ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಿನ ಮಾತು ಸಾಕು– ಬುದ್ಧಿ ಬಳಸಬೇಕು

ಕೃಷಿ ಸುಧಾರಣೆಗೆ ದಿಟ್ಟ ಹೆಜ್ಜೆ ಇಡಿ– ವಿಜ್ಞಾನಿ ಹೆಗ್ಗೆರೆ ರಂಗನಾಥ್‌ ಸಲಹೆ
Last Updated 4 ಜನವರಿ 2020, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ಕೃಷಿಯ ವೆಚ್ಚ ಹೆಚ್ಚುತ್ತಿದೆ. ಸಣ್ಣ ಕೃಷಿಕರು ಕುಟುಂಬ ಪೋಷಣೆಗೆ ಹೆಣಗಾಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಯಲ್ಲಿ ಕೃಷಿಕನೇ ದೇಶದ ಬೆನ್ನೆಲುಬು ಎಂಬ ರಂಗಿನ ಮಾತನಾಡುತ್ತಾ ಕುಳಿತರೆ ಆಗದು. ಕೃತಕ ಬುದ್ಧಿಮತ್ತೆ ಬಳಸಿ ಕೃಷಿ ಸುಧಾರಣೆಗೆ ದಿಟ್ಟ ಹೆಜ್ಜೆ ಇಡಬೇಕು’ ಎಂದು ವಿಜ್ಞಾನಿ ಪ್ರೊ.ಹೆಗ್ಗೆರೆ ರಂಗನಾಥ್ ಅಭಿಪ್ರಾಯಪಟ್ಟರು.

ವಿಜ್ಞಾನ ಕಾಂಗ್ರೆಸ್‌ನಲ್ಲಿ ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಕುರಿತು ಅವರು ಉಪನ್ಯಾಸ ನೀಡಿದರು.

‘ಅತಿಯಾದ ನಗರೀಕರಣದಿಂದ ಕ್ಷೀಣಿಸುತ್ತಿರುವ ಕೃಷಿ ಭೂಮಿ, ನೀರು ಮತ್ತಿತರ ಸಂಪನ್ಮೂಲಗಳ ಸಮರ್ಥ ಬಳಕೆಯಲ್ಲಿ ಹಿಂದುಳಿಯುವಿಕೆ, ಓಬಿರಾಯನ ಕಾಲದ ಕೃಷಿ ಪದ್ಧತಿ ಮುಂತಾದ ಸಮಸ್ಯೆಗಳಿಂದ ಕೃಷಿ ಕ್ಷೇತ್ರ ನಲುಗಿದೆ. 2050ರ ವೇಳೆಗೆ ದೇಶದಲ್ಲಿ 160 ಕೋಟಿ ಮಂದಿಯ ಹಸಿವು ನೀಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಅದಕ್ಕೆ ಅನುಗುಣವಾಗಿ ಕೃಷಿ ಉತ್ಪಾದಕತೆ ಹೆಚ್ಚಿಸುವ ಸವಾಲು ನಮ್ಮ ಮುಂದಿದೆ’ ಎಂದು ಹೇಳಿದರು.

‘1 ಕೆ.ಜಿ. ಕಬ್ಬು ಬೆಳೆಯಲು 3 ಸಾವಿರ ಲೀಟರ್‌ ನೀರು ಬೇಕು. ಅದೇ 1 ಕೆ.ಜಿ ಆಹಾರ ಧಾನ್ಯ ಬೆಳೆಸಲು 250 ಲೀ ನೀರು ಸಾಕು. ಆದರೂಮಂಡ್ಯದಂತಹ ಜಿಲ್ಲೆಯಲ್ಲಿ ಕಬ್ಬನ್ನು ಯಥೇಚ್ಛವಾಗಿ ಬೆಳೆಯಲಾಗುತ್ತದೆ. ಕೃತಕ ಬುದ್ಧಿಮತ್ತೆ ಬಳಸಿ ಕೃಷಿ ಮಾಡಿದರೆ ಕಬ್ಬಿಗಿಂತ ಧಾನ್ಯದ ಬೆಳೆ ಹೆಚ್ಚು ಲಾಭ ತರಬಲ್ಲುದು. ಇದನ್ನು ಮನವರಿಕೆ ಮಾಡುವ ಚಾಕಚಕ್ಯತೆ ಸರ್ಕಾರಕ್ಕೆ ಇರಬೇಕು’ ಎಂದರು.

