ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೇಯಾ ಘೋಷಾಲ್‌ ಸಂಗೀತ ಸಂಜೆ ಇಂದು

Published 10 ಮೇ 2024, 23:21 IST
Last Updated 10 ಮೇ 2024, 23:21 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಈ ವಾರಾಂತ್ಯ ಬಾಲಿವುಡ್‌ನ ಪ್ರಸಿದ್ಧ ಗಾಯಕಿ ಶ್ರೇಯಾ ಘೋಷಾಲ್‌ ಅವರು ಹಾಡಿನ ಮೂಲಕ ಸಂಗೀತಪ್ರಿಯರಿರನ್ನು ರಂಜಿಸಲಿದ್ದಾರೆ. ‘ಕ್ವೀನ್‌ ಆಫ್‌ ಮೆಲೋಡಿ’ ಎಂದೇ ಖ್ಯಾತರಾಗಿರುವ ಗಾಯಕಿ ಶ್ರೇಯಾ ಘೋಷಾಲ್‌ ಅವರಿಂದ ಮೇ 11ರಂದು ಕಾರ್ಯಕ್ರಮ ನಡೆಯಲಿದೆ. ಈ ಸಂಗೀತ ಸಂಜೆಯನ್ನು ಡಾ. ಚೇತನಾ ಆರ್.ಎಸ್‌ ಅವರ ಕಲಾಲುಹ ಮತ್ತು ರೆಡ್‌ಎಫ್‌ಎಂ ಸಹಭಾಗಿತ್ವದಲ್ಲಿ ನಡೆಯಲಿದೆ. ದಿಶಾ ಹ್ಯಾಬಿಟೇಟ್‌ ಈ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿದ್ದು, ಲೈವ್‌ಕನ್ಸರ್ಟ್‌ಗೆ ಬೃಹತ್‌ವೇದಿಕೆ ಸಿದ್ದಗೊಂಡಿದೆ. 

ಕಾರ್ಯಕ್ರಮ ನಡೆಯುವ ಸ್ಥಳ: ನಗರದ ನ್ಯೂ ಹಾರಿಜನ್‌ ಕಾಲೇಜ್ ಆಫ್‌ ಎಂಜಿನಿಯರಿಂಗ್‌, ಬೆಳ್ಳಂದೂರು, ಔಟರ್‌ ರಿಂಗ್‌ ರೋಡ್‌.

ಸಪ್ತಕ ಬೆಂಗಳೂರು 19ನೇ ವಾರ್ಷಿಕ ಸಂಗೀತ ಉತ್ಸವದ ಪ್ರಯುಕ್ತ ಇದೇ ಭಾನುವಾರ (ಮೇ.12)ಸಂಗೀತ ಸಂಭ್ರಮ ಹಮ್ಮಿಕೊಂಡಿದೆ. ಅತಿಥಿಗಳಾಗಿ ಧರಿಣಿದೇವಿ ಮಾಲಗತ್ತಿ ಭಾಗವಹಿ ಸಲಿದ್ದಾರೆ.  ಗಾಯನ:ವಿದುಷಿ ರುಚಿರಾ ಪಾಂಡಾ, ತಬಲಾ: ಪಂಡಿತ್‌ ರಾಜೇಂದ್ರ ನಾಕೋಡ, ಪಂಡಿತ್‌ ಯೋಗೀಶ ಸಂಸಿ, ಹಾರ್ಮೋನಿಯಂ: ಪಂಡಿತ್‌ ವ್ಯಾಸಮೂರ್ತಿ ಕಟ್ಟಿ, ತನ್ಮಯ ದೇವಚಕೆ ಅವರು ನಡೆಸಿಕೊಡಲಿದ್ದಾರೆ. 

ಸ್ಥಳ: ಚೌಡಯ್ಯ ಸ್ಮಾರಕ ಸಭಾ ಭವನ, ವೈಯಾಲಿಕಾವಲ್. ಸಂಜೆ 5.30ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT