ಬೆಂಗಳೂರು: ಸಮಾಜಮುಖಿ ಪ್ರಕಾಶನವು ಹಮ್ಮಿಕೊಂಡಿದ್ದ 2024ನೇ ಸಾಲಿನ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಐದು ಕಥೆಗಳು ಬಹುಮಾನಕ್ಕೆ ಆಯ್ಕೆಯಾಗಿವೆ.

ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಫಲಿತಾಂಶ ಘೋಷಿಸಲಾಯಿತು. ವೀರೇಶ ಶಿವಲಿಂಗಪ್ಪ ಸಜ್ಜನ ಅವರ ‘ಕ್ಯಾನವಾಸ್’, ಹಳೆಮನೆ ರಾಜಶೇಖರ ಅವರ ‘ದೇವರ ತುಪ್ಪ’, ಟಿ.ಆರ್.ಉಷಾರಾಣಿ ಅವರ ‘ಕಾಲವೆಂಬ ಕಬಂಧ ಬಾಹು’, ನಾಗರಾಜ ಕೋರಿ ಅವರ ‘ಶಕುನದ ಚುಕ್ಕಿ’ ಹಾಗೂ ಫೌಝಿಯಾ ಸಲೀಂ ಅವರ ‘ಬಯಾಲಾಜಿಕಲ್ ಫಾದರ್’ ಬಹುಮಾನಿತ ಕಥೆಗಳಾಗಿವೆ. ಈ ಬಹುಮಾನವು ತಲಾ ₹ 5 ಸಾವಿರ ನಗದು ಒಳಗೊಂಡಿದೆ.

ಸಂಪತ್ ಸಿರಿಮನೆ ಅವರ ‘ಗುಂಗಿ’, ಪ್ರವೀಣ್ ಕುಮಾರ್ ಜಿ. ಅವರ ‘ಅಲವಾಟು’, ನಾಗರೇಖಾ ಗಾಂವಕರ ಅವರ ‘ದಣಪೆ ದಾಟಿ’, ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಅವರ ‘ಅಮ್ರಾವತಿಯ ಗಂಡ’, ಅಂದಯ್ಯ ಅರವಟಗಿಮಠ ಅವರ ‘ಹುಚ್ಚೀರನ ಪ್ರೇಮ ಪ್ರಸಂಗ’, ಹೇಮಂತ್ ಲಿಂಗಪ್ಪ ಅವರ ‘ಜಮೀನು’, ಜಹಾನ್ ಆರಾ ಕೋಳೂರು ಅವರ ‘ಜುಲುಸ್’, ಮೈತ್ರೇಯಿಣಿ ಗದಿಗೆಪ್ಪಗೌಡರ ಅವರ ‘ಶಿವದಾರ’, ಅಕ್ಷತಾ ಕೃಷ್ಣಮೂರ್ತಿ ಅವರ ‘ಕುಶಾಲಿ ಮಿರಾಶಿ ಕೇರಾಫ್ ಅಣಶಿ’ ಹಾಗೂ ಅಮರೇಶ ಗಿಣಿವಾರ ಅವರ ‘ಹೆಣ್ಣಕ್ಕಿ’ ಕಥೆಗಳು ಸಮಾಜಮುಖಿ ವಾರ್ಷಿಕ ಕಥಾಸಂಕಲನಕ್ಕೆ ಆಯ್ಕೆಯಾಗಿವೆ.

‘ಸ್ಪರ್ಧೆಯಲ್ಲಿ ಒಟ್ಟು 241 ಕಥೆಗಾರರು ಭಾಗವಹಿಸಿದ್ದರು. ಲೇಖಕ, ವಿಮರ್ಶಕ ರಂಗನಾಥ ಕಂಟನಕುಂಟೆ ಸ್ಪರ್ಧೆಯ ಅಂತಿಮ ಹಂತದ ತೀರ್ಪುಗಾರರಾಗಿದ್ದರು’ ಎಂದು ಪ್ರಕಾಶನದ ಚಂದ್ರಕಾಂತ ವಡ್ಡು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.