‘ಸೆನ್ಸರ್‌, ಡ್ರೋನ್‌, ಚಾಲಕರಹಿತ ಟ್ರ್ಯಾಕ್ಟರ್‌, ಬೀಜದ ಆಯ್ಕೆಗೆ ನೆರ ವಾಗುವ ತಂತ್ರಜ್ಞಾನ, ಹವಾಗುಣದ ಬಗ್ಗೆ ಮಾಹಿತಿ ನೀಡುವ ಆ್ಯಪ್‌ಗಳ ಬಳಕೆ ಕೃಷಿಯನ್ನು ಸುಲಭ ಹಾಗೂ ನಿಖರಗೊಳಿಸಬಲ್ಲವು. ಯಾವ ಕೃಷಿ ಉತ್ಪನ್ನಕ್ಕೆ ಎಷ್ಟು ಬೇಡಿಕೆ ಇದೆ ಎಂಬುದನ್ನು ತಿಳಿದುಕೊಂಡು ಅದಕ್ಕನು ಗುಣವಾಗಿ ಬೆಳೆ ಆಯ್ಕೆ ಮಾಡಿದರೆ ನಷ್ಟವಾಗುವ ಪ್ರಮಯವೇ ಎದುರಾಗದು’ ಎಂದರು.

‘ದತ್ತಾಂಶ ತೈಲ, ಕೃತಕ ಬುದ್ಧಿಮತ್ತೆ ವಿದ್ಯುತ್‌’

‘ಭವಿಷ್ಯದಲ್ಲಿ ಕೃಷಿಗೆ ದತ್ತಾಂಶವೇ ತೈಲ, ಕೃತಕ ಬುದ್ಧಿಮತ್ತೆಯೇ ವಿದ್ಯುತ್‌’ ಎಂದು ವಿಜ್ಞಾನಿ ಡಾ.ಅಜಿತ್‌ ಸಪ್ರೆ ಅಭಿಪ್ರಾಯಪಟ್ಟರು.

‘ಕೃತಕ ಬುದ್ಧಿ ಮತ್ತೆಯಿಂದ ಸಂಗ್ರಹಿಸುವ ದತ್ತಾಂಶ ಗುಣಮಟ್ಟದಿಂದ ಕೂಡಿರದಿದ್ದರೆ ಅದು ತಪ್ಪು ನಿರ್ಧಾರಗಳಿಗೂ ಕಾರಣವಾಗಬಲ್ಲುದು. ಅದರ ನಿಖರತೆ ಬಗ್ಗೆ ಎಚ್ಚರ ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

‘ದತ್ತಾಂಶ ತೈಲ, ಕೃತಕ ಬುದ್ಧಿಮತ್ತೆ ವಿದ್ಯುತ್‌’

‘ಭವಿಷ್ಯದಲ್ಲಿ ಕೃಷಿಗೆ ದತ್ತಾಂಶವೇ ತೈಲ, ಕೃತಕ ಬುದ್ಧಿಮತ್ತೆಯೇ ವಿದ್ಯುತ್‌’ ಎಂದು ವಿಜ್ಞಾನಿ ಡಾ.ಅಜಿತ್‌ ಸಪ್ರೆ ಅಭಿಪ್ರಾಯಪಟ್ಟರು.

‘ಕೃತಕ ಬುದ್ಧಿ ಮತ್ತೆಯಿಂದ ಸಂಗ್ರಹಿಸುವ ದತ್ತಾಂಶ ಗುಣಮಟ್ಟದಿಂದ ಕೂಡಿರದಿದ್ದರೆ ಅದು ತಪ್ಪು ನಿರ್ಧಾರಗಳಿಗೂ ಕಾರಣವಾಗಬಲ್ಲುದು. ಅದರ ನಿಖರತೆ ಬಗ್ಗೆ ಎಚ್ಚರ ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT