ಬೆಂಗಳೂರು: ಬಿಬಿಎಂಪಿಯ 33 ಪ್ರೌಢಶಾಲೆಗಳಲ್ಲಿ 78 ವಿದ್ಯಾರ್ಥಿ ಗಳು 2024–25ನೇಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಗಳಿಸಿದ್ದಾರೆ. ಮೂವರು ವಿದ್ಯಾರ್ಥಿನಿಯರು ಶೇಕಡ 95ಕ್ಕೂ ಹೆಚ್ಚು ಅಂಕಪಡೆದುಕೊಂಡಿದ್ದಾರೆ.

ಬಸವನಗುಡಿ ಪ್ರೌಢಶಾಲೆಯು ಶೇ 100ರಷ್ಟು ಫಲಿತಾಂಶ ಸಾಧಿಸಿದ್ದು, ಪರೀಕ್ಷೆ ಬರೆದ 19 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ಶಾಂತಿನಗರ ಪ್ರೌಢಶಾಲೆಯಲ್ಲಿ 9 ವಿದ್ಯಾರ್ಥಿಗಳಲ್ಲಿ ಎಂಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ 88.89ರಷ್ಟು ಫಲಿತಾಂಶ ದಾಖಲಾಗಿದೆ.

ಶ್ರೀರಾಮಪುರ ಪ್ರೌಢಶಾಲೆ ಶೇ 86.21, ಭೈರವೇಶ್ವರನಗರ ಪ್ರೌಢಶಾಲೆ ಶೇ 85.53, ಮತ್ತಿಕೆರೆ ಪ್ರೌಢಶಾಲೆ ಶೇ 80.37ರಷ್ಟು ಫಲಿತಾಂಶ ಪಡೆದುಕೊಂಡಿದೆ. ಕಾಕ್ಸ್ಟೌನ್ ಪ್ರೌಢಶಾಲೆಯ 10 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಶೂನ್ಯ ಫಲಿತಾಂಶ ದಾಖಲಿಸಿದೆ.

ಹೇರೋಹಳ್ಳಿ ಪ್ರೌಢಶಾಲೆಯಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 266 ವಿದ್ಯಾರ್ಥಿಗಳಲ್ಲಿ 161 ವಿದ್ಯಾರ್ಥಿಗಳು ಉತ್ತೀರ್ಣರಾಗಿರಿದ್ದಾರೆ.

ಭೈರವೇಶ್ವರನಗರ ಪ್ರೌಢಶಾಲೆಯಲ್ಲಿ 235ರಲ್ಲಿ 201, ಶಕ್ತಿಗಣಪತಿ ನಗರ ಪ್ರೌಢಶಾಲೆಯಲ್ಲಿ 206ರಲ್ಲಿ 127 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಭೈರವೇಶ್ವರ ನಗರ ಪ್ರೌಢಶಾಲೆಯ 17, ಶಕ್ತಿಗಣಪತಿ ನಗರ ಪ್ರೌಢಶಾಲೆಯ 12, ಮತ್ತಿಕೆರೆ ಪ್ರೌಢಶಾಲೆಯ 10, ವಿಜಯನಗರ, ಹೇರೋಹಳ್ಳಿ ಪ್ರೌಢಶಾಲೆಯ ತಲಾ ಏಳು, ಗಂಗಾನಗರ, ಲಗ್ಗೆರೆ ಪ್ರೌಢಶಾಲೆಯ ತಲಾ ಆರು, ಶ್ರೀರಾಮಪುರ ಪ್ರೌಢಶಾಲೆಯ ನಾಲ್ಕು, ಪಾದರಾಯನಪುರ ಪ್ರೌಢಶಾಲೆಯ ಮೂರು, ಕಾಟನ್ಪೇಟೆ ಪ್ರೌಢಶಾಲೆಯ ಇಬ್ಬರು, ಬಸವನಗುಡಿ, ಕಸ್ತೂರಬಾ ನಗರ, ಜಯಮಹಲ್, ಜೋಗುಪಾಳ್ಯ ಪ್ರೌಢಶಾಲೆಯ ತಲಾ ಒಬ್ಬ ವಿದ್ಯಾರ್ಥಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಹೇರೋ ಹಳ್ಳಿ ಪ್ರೌಢಶಾಲೆಯ ಶಾಲಿನಿ ಬಿ.ಆರ್ ಅವರು 625ಕ್ಕೆ 614 ಅಂಕಗಳನ್ನು (ಶೇ 98.24ರಷ್ಟು) ಪಡೆದು, ಬಿಬಿಎಂಪಿ ಶಾಲೆಗಳಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ. ಶ್ರೀರಾಮಪುರ ಪ್ರೌಢಶಾಲೆಯ ರಾಜೇಶ್ವರಿ ಡಿ. ಅವರು 610 ಅಂಕ (ಶೇ 97.60), ಜಯಮಹಲ್ ಪ್ರೌಢಶಾಲೆಯ ಜೈನಬ್ ಫಿರ್ದೋಸ್ ಖಾನಂ ಅವರು 606 (ಶೇ 96.96) ಅಂಕ ಪಡೆದಿದ್ದಾರೆ.

ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 78 ವಿದ್ಯಾರ್ಥಿಗಳಿಗೆ ಪಾಲಿಕೆ ವತಿಯಿಂದ ₹25 ಸಾವಿರ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುವುದು ಎಂದು ಬಿಬಿಎಂಪಿಯ ಶಿಕ್ಷಣ ವಿಭಾಗದ ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.