ಮಂಗಳವಾರ, ಜೂನ್ 15, 2021
20 °C

ಆರೈಕೆ ಕೇಂದ್ರಗಳಲ್ಲಿ ಆಮ್ಲಜನಕ ಹಾಸಿಗೆ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ನಗರದಲ್ಲಿರುವ ಕೋವಿಡ್ ಆರೈಕೆ ಕೇಂದ್ರಗಳು ಹಾಗೂ ಪಾಲಿಕೆಯ ಹೆರಿಗೆ ಆಸ್ಪತ್ರೆಗಳನ್ನು ‘ಸ್ಥಿರೀಕರಣ ಕೇಂದ್ರ’ಗಳನ್ನಾಗಿ ಪರಿವರ್ತಿಸಲಾಗಿದ್ದು, ಇಲ್ಲಿ ಆಮ್ಲಜನಕ ಸಿಲಿಂಡರ್‌ ವ್ಯವಸ್ಥೆ ಹಾಗೂ ಆಮ್ಲಜನಕ ಕಾನ್ಸ್‌ಂಟ್ರೇಟರ್‌ಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

‘ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಒಟ್ಟು 531 ಹಾಗೂ ಹೆರಿಗೆ ಆಸ್ಪತ್ರೆಗಳಲ್ಲಿ 254 ಹಾಸಿಗೆಗಳಿಗೆ ಆಮ್ಲಜನಕ ವ್ಯವಸ್ಥೆ ಕಲ್ಪಿಸಲಾಗುತ್ತದೆ’ ಎಂದು ಬಿಬಿಎಂಪಿ ಹೇಳಿದೆ.

ಹೆರಿಗೆ ಆಸ್ಪತ್ರೆಗಳಲ್ಲಿ ಈಗಾಗಲೇ 166 ಹಾಸಿಗೆಗಳಿಗೆ ಆಮ್ಲಜನಕ ಸಿಲಿಂಡರ್‌ಗಳ ವ್ಯವಸ್ಥೆ ಹಾಗೂ 15 ಹಾಸಿಗೆಗಳಿಗೆ ಆಮ್ಲಜನಕ ಕಾನ್ಸ್‌ಂಟ್ರೇಟರ್‌ಗಳು ಸೇರಿದಂತೆ 181 ಹಾಸಿಗೆಗಳಿಗೆ ಆಮ್ಲಜನಕ ವ್ಯವಸ್ಥೆ ಮಾಡಲಾಗಿದ್ದು, ಇಬ್ಬರು ಆಮ್ಲಜನಕ ವ್ಯವಸ್ಥೆ ಪಡೆಯುತ್ತಿದ್ದಾರೆ. 179 ಆಮ್ಲಜನಕ ಹಾಸಿಗೆಗಳು ಲಭ್ಯವಿರುತ್ತದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅಲ್ಪ ಮತ್ತು ಮಧ್ಯಮ ಪ್ರಮಾಣದ ಲಕ್ಷಣಗಳುಳ್ಳ ಸೋಂಕಿತರ ಚಿಕಿತ್ಸೆಗಾಗಿ ಮತ್ತು ಮನೆಯಲ್ಲಿ ಅಥವಾ ಪ್ರತ್ಯೇಕಕೊಠಡಿ ವ್ಯವಸ್ಥೆ ಇಲ್ಲದವರಿಗಾಗಿ ಪಾಲಿಕೆ 8 ವಲಯಗಳಲ್ಲಿ 14 ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಿ ನಿರ್ವಹಿಸಲಾಗುತ್ತಿರುತ್ತದೆ. ಇದರಲ್ಲಿ ಒಟ್ಟು 2,064 ಹಾಸಿಗೆ ಸಾಮರ್ಥ್ಯ ಇದ್ದು, 410 ಹಾಸಿಗೆಗಳು ಭರ್ತಿಯಾಗಿದೆ.

ಈ ಕೇಂದ್ರಗಳಲ್ಲಿನ ಹಾಸಿಗೆಗಳ ಪೈಕಿ ಕನಿಷ್ಠ ಶೇ.20 ರಷ್ಟು ಆಮ್ಲಜನಕ ಸಹಿತ ಹಾಸಿಗೆಗಳನ್ನಾಗಿ ಪರಿವರ್ತಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ.

ಈ ಕೇಂದ್ರಗಳಲ್ಲಿ  31 ಮಂದಿ ಆಮ್ಲಜನಕ ವ್ಯವಸ್ಥೆ ಪಡೆಯುತ್ತಿದ್ದಾರೆ. 319 ಆಮ್ಲಜನಕ ಹಾಸಿಗೆಗಳು ಲಭ್ಯ ಇವೆ ಎಂದೂ ಬಿಬಿಎಂಪಿ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು