ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಲೋಕ ಸಂಕ್ರಾಂತಿ ಸ್ಪರ್ಧೆ: ಕಥೆಗಳ ಆಹ್ವಾನ

Published 29 ಜುಲೈ 2023, 15:49 IST
Last Updated 29 ಜುಲೈ 2023, 15:49 IST
ಅಕ್ಷರ ಗಾತ್ರ

ಬೆಂಗಳೂರು: ವೀರಲೋಕ ಪ್ರತಿಷ್ಠಾನವು ‘ಕಥಾ ಸಂಕ್ರಾಂತಿ 2024’ ಸ್ಪರ್ಧೆಗೆ ಕಥೆಗಳನ್ನು ಆಹ್ವಾನಿಸಿದೆ.

ಸ್ಪರ್ಧೆಗೆ ಮೊದಲ ಬಹುಮಾನ ₹ 55 ಸಾವಿರ, ದ್ವಿತೀಯ ಬಹುಮಾನ ₹ 30 ಸಾವಿರ ಹಾಗೂ ತೃತೀಯ ಬಹುಮಾನ ₹ 20 ಸಾವಿರ ನಿಗದಿಪಡಿಸಲಾಗಿದೆ. ಈ  ಕಥಾ ಸ್ಪರ್ಧೆಯ ಸಂಪಾದಕತ್ವವನ್ನು ಕಥೆಗಾರ ಕೇಶವ ಮಳಗಿ ವಹಿಸಿಕೊಂಡಿದ್ದಾರೆ.

ಮೂರು ಬಹುಮಾನಿತ ಮತ್ತು ತೀರ್ಪುಗಾರರು ಮೆಚ್ಚಿದ ಏಳು ಕಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತದೆ. ಹತ್ತೂ ಕಥೆಗಳನ್ನು ಇಂಗ್ಲಿಷ್ ಮತ್ತು ಇನ್ನೆರಡು ದ್ರಾವಿಡ ಭಾಷೆಗಳಿಗೆ ಅನುವಾದಿಸಿ, ಏಕಕಾಲದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ. 

ಸ್ಪರ್ಧೆಗೆ ವಯಸ್ಸಿನ ಮಿತಿಯಿಲ್ಲ. ಮೂರು ಸಾವಿರ ಪದಗಳ ಮಿತಿಯಲ್ಲಿ ಕಥೆಗಳನ್ನು ಬರೆಯಬೇಕು. ಮೊದಲ ಬಹುಮಾನಕ್ಕೆ ಅರ್ಹ ಕಥೆಗಳಿಲ್ಲವೆಂದು ತೀರ್ಪುಗಾರರು ನಿರ್ಣಯಿಸಿದರೆ, ಬಹುಮಾನವನ್ನು ಹಂಚಿಕೆ ಮಾಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವವರು ಈವರೆಗೆ ಕಥಾ ಸಂಕಲನ ಪ್ರಕಟಿಸಿರಬಾರದು.

ಕಥೆಗಾರರ ಹೆಸರು, ವಿಳಾಸ ಹಾಗೂ ದೂರವಾಣಿ ವಿವರವನ್ನು ಪ್ರತ್ಯೇಕ ಹಾಳೆಯಲ್ಲಿ ಬರೆಯಬೇಕು. ಸ್ಪರ್ಧೆಗೆ ಕಥೆಯ ಸಾಫ್ಟ್‌ ಪ್ರತಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಕಥೆಗಳನ್ನು ಕಳುಹಿಸಲು ಸೆ.5 ಕೊನೆಯ ದಿನವಾಗಿದ್ದು, ಕಥೆಗಳನ್ನು veeralokakathasankranti@gmail.com ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ. 

ಸಂಪರ್ಕಕ್ಕೆ: 7022122121

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT