ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಣದ ಘನತೆ ಎತ್ತಿಹಿಡಿದ ಸಾವಿತ್ರಿಬಾಯಿ ಫುಲೆ’

Last Updated 3 ಜನವರಿ 2020, 22:53 IST
ಅಕ್ಷರ ಗಾತ್ರ

ಬೆಂಗಳೂರು: ಅಂದಿನ ‘ಕತ್ತಲ ಯುಗ’ ದಲ್ಲಿ ಶಿಕ್ಷಕಿಯಾಗುವ ಧೈರ್ಯತಾಳಿ ಶಿಕ್ಷಣದ ಘನತೆಯನ್ನು ಎತ್ತಿ ಹಿಡಿದ ಸಾವಿತ್ರಿಬಾಯಿಫುಲೆಯವರ ಮಹತ್ವದ ಬಗ್ಗೆ ಭಾರತೀಯ ಸಮಾಜಕ್ಕೆಹೆಚ್ಚು ತಿಳಿವಳಿಕೆ ಮೂಡಿಸ ಬೇಕಿದೆ. ಹಾಗಾಗಿ ಇವರ ಜನ್ಮದಿನವನ್ನು ಸರ್ಕಾರವೇಆಚರಿಸುತ್ತಿರುವುದು ಶ್ಲಾಘ ನೀಯ ಎಂದು ಬೆಂಗಳೂರು ವಿಶ್ವವಿದ್ಯಾಲಯದಕುಲಸಚಿವ (ಮೌಲ್ಯಮಾಪನ) ಡಾ.ಸಿ.ಶಿವರಾಜು ಹೇಳಿದರು.

ವಿಶ್ವವಿದ್ಯಾಲಯದಮಹಿಳಾ ಅಧ್ಯಯನ ಕೇಂದ್ರ ಶುಕ್ರವಾರ ಆಯೋಜಿಸಿದ್ದ ಸಾವಿತ್ರಿಬಾಯಿಫುಲೆ ಅವರ ಜನ್ಮ ದಿನಾಚರಣೆ, ಕೇಂದ್ರದ ಹಳೆಯ ವಿದ್ಯಾರ್ಥಿಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದುಕೆಳವರ್ಗದ ಸಮಾಜದವರು ಹಾಗೂ ಮಹಿಳೆಯರು ಮುಕ್ತವಾಗಿ ವಿದ್ಯಾಭ್ಯಾಸ ಪಡೆಯುವಂತಾಗಿರುವುದರ ಹಿಂದೆ ಬಹು ದೊಡ್ಡ ಹೋರಾಟವೇ ಇದೆ ಎಂದರು.

ಕುಲಸಚಿವ ಡಾ.ಬಿ.ಕೆ.ರವಿ ಮಾತನಾಡಿ, ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರುನೀಡಿದ ಅಕ್ಷರ ಸಂಸ್ಕೃತಿಯಿಂದ ಶಿಕ್ಷಣ ಜ್ಯೋತಿಇಂದು ಬೆಳಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT