ಬೆಂಗಳೂರು: ‘ಮಹದೇವಪುರ ವಲಯ ವ್ಯಾಪ್ತಿಯಲ್ಲಿರುವ ಶ್ರೀಸಾಯಿ ಲೇಔಟ್ ಜಲಾವೃತವಾಗುವುದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯಕ್ತ ಎಂ.ಮಹೇಶ್ವರ ರಾವ್ ಭರವಸೆ ನೀಡಿದರು.

ನಗರದಲ್ಲಿ ಶನಿವಾರ ಸುರಿದ ಮಳೆಯಿಂದಾಗಿ ಜಲಾವೃತಗೊಂಡಿದ್ದ ಶ್ರೀಸಾಯಿ ಲೇಔಟ್, ಮಾನ್ಯತಾ ಟೆಕ್ ಪಾರ್ಕ್ ಮತ್ತು ನಾಗವಾರ ಜಂಕ್ಷನ್ ದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಶ್ರೀಸಾಯಿ ಲೇಔಟ್ ಪ್ರದೇಶವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಭಿವೃದ್ಧಿಪಡಿಸಿದೆ. ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಈ ಲೇಔಟ್ ರಾಜಕಾಲುವೆಗಿಂತ ತುಂಬ ತಗ್ಗಿನಲ್ಲಿದೆ. ಇದೇ ಕಾರಣಕ್ಕೆ ಪ್ರತಿ ಬಾರಿ ಮಳೆ ಬಂದಾಗ ಜಲಾವೃತವಾಗುತ್ತಿದೆ. ಜೊತೆಗೆ ರಾಜಕಾಲುವೆ ಹಾದುಹೋಗುವ ಜಾಗದಲ್ಲಿರುವ ರೈಲ್ವೆ ವೆಂಟ್ ಸಣ್ಣದಾಗಿದೆ. ಇದರಿಂದ ನೀರು ಸರಾಗವಾಗಿ ಹರಿದು ಹೋಗಲು ಸಮಸ್ಯೆಯಾಗುತ್ತಿದೆ’ ಎಂದು ವಿವರಿಸಿದರು.

‘ಈಗಾಗಲೇ ರೈಲ್ವೆ ಇಲಾಖೆ ಜೊತೆ ಸಮನ್ವಯ ಸಾಧಿಸಿ ರೈಲ್ವೆವೆಂಟ್ ವಿಸ್ತರಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಅದನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

ಲೇಔಟ್ ಪರಿಶೀಲನೆ ವೇಳೆ ಸ್ಥಳೀಯರಿಂದ ಅಹವಾಲು ಆಲಿಸಿದ ಮಹೇಶ್ವರರಾವ್, ‘ಮಳೆಗಾಲ ಮುಗಿಯುವವರೆಗೂ ತಾತ್ಕಾಲಿಕವಾಗಿ ಸಂಪ್ ನಿರ್ಮಿಸಿ, ಅಲ್ಲಿ ತುಂಬುವ ನೀರನ್ನು ಹೊರ ಹಾಕಲು ಪಂಪ್ ಸೆಟ್ ವ್ಯವಸ್ಥೆ ಮಾಡುತ್ತೇವೆ. ಅದನ್ನು ನಿರ್ವಹಿಸಲು ಒಂದು ತಂಡವನ್ನೂ ನಿಯೋಜಿಸಲಾಗುವುದು. ನೀರು ನುಗ್ಗಿರುವ ಮನೆಗಳನ್ನು ಗುರುತಿಸಿ, ವಿಪತ್ತು ನಿರ್ವಹಣೆ ಅಡಿ ಪರಿಹಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಮಹದೇವಪುರ ವಲಯ ಆಯುಕ್ತ ರಮೇಶ್, ಯಲಹಂಕ ವಲಯ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿಮ್, ಕಾರ್ಯಪಾಲಕ ಎಂಜಿನಿಯರ್ಗಳು, ಪಾಲಿಕೆ ಹಾಗೂ ಮೆಟ್ರೊ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.

