ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಬಸವನಗುಡಿ ಠಾಣೆ ಪೊಲೀಸರಿಗೆ ದೂರು ನೀಡಿದ ಮಹಿಳೆ
Last Updated 17 ಫೆಬ್ರುವರಿ 2020, 22:46 IST
ಅಕ್ಷರ ಗಾತ್ರ

ಬೆಂಗಳೂರು: ಪತಿ ವಿರುದ್ಧ ವರದಕ್ಷಿಣೆ ಹಾಗೂ ದೌರ್ಜನ್ಯದ ಪ್ರಕರಣ ದಾಖಲಿಸಿರುವ 28 ವರ್ಷದ ಮಹಿಳೆಯೊಬ್ಬರು ತಮ್ಮ ಪರವಾಗಿ ಕೇಸಿಗೆ ಹಾಜರಾಗುತ್ತಿದ್ದ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎ.ಜಿ. ಪಠಾಣ್ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮಹಿಳೆ 2015ರಲ್ಲಿ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆ 2016ರಿಂದ ಆರಂಭವಾಗಿದ್ದು, ಇದುವರೆಗೆ ಮೂವರು ‍ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬದಲಾಗಿದ್ದಾರೆ. ಈಗ ಎ.ಜಿ. ಪಠಾಣ್‌ ತಮ್ಮ ಪರವಾಗಿ ಹಾಜರಾಗುತ್ತಿದ್ದಾರೆ.

‘ಈ ತಿಂಗಳ 6ರಂದು ಪ್ರಕರಣದ ವಿಚಾರಣೆ ಇತ್ತು. ಆ ಸಮಯದಲ್ಲಿ ಕೋರ್ಟ್‌ಗೆ ಬಂದಿದ್ದ ತಮ್ಮನ್ನು ಪಠಾಣ್‌, ಕೇಸಿನ ಬಗ್ಗೆ ಮಾತನಾಡುವುದಿದೆ. 12 ಗಂಟೆಗೆ ತಮ್ಮ ಚೇಂಬರ್‌ಗೆ ಬನ್ನಿ ಎಂದು ಹೇಳಿದರು. ಅದರಂತೆ ಅವರ ಕಚೇರಿಗೆ ಹೋಗಿದ್ದಾಗ, ಮತ್ತಿಬ್ಬರು ಕಕ್ಷಿದಾರರಿದ್ದರು. ಅವರ ಜೊತೆ ತರಾತುರಿಯಲ್ಲಿ ಚರ್ಚೆ ಮಾಡಿ ಕಳುಹಿಸಿದ ಪ್ರಾಸಿಕ್ಯೂಟರ್‌, ‘ನೀನು ನನ್ನನ್ನು ಚೆನ್ನಾಗಿ ನೋಡಿಕೊಂಡರೆ ಐದಾರು ತಿಂಗಳಲ್ಲಿ ಕೇಸು ಮುಗಿಸುವುದಾಗಿ ಹೇಳಿದರು. ಹಾಗೆಂದರೇನು ಎಂದು ಕೇಳಿದಾಗ, ತಾವು ಕರೆದಾಗಲೆಲ್ಲಾ ಹೊರಗಡೆ ಬರಬೇಕು’ ಎಂದರು.

ಆನಂತರ, ಎದ್ದುಹೋಗಿ ಕಚೇರಿ ಬಾಗಿಲು ಹಾಕಿ ಬಂದು ಪಕ್ಕದಲ್ಲೇ ಕುಳಿತರು. ‘ನನ್ನ ಜತೆ ಸಹಕರಿಸಿದರೆ ನಿನ್ನ ಬದುಕನ್ನು ಬದಲಾವಣೆ ಮಾಡುತ್ತೇನೆ. ನಿಮ್ಮ ಮನೆಯವರಿಗೆ ದುಡ್ಡು ಕೊಡುತ್ತೇನೆ ಎಂದು ಹೇಳಿ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದರು. ಇದರಿಂದ ಗಾಬರಿಗೊಂಡು ಹೊರ ಬಂದೆ. ನನ್ನ ಹಿಂದೆಯೇ ಅವರೂ ಬಂದರು. ಈ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದರು. ಕೊನೆಗೆ ಮನೆಯವರಿಗೆ ವಿಷಯ ತಿಳಿಸಿದೆ. ಧೈರ್ಯ ಮಾಡಿ ದೂರು ನೀಡುತ್ತಿದ್ದೇನೆ. ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಪಠಾಣ್‌ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮಹಿಳೆ ತಿಳಿಸಿದ್ದಾರೆ.

ಬ್ಲ್ಯಾಕ್‌ಮೇಲ್‌ ಮಾಡಲು ದೂರು

‘ನನ್ನ ವಿರುದ್ಧ ಮಹಿಳೆ ದೂರು ಕೊಟ್ಟಿರುವುದು ನಿಜ. ನನ್ನನ್ನು ಬ್ಲ್ಯಾಕ್‌ಮೇಲ್‌ ಮಾಡುವ ಉದ್ದೇಶದಿಂದ ದೂರು ನೀಡಲಾಗಿದೆ. ನಾನು ಸಿಟಿ ಸಿವಿಲ್‌ ನ್ಯಾಯಾಲಯದ ಪ್ರಾಸಿಕ್ಯೂಷನ್‌ ವಿಭಾಗದಲ್ಲಿ ಉಪ ನಿರ್ದೇಶಕನಾಗಿದ್ದೇನೆ. ನನ್ನ ಅಧೀನದಲ್ಲಿ 20 ಮಂದಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ದೂರು ನೀಡಲಾಗಿದೆ’ ಎಂದು ಪಠಾಣ್‌ ತಿಳಿಸಿದ್ದಾರೆ.

‘ಅದೇ ದಿನ ನನ್ನ ಕಚೇರಿಯಲ್ಲಿ ₹ 3 ಲಕ್ಷ ರೂಪಾಯಿ ಕಳುವಾಗಿದೆ. ಈ ಸಂಬಂಧ ಹಲಸೂರು ಗೇಟ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದೇನೆ. ಮಹಿಳೆ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT