ಬೆಂಗಳೂರು: ಕೇಂದ್ರ ಸರ್ಕಾರದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದ ಅಡಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ‘ವಿಕಸಿತ ಭಾರತ ಯೂತ್ ಪಾರ್ಲಿಮೆಂಟ್' ವಿಷಯ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಿದೆ.

ಈ ಭಾಷಣ ಸ್ಪರ್ಧೆಯಲ್ಲಿ 18 ರಿಂದ 25 ವರ್ಷ ವಯೋಮಾನದ ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಬಹುದು.

ಆಸಕ್ತ ವಿದ್ಯಾರ್ಥಿಗಳು 'ನಿಮ್ಮ ವ್ಯಾಖ್ಯಾನದಲ್ಲಿ ವಿಕಸಿತ ಭಾರತದ ಅರ್ಥವೇನು' ಎಂಬ ವಿಷಯದ ಕುರಿತು ಒಂದು ನಿಮಿಷ ವಿಡಿಯೋವನ್ನು ‘ಮೈ ಭಾರತ್(My Bharath)’ ಪೋರ್ಟಲ್ನಲ್ಲಿ ಮಾರ್ಚ್ 9 ರ ಮಧ್ಯರಾತ್ರಿ ಒಳಗೆ ಅಪ್ಲೋಡ್ ಮಾಡಬಹುದು.

ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೊಗಳ ಪೈಕಿ ಮೂರು ಜಿಲ್ಲೆಗಳಿಂದ 150 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳು ಮಾರ್ಚ್ 15ರಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ.ಹೆಚ್.ಎನ್.ಸಭಾಂಗಣದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಯೂತ್ ಪಾರ್ಲಿಮೆಂಟ್ನಲ್ಲಿ ಭಾಗವಹಿಸಬಹುದಾಗಿದೆ. ಜಿಲ್ಲಾ ಮಟ್ಟದ ಯೂತ್ ಪಾರ್ಲಿಮೆಂಟ್ನಲ್ಲಿ ಆಯ್ಕೆಯಾದ 10 ವಿದ್ಯಾರ್ಥಿಗಳಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಯೂತ್ ಪಾರ್ಲಿಮೆಂಟ್ನಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.

https://mybharat.gov.in/pages/yuva_register – ಈ ಲಿಂಕ್ ಮೂಲಕ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಯೂತ್ ಪಾರ್ಲಿಮೆಂಟ್ನಲ್ಲಿ ಭಾಗವಹಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.