ಸೋಮವಾರ, ಏಪ್ರಿಲ್ 6, 2020
19 °C

‘ಮನೆಯಲ್ಲೇ ಉಳಿಯಿರಿ ಸುರಕ್ಷಿತವಾಗಿರಿ-’ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ವೈರಸ್ ಸೋಂಕು ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಕುರಿತು ಬಿಬಿಎಂಪಿ 'ಮನೆಯಲ್ಲೇ ಉಳಿಯಿರಿ ಸುರಕ್ಷಿತವಾಗಿರಿ' ಅಭಿಯಾನದ ಹಮ್ಮಿಕೊಂಡಿದೆ.

ಪಾಲಿಕೆ ಆಯುಕ್ತ .ಬಿ.ಹೆಚ್. ಅನಿಲ್ ಕುಮಾರ್, ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಪಾಲಿಕೆ ವಿಶೇಷ ಆಯುಕ್ತ (ಯೋಜನೆ ಮತ್ತು ಆರೋಗ್ಯ) ರವಿಕುಮಾರ್‌ ಸುರಪುರ ಹಾಗೂ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಮಂಜುನಾಥ ರಾಜು ಅವರು ಅಭಿಯಾನಕ್ಕೆ ಚಾಲನೆ ನೀಡಿದರು.

ಬಿಬಿಎಂಪಿಯ ಆಧಿಕಾರಿಗಳು ಉಪಯೋಗಿಸುವ ಸುಮಾರು 30 ವಾಹನಗಳ ಮೂಲಕ ಪೂರ್ವ, ಪಶ್ಚಿಮ ದಕ್ಷಿಣ ವಲಯಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು.
ಅನಿಲ್ ಕುಮಾರ್ ಮಾತನಾಡಿ,'ಕರೋನಾ ಸೋಂಕು ಹರಡದಂತೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ವಿದೇಶದಿಂದ ನಗರಕ್ಕೆ ಬಂದಿರುವ ಸುಮಾರು 30,000 ನಾಗರಿಕರನ್ನು ಗುರುತಿಸಿ ಬಿಬಿಎಂಪಿ ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳು ಕೈಮೇಲೆ ಮುದ್ರೆ ಹಾಕಲು ಕ್ರಮ ವಹಿಸಿದ್ದಾರೆ' ಎಂದು ತಿಳಿಸಿದರು.
'ಕರೋನ ನಿಯಂತ್ರಿಸುವ ಸಲುವಾಗಿ ಬಿಬಿಎಂಪಿ ಕೇಂದ್ರ ಕಚೇರಿಯ 6ನೇ ಮಹಡಿಯಲ್ಲಿ ಸನ್ನದ್ಧತಾ ಕೊಠಡಿ (ವಾರ್ ರೂಂ) ಸ್ಥಾಪಿಸಿದ್ದು, ಸೋಮವಾರ ಚಾಲನೆ ನೀಡಲಾಗುವುದು' ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು