಯಲ್ಲಿ ಕನ್ನಡ ಸಾಹಿತ್ಯ’ ಕಾರ್ಯಕ್ರಮ ರೂಪಿಸಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ‘ಸಾಹಿತ್ಯ ನಗರಗಳಲ್ಲಿ ಇರುವವರಿಗೆ ಮಾತ್ರವಲ್ಲ, ಗ್ರಾಮೀಣ ಪ್ರದೇಶದಲ್ಲಿನ ಜನಸಾಮಾನ್ಯರಿಗೂ ತಲುಪಬೇಕು. ನಮ್ಮ ಜನಪದರು ಕಲಿತದ್ದು ಸಂತೆ ಮತ್ತು ಜಾತ್ರೆಗಳಲ್ಲಿ. ಕನ್ನಡ ಸಾಹಿತ್ಯ ಕಟ್ಟಿಕೊಟ್ಟ ಸೌಹಾರ್ದ ಸಂಬಂಧಗಳನ್ನು, ಮಾನವೀಯ ಮೌಲ್ಯಗಳನ್ನು ಜನರಿಗೆ ತಲುಪಿಸಬೇಕಿದೆ. ಜನಸಾಮಾನ್ಯರಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಬೇಕಾದರೆ ಆತ ಇರುವ ಸ್ಥಳಗಳಿಗೆ ಹೋಗಿ, ಪಂಪ, ಕುಮಾರವ್ಯಾಸ, ಕುವೆಂಪು, ಬೇಂದ್ರೆ ಮೊದಲಾದವರ ಬಗ್ಗೆ ವಿವರಿಸಿ ಹೇಳಬೇಕಾಗುತ್ತದೆ. ಆದ್ದರಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ವ್ಯಾಪಾರಿಗಳು ಹಾಗೂ ಗ್ರಾಹಕರೇ ಇದರ ಪ್ರೇಕ್ಷಕರಾಗಿರುತ್ತಾರೆ’ ಎಂದು ಹೇಳಿದರು.

‘ಸಂತೆಯಲ್ಲಿ ಕನ್ನಡ ಸಾಹಿತ್ಯ ಕಾರ್ಯಕ್ರಮ ಸರಣಿಯ ಪ್ರಥಮ ಕಾರ್ಯಕ್ರಮ ಇದೇ 13ರಂದು ತುಮಕೂರಿನ ಕುಣಿಗಲ್ ತಾಲ್ಲೂಕಿನ ಎಡೆಯೂರು ಗ್ರಾಮದ ಸಂತೆ ಮೈದಾನದಲ್ಲಿ ನಡೆಯಲಿದೆ. ಮುಂದಿನ ದಿನಗಳಲ್ಲಿ ವಿವಿಧ ಸಂತೆಗಳಲ್ಲಿ ಈ ಕಾರ್ಯಕ್ರಮ ನಡೆಸಿ, ಸಾಹಿತ್ಯಾಭಿರುಚಿ ಬೆಳೆಸಲಾಗುವುದು’ ಎಂದು ವಿವರಿಸಿದರು.

150 ಪುಸ್ತಕಗಳು: ‘ನಾಡಿನ ಶ್ರೇಷ್ಠ ಸಾಧಕರನ್ನು ಪರಿಚಯಿಸುವ ಉದ್ದೇಶದಿಂದ ‘ಕನ್ನಡ ಭಾರತಿ’ ಶೀರ್ಷಿಕೆಯಡಿ 150 ಪುಸ್ತಕಗಳನ್ನು ಹೊರತರಲಾಗುತ್ತಿದೆ. ಸಾಹಿತ್ಯ, ಸಂಸ್ಕೃತಿ, ರಾಜಕೀಯ, ಆಡಳಿತ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳ 150 ಸಾಧಕರ ಬಗ್ಗೆ 150 ಲೇಖಕರಿಂದ ಈ ಪುಸ್ತಕಗಳನ್ನು ಬರೆಸಲಾಗುತ್ತದೆ. ಪ್ರತಿ ಪುಸ್ತಕ 60 ಪುಟ ಇರಲಿದ್ದು, ಈ ವರ್ಷ 100 ಪುಸ್ತಕಗಳನ್ನು ಪ್ರಕಟಿಸಲಾಗುವುದು. ಉಳಿದ ಪುಸ್ತಕಗಳನ್ನು ಮುಂದಿನ ದಿನಗಳಲ್ಲಿ ಹೊರತರಲಾಗುವುದು’ ಎಂದು ಮುಕುಂದರಾಜ್ ಹೇಳಿದರು.

