ಪರಸ್ಪರ ಆಪ್ತ ಸಾಹಿತ್ಯ–ಸಾಂಸ್ಕೃತಿಕ ಸಂಬಂಧವುಳ್ಳ ತೆಲುಗು–ಕನ್ನಡ ಭಾಷಾ ಅನುವಾದಗಳ ಕುರಿತು ಈ ಎರಡು ಭಾಷೆಗಳಲ್ಲಿ ಪಾಂಡಿತ್ಯವುಳ್ಳ ಪ್ರಮುಖ ಬರಹಗಾರ ಸ. ರಘುನಾಥ್ ಅವರು ನಗರದಲ್ಲಿ ಜೂನ್ 28ರ ಸಂಜೆ 5ಕ್ಕೆ ಉಪನ್ಯಾಸ ನೀಡಲಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ವಿಭಾಗ ‘ಶಬ್ದಾನಾ’ ಆಯೋಜಿಸಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೆಲುಗು–ಕನ್ನಡ ದ್ವಿಭಾಷಾ ವಿದ್ವಾಂಸ ಹಾಗೂ ಬರಹಗಾರ ಮಾರ್ಕಂಡಪುರಂ ಶ್ರೀನಿವಾಸ ವಹಿಸಲಿದ್ದಾರೆ. ಉಭಯ ಭಾಷಾ ಅನುವಾದಕಿ ಎಂ.ಜಿ. ಶುಭಮಂಗಳ ಅವರು ಸಂವಾದ ಆರಂಭಿಸಿ, ಮೊದಲ ಪ್ರತಿಕ್ರಿಯೆ ನೀಡುವರು.

ತೆಲುಗು ಹಾಗೂ ಕನ್ನಡ ಭಾಷೆಗಳು ಪರಸ್ಪರ ಹೊಕ್ಕು ಬಳಕೆಯ ಸಾಂಸ್ಕೃತಿಕ ಸಂಬಂಧ ಹೊಂದಿವೆ. ಗಡಿನಾಡಿನ ಪ್ರದೇಶಗಳಲ್ಲಿ ತೆಲುಗು ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಪ್ರಭುತ್ವವಿದ್ದು ದ್ವಿಭಾಷಾ ಕೃತಿ ರಚನಕಾರರು ಹಲವರಿದ್ದಾರೆ. ಹಿಂದಿನ ತಲೆಮಾರಿನವರಂತೆ ಇಂದಿನ ತಲೆಮಾರಿನ ಪ್ರಮುಖ ಹೊಸ ಬರಹಗಾರರು ಕೂಡ ಕನ್ನಡ–ತೆಲುಗು ಸಂಬಂಧಗಳನ್ನು ತಮ್ಮ ಕೃತಿಗಳಲ್ಲಿ ತೋರಿಸಿಕೊಟ್ಟಿದ್ದಾರೆ. ಕೆ.ವೈ. ನಾರಾಯಣಸ್ವಾಮಿ ಅವರ ‘ಕೈವೇರ ನಾರಾಯಣ’ ಎಂಬ ನಾಟಕ ಕನ್ನಡ–ತೆಲುಗು ಭಾಷೆ–ಸಂಸ್ಕೃತಿಗಳ ಸಂಬಂಧಗಳಿಗೆ ಇತ್ತೀಚಿನ ಉತ್ತಮ ಉದಾಹರಣೆ.

ಸ. ರಘುನಾಥ, ಮಾರ್ಕಾಂಡಪುರಂ ಶ್ರೀನಿವಾಸ ಹಾಗೂ ಎಂ.ಜಿ. ಶುಭಮಂಗಳ ಹಲವು ಕೃತಿಗಳನ್ನು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಸ್ವತಃ ಪ್ರಗತಿಪರ ಬರಹಗಾರರಾದ ಸ.ರಘುನಾಥ ತೆಲುಗಿನ ಪ್ರಮುಖ ಕೃತಿಗಳ ಕನ್ನಡ ಅನುವಾದ, ಅವುಗಳ ಪ್ರಭಾವ ಹಾಗೂ ಸಾಂಸ್ಕೃತಿಕ ಅನುಸಂಧಾನಗಳ ಕುರಿತಾಗಿ ಮಾತನಾಡಲಿರುವರು.

ಸ್ಥಳ: ಕಾನ್ಫರೆನ್ಸ್ ಹಾಲ್, ಕೇಂದ್ರ ಸಾಹಿತ್ಯ ಅಕಾಡೆಮಿ, ದಕ್ಷಿಣ ಪ್ರಾದೇಶಿಕ ಕಚೇರಿ, ಸೆಂಟ್ರಲ್ ಕಾಲೇಜು ಆವರಣ, ಅಂಬೇಡ್ಕರ್ ವೀದಿ, ಶುಕ್ರವಾರ ಸಂಜೆ 5.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.