ಟ್ರ್ಯಾಕ್ಟರ್ ಏರಿ ಲೇಔಟ್ ವೀಕ್ಷಣೆ

ಸಾಯಿ ಲೇಔಟ್ನಲ್ಲಿ ಜಲಾವೃತ ಆಗಿರುವ ಪ್ರದೇಶವನ್ನು ಮಹೇಶ್ವರರಾವ್ ಅವರು ಟ್ರ್ಯಾಕ್ಟರ್ನಲ್ಲಿ ಕುಳಿತು ಪರಿಶೀಲನೆ ನಡೆಸಿದರು. ಎಲ್ಲೆಲ್ಲಿ ನೀರು ನಿಂತಿದೆಯೋ ಅದನ್ನೆಲ್ಲಾ ಪಂಪ್ಗಳ ಮೂಲಕ ತ್ವರಿತವಾಗಿ ನೀರು ಹೊರ ಹಾಕುವ ವ್ಯವಸ್ಥೆ ಮಾಡಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಮಾನ್ಯತಾ ಟೆಕ್ ಪಾರ್ಕ್

ಮಾನ್ಯತಾ ಟೆಕ್ ಬಳಿ ಬರುವ ಮಾನ್ಫೋ ಹತ್ತಿರದ ರಾಜಕಾಲುವೆ ಸಂಪರ್ಕ ಸರಿಯಾಗಿಲ್ಲದ ಕಾರಣ ಜಲಾವೃತವಾಗುತ್ತದೆ. ಈ ಸಂಬಂಧ ಹೊಸದಾಗಿ ಮಳೆ ನೀರುಗಾಲುವೆ ನಿರ್ಮಾಣ ಮಾಡಲು ಮಾನ್ಯತಾ ಇ.ಬಿ.ಸ್ ಐಟಿ ಪಾರ್ಕ್ ಮ್ಯಾನ್ಫೊ ಕಾರ್ಲೆ ಇನ್ಫಾಟೆಕ್ ಕಂಪನಿಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಮಹೇಶ್ವರರಾವ್ ಸೂಚಿಸಿದರು. ನಾಗವಾರ ಜಂಕ್ಷನ್ ನಾಗವಾರ ಜಂಕ್ಷನ್ ಬಳಿ ಮೆಟ್ರೊ ಕಾಮಗಾರಿ ನಡೆಯುತ್ತಿದೆ. ಮಳೆ ಬಂದಾಗ ಇಲ್ಲಿ ಜಲಾವೃತವಾಗುವುದನ್ನು ತಪ್ಪಿಸಲು ಮಳೆ ನೀರುಗಾಲುವೆಯನ್ನು ನಿರಂತರವಾಗಿ ಸ್ವಚ್ಛವಾಗಿಟ್ಟುಕೊಳ್ಳುವಂತೆ ಮೆಟ್ರೊ ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಸೂಚಿಸಿದರು. ಜೊತೆಗೆ ‘ಹೈಡೆನ್ಸಿಟಿ ಕಾರಿಡಾರ್’ ಕಾಮಗಾರಿ ಪ್ರಗತಿಯಲ್ಲಿದ್ದು ಇದರಿಂದ ಕ್ರಾಸ್ ಕಲ್ವರ್ಟ್ ಕಾಮಗಾರಿ ಮಾಡುವಂತೆಯೂ ತಿಳಿಸಿದರು. ಥಣಿಸಂದ್ರದ ಬಳಿಯ ಮಳೆ ನೀರುಗಾಲುವೆಯಿಂದ ಈಗಾಗಲೇ 20 ಲೋಡ್ ಹೂಳನ್ನು ತೆರವುಗೊಳಿಸಲಾಗಿದೆ. ಬಾಕಿಯಿರುವ ಹೂಳನ್ನೂ ಶೀಘ್ರ ತೆರವುಗೊಳಿಸಬೇಕು. ಮಳೆ ನೀರುಗಾಲುವೆ ಮೇಲೆ ಸ್ಲ್ಯಾಬ್ಗಳನ್ನು ಅಳಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.