ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಪ್ಪಲಿ ತೂರಿದ ಓಲಾ ಚಾಲಕನ ಬಂಧನ

ಮತ್ತೊಂದು ಲೈಂಗಿಕ ದೌರ್ಜನ್ಯ: ಓಲಾ ಚಾಲಕ ಬಂಧನ
Last Updated 12 ಜುಲೈ 2018, 18:56 IST
ಅಕ್ಷರ ಗಾತ್ರ

ಬೆಂಗಳೂರು: ವಿನಾಕಾರಣ ಶುಲ್ಕ ವಿಧಿಸಿದ್ದನ್ನು ಪ್ರಶ್ನಿಸಿದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ, ಓಲಾ ಕ್ಯಾಬ್‌ ಚಾಲಕ ಮಹಾದೇವಯ್ಯ (30) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಜುಲೈ 10ರಂದು ನಡೆದ ಘಟನೆ ಬಗ್ಗೆ 22 ವರ್ಷದ ಯುವತಿ ದೂರು ನೀಡಿದ್ದರು. ಲೈಂಗಿಕ ದೌರ್ಜನ್ಯ ಹಾಗೂ ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಉಪ್ಪಾರಪೇಟೆ ಪೊಲೀಸರು ಹೇಳಿದರು.

ಕೆಂಗೇರಿ ನಿವಾಸಿ ಮಹಾದೇವಯ್ಯ, ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದರು. ಮರುದಿನ ಬೆಳಿಗ್ಗೆ ಅವರನ್ನು ಬಂಧಿಸಲಾಯಿತು ಎಂದರು.

ಪ್ರಕರಣದ ವಿವರ: ‘ತಾಯಿ ಜತೆ ಕೆ.ಜಿ. ರಸ್ತೆಯಿಂದ ಮಲ್ಲೇಶ್ವರಕ್ಕೆ ಹೋಗಲು ಓಲಾ ಕ್ಯಾಬ್‌ (ಕೆಎ 41 ಸಿ 0101) ಕಾಯ್ದಿರಿಸಿದ್ದೆ. ಕೆಲವೇ ನಿಮಿಷಗಳಲ್ಲೇ ಓಲಾ ಆ್ಯಪ್‌ ಖಾತೆಗೆ ಕಾಯುವಿಕೆಯ ಶುಲ್ಕ (ವೇಟಿಂಗ್ ಚಾರ್ಜ್‌) ಬೀಳಲಾರಂಭಿಸಿತ್ತು’ ಎಂದು ಸಂತ್ರಸ್ತೆಯು ತಿಳಿಸಿದ್ದರು ಎಂದು ಪೊಲೀಸರು ಹೇಳಿದರು.

‘ಆ ಬಗ್ಗೆ ವಿಚಾರಿಸಲೆಂದು ಮಹಾದೇವಯ್ಯ ಅವರಿಗೆ ಕರೆ ಮಾಡಿದ್ದೆ. ‘ನೀವಿರುವ ಸ್ಥಳದ ಹತ್ತಿರದ ಸಿಗ್ನಲ್‌ನಲ್ಲಿ ಇದ್ದೇನೆ. ಬೇಗನೇ ಬರುತ್ತೇನೆ’ ಎಂದಿದ್ದರು. ‘ನೀವು ಸ್ಥಳಕ್ಕೆ ಬಂದಿಲ್ಲ. ಅಷ್ಟಾದರೂಕಾಯುವಿಕೆಯ ಶುಲ್ಕ ಬೀಳುತ್ತಿರುವುದು ಏಕೆ’ ಎಂದಿದ್ದೆ’.

‘ಅಷ್ಟಕ್ಕೇ ಕೋಪಗೊಂಡ ಚಾಲಕ, ಅವಾಚ್ಯ ಶಬ್ದಗಳಿಂದ ನಿಂದಿಸಲಾರಂಭಿಸಿದ್ದರು. ಕ್ಯಾಬ್‌ ಬುಕ್ಕಿಂಗ್ ರದ್ದು ಮಾಡಿದರು. ನಂತರ, ಕ್ಯಾಬ್‌ ಸಮೇತ ಸ್ಥಳಕ್ಕೆ ಬಂದು ಜಗಳ ತೆಗೆದರು’ ಎಂದು ದೂರಿನಲ್ಲಿ ಹೇಳಿರುವುದಾಗಿ ಪೊಲೀಸರು ವಿವರಿಸಿದರು.

‘ನಡುರಸ್ತೆಯಲ್ಲೇ ನಮ್ಮ ಜತೆ ಅಸಭ್ಯವಾಗಿ ವರ್ತಿಸಿದ ಚಾಲಕ, ಸಾರ್ವಜನಿಕರ ಎದುರೇ ನಮ್ಮ ಮೇಲೆ ತಮ್ಮ ಚಪ್ಪಲಿ ತೂರಿದರು. ನಮ್ಮ ಗೌರವಕ್ಕೆ ಧಕ್ಕೆ ತಂದರು. ನಿನ್ನನ್ನು ಮುಗಿಸಿ ಬಿಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದರು’ ಎಂದು ಯುವತಿ ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ಅಕ್ರಮ ಚಾಲನೆ
ವಿಶಾಲ್‌ ಪರೇಕ್ ಎಂಬುವರ ಹೆಸರಿಗೆ ಕ್ಯಾಬ್‌ ನೋಂದಣಿ ಆಗಿದೆ. ಅವರೇ ಆ ಕ್ಯಾಬ್‌ ಚಲಾಯಿಸಬೇಕಿತ್ತು. ಆದರೆ, ಮಹಾದೇವಯ್ಯ ಅದರ ಚಾಲಕರಾಗಿದ್ದಾರೆ. ಇದು ಅಕ್ರಮ.ಓಲಾ ಕಂಪನಿಗೆ ನೋಟಿಸ್‌ ನೀಡಲಿದ್ದೇವೆ ಎಂದು ಪೊಲೀಸರು ಹೇಳಿದರು.

ಓಲಾ ಕಂಪನಿ ಪ್ರತಿನಿಧಿ, ‘ತಪ್ಪಿತಸ್ಥರನ್ನು ಕಂಪನಿಯಿಂದ ಹೊರಗಿಡುತ್ತೇವೆ. ತನಿಖೆಗೆ ಸಹಕರಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT