ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ತರಗತಿಗೆ ಒಂದೇ ಕೊಠಡಿ!

ಹೆಸರಘಟ್ಟ ಹೋಬಳಿ ಗುಣಿ ಅಗ್ರಹಾರ ಗ್ರಾಮದ ಸರ್ಕಾರಿ ಶಾಲೆ ಸ್ಥಿತಿ
Last Updated 22 ಜೂನ್ 2018, 20:27 IST
ಅಕ್ಷರ ಗಾತ್ರ

ಬೆಂಗಳೂರು: ಹೆಸರಘಟ್ಟ ಹೋಬಳಿಯ ಗುಣಿ ಅಗ್ರಹಾರ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ಮತ್ತು ಐದನೇ ತರಗತಿಗಳು ಒಂದೇ ಕೊಠಡಿಯಲ್ಲಿನಡೆಯುತ್ತಿದೆ.

ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಇರುವ ಈ ಶಾಲೆ ಪ್ರಾರಂಭವಾಗಿ ಸುಮಾರು ಹತ್ತು ವರ್ಷಗಳಾಗಿದ್ದು, ಪ್ರಾರಂಭದಲ್ಲಿ ಕೇವಲ ಮೂರು ಕೊಠಡಿಗಳಿದ್ದವು. 2011-2012ರಲ್ಲಿ ಜಿಲ್ಲಾ ಪಂಚಾಯಿತಿಯಿಂದ ಒಂದು ಕೊಠಡಿಯನ್ನು ಕಟ್ಟಿಸಿ ಕೊಡಲಾಗಿತು.ಇನ್ನೂ ಒಂದು ಕೊಠಡಿಯ ಅಗತ್ಯವಿದ್ದು, ಶೀಘ್ರ ಮಂಜೂರು ಮಾಡಬೇಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಲಾ ಶಿಕ್ಷಕರು ಮನವಿ ಸಲ್ಲಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಹೀಗಾಗಿ ಒಂದು ಕೊಠಡಿಯಲ್ಲಿ
ಎರಡು ತರಗತಿಗಳನ್ನುನಡೆಸಲಾಗುತ್ತಿದೆ.

‘ನಾಲ್ಕನೇ ತರಗತಿಯಲ್ಲಿ 17 ವಿದ್ಯಾರ್ಥಿಗಳು ಮತ್ತು ಐದನೇ ತರಗತಿಯಲ್ಲಿ 15 ವಿದ್ಯಾರ್ಥಿಗಳು ಇದ್ದಾರೆ. 32 ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಪಾಠ ಮಾಡುತ್ತಿದ್ದಾರೆ. ಹೀಗಿದ್ದಾಗ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲುಹೇಗೆ ಸಾಧ್ಯ? ಹೀಗಾಗಿಯೇ ಪೋಷಕರು ಖಾಸಗಿ ಶಾಲೆಗಳತ್ತಾ ಒಲವು ತೋರುತ್ತಿದ್ದಾರೆ’ ಎಂದು ಗ್ರಾಮದ ನಿವಾಸಿ ಮಂಜಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಕಸಘಟ್ಟಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತರಾಯಪ್ಪ, ‘ಶಾಲೆಗೆ ಅವಶ್ಯಕವಾಗಿರುವ ಮತ್ತೊಂದು ಕೊಠಡಿಯನ್ನು ನಿರ್ಮಿಸಿ ಕೊಡಲಾಗುವುದು. ಶಾಲೆಯ ಸುತ್ತಾ ಗೋಡೆ ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT