ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ‘ಸೈನ್ಸ್ ಫೋರಂ’ ಅಸ್ತಿತ್ವಕ್ಕೆ

Published 18 ಡಿಸೆಂಬರ್ 2023, 14:36 IST
Last Updated 18 ಡಿಸೆಂಬರ್ 2023, 14:36 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ‘ಸೈನ್ಸ್ ಫೋರಂ’ ಅಸ್ತಿತ್ವಕ್ಕೆ ಬಂದಿದ್ದು, ವಿಜ್ಞಾನ ಕ್ಷೇತ್ರದ ಎಲ್ಲಾ ಕಲಿಕೆ, ಸಂಶೋಧನೆ, ಅನ್ವೇಷಣೆಗಳು ಇನ್ನು ಮುಂದೆ ಒಂದೇ ಸೂರಿನಡಿ ನಡೆಯಲಿವೆ. 

ಬೆಂಗಳೂರು ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ ಆವರಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ 'ಸೈನ್ಸ್ ಫೋರಂ’ನ ಲೋಗೊ' ಅನಾವರಣ ಮಾಡಿದ ಕುಲಪತಿ ಡಾ.ಜಯಕರ ಎಸ್.ಎಂ, ವಿಜ್ಞಾನದ ಎಲ್ಲಾ ವಿಭಾಗಗಳನ್ನು ಒಟ್ಟುಗೂಡಿಸಿ ಸಮಗ್ರ ಚರ್ಚೆ, ವೈಜ್ಞಾನಿಕ ವಿಷಯ ವಿನಿಮಯ, ಜ್ಞಾನ ಸಂಪಾದನೆಗೆ ಒತ್ತು ನೀಡುವುದು, ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದ ಸಂಶೋಧನೆ, ಅನ್ವೇಷಣೆಗಾಗಿ ಸೂಕ್ತ ಮಾರ್ಗದರ್ಶನ ಮಾಡುವುದು ಈ ವೇದಿಕೆಯ ಉದ್ದೇಶ ಎಂದು ಹೇಳಿದರು.

ಶ್ರೇಷ್ಠ ವಿಜ್ಞಾನಿಗಳಿಂದ ಉಪನ್ಯಾಸ ಮಾಲಿಕೆ ಆಯೋಜನೆ, ಅಂತರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳೊಂದಿಗೆ ಒಪ್ಪಂದ, ಉದ್ಯಮಶೀಲತೆ ಸಹಭಾಗಿತ್ವ ಒದಗಿಸುವ ಗುರಿಯನ್ನೂ ವೇದಿಕೆ ಹೊಂದಿದೆ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎಚ್.ಎ.ರಂಗನಾಥ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಶೇಕ್ ಲತೀಫ್, ಪರೀಕ್ಷಾಂಗ ಕುಲಸಚಿವ ಶ್ರೀನಿವಾಸ್‌, ವಿಜ್ಞಾನ ವಿಭಾಗದ ಡೀನ್ ಅಶೋಕ್‌ ಹಂಜಗಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT