ಬೆಂಗಳೂರು: ಶ್ರೀ ಚೈತನ್ಯ ಅಕಾಡೆಮಿ ವತಿಯಿಂದ ಎಚ್ಎಸ್ಆರ್ ಲೇಔಟ್ ಹಾಗೂ ಯಲಹಂಕದಲ್ಲಿ ‘ಟೆಸ್ಟ್ ಪ್ರೆಪ್ ಸೆಂಟರ್’ ಆರಂಭಿಸಲಾಗಿದೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕೇಂದ್ರಗಳನ್ನು ಉದ್ಘಾಟಿಸಿದರು. ವೃತ್ತಿಪರ ಶಿಕ್ಷಣದ ಪ್ರವೇಶ ಪರೀಕ್ಷೆಗಳಾದ ಜೆಇಇ ಮೇನ್, ಜೆಇಇ ಅಡ್ವಾನ್ಸ್ಡ್ ಮತ್ತು ನೀಟ್ಗಳಿಗೆ ಅತ್ಯುನ್ನತ ಗುಣಮಟ್ಟದಲ್ಲಿ ಸಿದ್ಧಗೊಳ್ಳಲು ವಿದ್ಯಾರ್ಥಿಗಳಿಗೆ ಈ ಕೇಂದ್ರಗಳು ನೆರವಾಗಲಿವೆ.

‘ಶ್ರೀ ಚೈತನ್ಯ 40 ವರ್ಷಗಳಿಂದ ಶಿಕ್ಷಣದ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಆಕಾಂಕ್ಷಿಗಳಿಗೆ ವೇದಿಕೆಯಾಗಿದೆ. 2023ರಲ್ಲಿ ನಾವು ಐತಿಹಾಸಿಕ ಯಶಸ್ಸು ಸಾಧಿಸಿ, ಜೆಇಇ ಮೇನ್, ಜೆಇಇ ಅಡ್ವಾನ್ಸ್ಡ್ ಮತ್ತು ನೀಟ್ಗಳಲ್ಲಿ ಅಖಿಲ ಭಾರತದ ರ್ಯಾಂಕ್ನಲ್ಲಿ(ಎಐಆರ್) ಮೊದಲ ಸ್ಥಾನಗಳಿಸಿದ್ದೆವು. ಈಗ ಎರಡು ‘ಟೆಸ್ಟ್ ಪ್ರೆಪ್ ಸೆಂಟರ್’ ಪ್ರಾರಂಭಿಸುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ಶಿಕ್ಷಣ ನೀಡಲಿದ್ದೇವೆ’ ಎಂದು ಶ್ರೀ ಚೈತನ್ಯ ಗ್ರೂಪ್ನ ಸಿಇಒ, ನಿರ್ದೇಶಕಿ ಸುಷ್ಮಾ ಬೊಪ್ಪಣ ತಿಳಿಸಿದರು.

‘ವೈಯಕ್ತಿಕ ಮಾರ್ಗದರ್ಶನ, ಅತ್ಯುನ್ನತ ತಂತ್ರಜ್ಞಾನ ಹಾಗೂ ಕೇಂದ್ರೀಕೃತ ಶೈಕ್ಷಣಿಕ ಮಾದರಿಯಿಂದ ‘ಬಚ್ಚಾ ಸೀಖಾ ಕಿ ನಹಿ’ ಎಂಬ ನಮ್ಮ ಗುರಿಯೊಂದಿಗೆ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ’ ಎಂದು ಶ್ರೀ ಚೈತನ್ಯದ ಇನ್ಫಿನಿಟ್ ಲರ್ನ್ನ ಸಂಸ್ಥಾಪಕ ಸಿಇಒ ಉಜ್ವಲ್ ಸಿಂಗ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.