ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಕಲುಷಿತಗೊಂಡರೆ ವಿನಾಶ: ಎಸ್.ಟಿ.ಸೋಮಶೇಖರ್

Last Updated 5 ಜೂನ್ 2020, 19:45 IST
ಅಕ್ಷರ ಗಾತ್ರ

ರಾಜರಾಜೇಶ್ವರಿ ನಗರ: ‘ಕೊಳಚೆ ನೀರು ಸೇರಿ ಕೆರೆ ಕಲುಷಿತಗೊಂಡು ಪ್ರಾಣಿ, ಪಕ್ಷಿ, ಜನರ ಆರೋಗ್ಯ ಹದಗೆಡುತ್ತಿದೆ. ಅಲ್ಲದೆ, ಜಲಚರ ಪ್ರಾಣಿಗಳೂ ವಿನಾಶದ ಹಂತ ತಲುಪುತ್ತಿವೆ. ಕೆರೆಗಳನ್ನು ರಕ್ಷಿಸದೇ ಇದ್ದಲ್ಲಿ ಪ್ರಕೃತಿಯನ್ನೇ ಕಳೆದುಕೊಳ್ಳುವ ಹಂತಕ್ಕೆ ನಾವು ತಲುಪಬೇಕಾಗುತ್ತದೆ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ತಾವರೆಕೆರೆಯಲ್ಲಿರುವ ಗಂಗಮ್ಮ ಕೆರೆಯನ್ನು ₹5ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳ ಅಭಿವೃದ್ಧಿ ಜೊತೆಗೆ, ಅವುಗಳ ಸುತ್ತ–ಮುತ್ತವಿವಿಧ ತಳಿಯ ಔಷಧಿ ಗಿಡಗಳು, ಹಣ್ಣು, ಹೂವು ಬಿಡುವ ಮರಗಳನ್ನು ಬೆಳಸಲಾಗುವುದು’ ಎಂದರು.

ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಸಮಾಜ ಸೇವಕ ಎಸ್.ಟಿ.ಕುಬೇರಸ್ವಾಮಿ, ಟಿ.ಎ.ಪಿ.ಎಂ.ಎಸ್ ಮಾಜಿ ಅಧ್ಯಕ್ಷ ಟಿ.ವಿ.ಸಿದ್ದಪ್ಪ, ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎನ್.ಕೃಷ್ಣಮೂರ್ತಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಎಸ್.ಕುಂಬಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT