ಬೆಂಗಳೂರು: ಮಾರತ್ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಇಕೊ ವರ್ಲ್ಡ್ ಟೆಕ್ಪಾರ್ಕ್ ಗೇಟ್ ಬಳಿ ಹೊರ ರಾಜ್ಯದ 20 ವರ್ಷದ ಯುವತಿಗೆ ಕಿರುಕುಳ ನೀಡಿ ಪರಾರಿ ಆಗಿರುವ ಆರೋಪಿ ಪತ್ತೆ ಕಾರ್ಯವನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.

ಬುಧವಾರ ರಾತ್ರಿ 11.30ರ ಸುಮಾರಿಗೆ ನಡೆದು ತೆರಳುತ್ತಿದ್ದ ಯುವತಿಗೆ ಬೈಕ್ನಲ್ಲಿ ಬಂದಿದ್ದ ಆರೋಪಿ ಕಿರುಕುಳ ನೀಡಿ ಪರಾರಿ ಆಗಿದ್ದ.

‘ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗಿದೆ. ಆರೋಪಿ ಟಿ–ಶರ್ಟ್ ಧರಿಸಿದ್ದ. ಹಿಂದಿನಿಂದ ಬಂದು ಯುವತಿಯ ಪೃಷ್ಠದ ಭಾಗಕ್ಕೆ ಹೊಡೆದು ಹೋಗಿದ್ದ. ಸ್ವಲ್ಪ ದೂರ ಹೋಗಿ ಮತ್ತೆ ವಾಪಸ್ ಬಂದು ಕಿರುಕುಳ ನೀಡಿರುವುದು ದೃಶ್ಯದಲ್ಲಿ ಸೆರೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.

ಆರೋಪಿಯ ಪತ್ತೆಗೆ ಮೂರು ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ. ಆರೋಪಿಯ ಬೈಕ್ನ ನೋಂದಣಿ ಸಂಖ್ಯೆಯ ವಿವರ ಕಲೆಹಾಕಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿಯ ಪತ್ತೆಗೆ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾದ 300ಕ್ಕೂ ಹೆಚ್ಚು ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

‘ಅನಿರೀಕ್ಷಿತ ಘಟನೆಯಿಂದ ಆಘಾತಗೊಂಡ ನಾನು ಸಹಾಯಕ್ಕಾಗಿ ಕೂಗಿಕೊಂಡೆ. ಆಗ ಆ ವ್ಯಕ್ತಿ ಪರಾರಿಯಾದ. ಘಟನೆ ವೇಳೆ ಸಮೀಪದಲ್ಲೇ ನಡೆದು ಹೋಗುತ್ತಿದ್ದವರು ನೆರವಿಗೆ ಬರಲಿಲ್ಲ. ಸಾರ್ವಜನಿಕವಾಗಿ ನನ್ನ ಜತೆ ಅಸಭ್ಯವಾಗಿ ವರ್ತಿಸಿ, ಘನತೆಗೆ ಧಕ್ಕೆ ತಂದಿರುವ ಬೈಕ್ ಸವಾರನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಂತ್ರಸ್ತೆ ಮನವಿ ಮಾಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.