‘ರಾಮ ಮನೋಹರ ಲೋಹಿಯಾ ಮತ್ತಿತರ ಮಹನೀಯರ ಪುಸ್ತಕಗಳಲ್ಲಿನ ಸೌಹಾರ್ದದ ಅಂಶಗಳನ್ನು ಕ್ರೊಡೀಕರಿಸಿ, ಪುಸ್ತಕಗಳನ್ನು ಹೊರತರಲಾಗುವುದು. ಮತೀಯ ದ್ವೇಷ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಇಂತಹ ಪುಸ್ತಕಗಳು ಅಗತ್ಯವಾಗಿದ್ದು, ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಉಪನ್ಯಾಸ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ‘ಮಹಿಳಾ ಮುನ್ನಡೆ’ ಶೀರ್ಷಿಕೆಯಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 50 ಮಹಿಳಾ ಸಾಧಕರ ಬಗ್ಗೆ 50 ಪುಸ್ತಕಗಳನ್ನು ಪ್ರಕಟಿಸುವ ಯೋಜನೆ ರೂಪಿಸಿದ್ದು, ಪುಸ್ತಕಗಳು ಮುದ್ರಣದ ಹಂತದಲ್ಲಿವೆ’ ಎಂದು ತಿಳಿಸಿದರು.

ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್. ಉಪಸ್ಥಿತರಿದ್ದರು.

ಕಾರಾಗೃಹ ಸಾಹಿತ್ಯ ಕಮ್ಮಟ ವಿಸ್ತರಣೆ

‘ಮೈಸೂರಿನ ಕಾರಾಗೃಹದಲ್ಲಿ ಕೈದಿಗಳಿಗೆ ಸಾಹಿತ್ಯ ಕಮ್ಮಟ ನಡೆಸಲಾಗಿದ್ದು ಅಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಹಿತ್ಯ ಸೃಷ್ಟಿಗೆ ಕೈದಿಗಳು ಆಸಕ್ತಿ ತೋರಿದ್ದಾರೆ. ಆದ್ದರಿಂದ ರಾಜ್ಯದಲ್ಲಿರುವ ಎಲ್ಲ ಕಾರಾಗೃಹಗಳಲ್ಲಿ ಅಕಾಡೆಮಿ ವತಿಯಿಂದ ಸಾಹಿತ್ಯ ಕಮ್ಮಟ ನಡೆಸಲು ನಿರ್ಧರಿಸಲಾಗಿದೆ. ಕೈದಿಗಳಿಗೆ ಬಸವಾದಿ ಶರಣರು ಹಾಗೂ ಸಾಹಿತ್ಯವನ್ನು ಪರಿಚಯಿಸುವುದರಿಂದ ಅವರಲ್ಲಿ ಅಲ್ಪಸ್ವಲ್ಪವಾದರೂ ಬದಲಾವಣೆ ಸಾಧ್ಯವಾಗಲಿದೆ’ ಎಂದು ಎಲ್.ಎನ್. ಮುಕುಂದರಾಜ್ ಹೇಳಿದರು. ‘ಅಕಾಡೆಮಿ ವತಿಯಿಂದ ವಲಯವಾರು ಯುವ ಕವಿಗೋಷ್ಠಿಗಳನ್ನೂ ನಡೆಸಲಾಗುತ್ತಿದೆ. ಇದೇ 5ರಂದು ಹಾಸನದಲ್ಲಿ ಯುವ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಹಳಗನ್ನಡ ಸಾಹಿತ್ಯ ಕೃತಿಗಳ ಮರುಮುದ್ರಣ ಸೇರಿ ವಿವಿಧ ಯೋಜನೆಗಳನ್ನು ಈ ಸಾಲಿನಲ್ಲಿ ರೂಪಿಸಲಾಗಿದೆ’ ಎಂದರು.

‘ಕೃಷಿ ಸಾಧಕರ ಪರಿಚಯಕ್ಕೆ ಬೇಸಾಯದ ಬದುಕು’

‘ಯುವಜನರನ್ನು ಕೃಷಿಯ ಕಡೆಗೆ ಬೇಸಾಯಗಾರರನ್ನು ಸಾಹಿತ್ಯದ ಕಡೆಗೆ ಆಕರ್ಷಿಸುವ ಉದ್ದೇಶದಿಂದ ‘ಬೇಸಾಯದ ಬದುಕು’ ಯೋಜನೆ ರೂಪಿಸಲಾಗಿದೆ. ಕೃಷಿ ಕ್ಷೇತ್ರದ 50 ಸಾಧಕರ ಬಗ್ಗೆ 50 ಪುಸ್ತಕಗಳನ್ನು ಪ್ರಕಟಿಸಲಾಗುವುದು. ಕೃಷಿ ಇಲಾಖೆ ಕೃಷಿ ವಿಶ್ವವಿದ್ಯಾಲಯಗಳು ಹಾಗೂ ವಿವಿಧ ಸರ್ಕಾರೇತರ ಸಂಸ್ಥೆಗಳ ಸಹಯೋಗ ಪಡೆಯಲಾಗುವುದು. ಇದಕ್ಕೆ ₹30 ಲಕ್ಷ ವೆಚ್ಚವಾಗಲಿದೆ’ ಎಂದು ಮುಕುಂದರಾಜ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.