ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣ ಆರೈಕೆಯ ಧ್ವನಿ ಕೇಂದ್ರ ಆರಂಭ

Last Updated 29 ಜುಲೈ 2021, 19:29 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಫ್ರೇಜರ್‌ ಟೌನ್‌ನಲ್ಲಿ ಶ್ರವಣ ಆರೈಕೆಯ ಧ್ವನಿ ಕೇಂದ್ರವು ಗುರುವಾರದಿಂದ ಕಾರ್ಯಾರಂಭ ಮಾಡಿತು. ನಗರದಲ್ಲಿ ಆರಂಭವಾಗಿರುವ ವಿಶ್ವದರ್ಜೆಯ ಮೊದಲ ಧ್ವನಿ ಕೇಂದ್ರ ಇದು.

ವೈಡೆಕ್ಸ್‌ ಇಂಡಿಯಾದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಅವಿನಾಶ್ ಪವಾರ್, ‘ಈ ಕೇಂದ್ರವು ಶಾಬ್ದಿಕ ತಾಣದ ಪರಿಕರಗಳ ಸುಸಜ್ಜಿತ ಸೌಲಭ್ಯಗಳನ್ನು ಹೊಂದಿದೆ. ಇಲ್ಲಿ ಬಳಕೆದಾರರು ಶಬ್ದಗಳ ಸಂಪರ್ಕ ಮತ್ತು ಸ್ಪಷ್ಟತೆಯನ್ನು ಅನುಭವಿಸಬಹುದು. ಶೂನ್ಯ ವಿಳಂಬ ತಂತ್ರಜ್ಞಾನದೊಂದಿಗೆ ಶುದ್ಧ ಮತ್ತು ನೈಸರ್ಗಿಕ ಧ್ವನಿಯನ್ನು ತಲುಪಿಸುವ ಸಾಧನಗಳು ಇಲ್ಲಿವೆ’ ಎಂದರು.

ಕಾರ್ಟಿ ಸೌಂಡ್ ಸೆಂಟರ್ ನಿರ್ದೇಶಕ ಕೆ.ಡಿ. ರಾಜೇಶ್‌, ‘ಶ್ರವಣ ನಷ್ಟವು ಯಾರಿಗಾದರೂ, ಯಾವ ವಯಸ್ಸಿನಲ್ಲಿ ಬೇಕಾದರೂ ಸಂಭವಿಸಬಹುದು. ಆದರೆ, ಅದು ಸಾಮಾನ್ಯ ಜೀವನ ನಡೆಸಲು ತೊಂದರೆಯಾಗಬಾರದು. ಈ ಕೇಂದ್ರದಲ್ಲಿರುವ ಆಧುನಿಕ ತಂತ್ರಜ್ಞಾನದ ಸಾಧನಗಳು ಜನರ ಶ್ರವಣ ಸಾಮರ್ಥ್ಯವನ್ನು ಸುಧಾರಿಸುತ್ತವೆ’ ಎಂದರು.

ಮಾಜಿ ಕ್ರಿಕೆಟಿಗ ಸೈಯದ್‌ ಕೀರ್ಮಾನಿ ಕೇಂದ್ರವನ್ನು ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT