ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದನೇ ತರಗತಿಗೆ ಪ್ರವೇಶ ಶೇ 18.16 ರಷ್ಟು ದಾಖಲಾತಿ

Last Updated 5 ಜುಲೈ 2021, 20:06 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿಗೆ 10.21 ಲಕ್ಷ ವಿದ್ಯಾರ್ಥಿಗಳನ್ನು ದಾಖಲಿಸುವ ಗುರಿಯನ್ನು ಶಿಕ್ಷಣ ಇಲಾಖೆ ಹೊಂದಿದ್ದು, ಜುಲೈ 5 ರವರೆಗೆ 1.79 ಲಕ್ಷ (ಶೇ 18.16) ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದಾರೆ. ಜೂನ್‌ 15 ರಿಂದ ಮಕ್ಕಳ ದಾಖಲಾತಿ ಆರಂಭಗೊಂಡಿತ್ತು.

ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ (ಎಸ್‌ಎಟಿಎಸ್) ಮಾಹಿತಿ ಆಧಾರದಲ್ಲಿ ರಾಜ್ಯದಾದ್ಯಂತ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ದಾಖಲಾತಿಗೆ ಸಂಬಂಧಿಸಿದಂತೆ ಅಂಕಿ–ಅಂಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.

ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಗೆ 4.72 ಲಕ್ಷ ವಿದ್ಯಾರ್ಥಿಗಳ ಪ್ರವೇಶದ ಗುರಿ ಹೊಂದಲಾಗಿದ್ದು, 1.40 ಲಕ್ಷ (ಶೇ 30.20) ದಾಖಲಾಗಿದ್ದಾರೆ. ಖಾಸಗಿ ಶಾಲೆಗೆ 4.76 ಲಕ್ಷ ವಿದ್ಯಾರ್ಥಿಗಳ ಪ್ರವೇಶ ಗುರಿ ನಿಗದಿಯಾಗಿದ್ದು, 25,310 (ಶೇ 6.30) ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅನುದಾನಿತ ಶಾಲೆಗೆ 63,838 ವಿದ್ಯಾರ್ಥಿಗಳ ಪ್ರವೇಶ ಗುರಿ ನೀಡಲಾಗಿದ್ದು, 13, 735 (ಶೇ 24.96) ದಾಖಲಾಗಿದ್ದಾರೆ.

ಜೂನ್ 24 ರಿಂದ ಜುಲೈ 5ರ ನಡುವೆ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಗೆ ಶೇ 50.4ರಷ್ಟು ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶೇ 66.9, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶೇ 64.9 ಹಾಗೂ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶೇ 30.9ರಷ್ಟು ಪ್ರವೇಶ ದಾಖಲಾಗಿದೆ.

ಕಲಬುರ್ಗಿ ವಿಭಾಗದಲ್ಲಿ ಹೆಚ್ಚು: ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರ್ಗಿ ವಿಭಾಗವಾರು ದಾಖಲಾತಿ ಲೆಕ್ಕಚಾರದಲ್ಲಿ ಕಲಬುರ್ಗಿ ವಿಭಾಗದಲ್ಲಿ ಅತಿ ಹೆಚ್ಚು (ಶೇ 71.7) ಮತ್ತು ಬೆಂಗಳೂರು ವಿಭಾಗದಲ್ಲಿ ಅತಿ ಕಡಿಮೆ (ಶೇ 63.8) ದಾಖಲಾತಿಯಾಗಿದೆ. ಉಳಿದಂತೆ, ಮೈಸೂರು ವಿಭಾಗದಲ್ಲಿ (ಶೇ 66.2) ಬೆಳಗಾವಿ ವಿಭಾಗದಲ್ಲಿ (ಶೇ 65) ದಾಖಲಾತಿಯಾಗಿದೆ.

ಜಿಲ್ಲಾವಾರು ದಾಖಲಾತಿಯಲ್ಲಿ ಚಾಮರಾಜನಗರ (ಶೇ 76), ಹಾವೇರಿ (ಶೇ 75) ಹಾಗೂ ಧಾರವಾಡ (ಶೇ 69) ಮೊದಲ ಸ್ಥಾನದಲ್ಲಿದೆ. ಮೈಸೂರು (ಶೇ 37), ಬೆಂಗಳೂರು ಉತ್ತರ (ಶೇ 22) ಹಾಗೂ ಬೆಂಗಳೂರು ದಕ್ಷಿಣ (ಶೇ 13) ಕೊನೆಯ ಮೂರು ಸ್ಥಾನದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT