ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿಗಳನ್ನು ಕೊಲ್ಲುತ್ತಿರುವ ದುಷ್ಕರ್ಮಿಗಳು

ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿರುವವರಿಂದ ಕೃತ್ಯ ?
Last Updated 24 ಫೆಬ್ರುವರಿ 2021, 21:59 IST
ಅಕ್ಷರ ಗಾತ್ರ

ಬೆಂಗಳೂರು: ಕೆಲವು ದುಷ್ಕರ್ಮಿಗಳು ಬೀದಿನಾಯಿಗಳನ್ನು ಮತ್ತು ಸಾಕುನಾಯಿಗಳನ್ನು ಸಾಯಿಸುತ್ತಿದ್ದಾರೆ ಎಂದು ಚಿಕ್ಕಬೆಳ್ಳಂದೂರು ನಿವಾಸಿಗಳು ಆರೋಪಿಸಿದ್ದಾರೆ.

ಬಡಾವಣೆಯ ಸುತ್ತ–ಮುತ್ತ ಪ್ರಾಣಿಗಳ ಮೂಳೆಗಳು ಮತ್ತು ದೇಹದ ಇನ್ನಿತರೆ ಅಂಗಾಂಗಗಳು ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು, ಕ್ಯೂಪಾದಂತಹ ಪ್ರಾಣಿ ದಯಾ ಸಂಘಗಳ ಗಮನಕ್ಕೂ ತಂದಿದ್ದಾರೆ. ಕ್ಯಾಪಾದ ಸದಸ್ಯ ತೇಜೇಶ್ವರ್‌ ಅವರು ವರ್ತೂರು ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ನಾಯಿಗಳ ಮೂಳೆಗಳು ಬಿದ್ದಿರುವುದನ್ನು ತೋರಿಸಿದ್ದಾರೆ.

‘ಈ ನಾಯಿಗಳನ್ನು ಯಾರು ಸಾಯಿಸಿದ್ದಾರೆ ಎಂಬ ಶಂಕೆ ನಮಗಿದೆಯೋ ಅವರ ಮನೆಯಿಂದ ಕೇವಲ ಐದು ಅಡಿ ದೂರದಲ್ಲಿ ನಾಯಿಗಳ ತಲೆ ಬುರುಡೆ, ಮೂಳೆಗಳು ಬಿದ್ದಿವೆ. ನಾಯಿಗಳನ್ನು ಸಾಯಿಸಿ, ಸುಡಲಾಗಿದೆ. ಆದರೆ, ಬುರುಡೆಗಳು ಸಿಕ್ಕಿವೆ’ ಎಂದು ತೇಜೇಶ್ವರ್ ಹೇಳಿದ್ದು, ಈ ಕುರಿತು ಪೊಲೀಸರಿಗೆ ದೂರನ್ನೂ ನೀಡಿದ್ದಾರೆ. ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

‘ನಾಯಿಗಳ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿರುವ ಮನೆಯಲ್ಲಿ ಏರ್‌ಗನ್ ಪತ್ತೆಯಾಗಿದೆ. ಇದಕ್ಕೆ ಪರವಾನಗಿ ಅಗತ್ಯವಿಲ್ಲ. ನಾಯಿಗಳ ಮೂಳೆಗಳ ಜೊತೆಯಲ್ಲಿ, ಹಂದಿಗಳ ಮೂಳೆಗಳೂ ಪತ್ತೆಯಾಗಿವೆ’ ಎಂದು ವರ್ತೂರು ಠಾಣೆ ಪೊಲೀಸರು ತಿಳಿಸಿದ್ದಾರೆ.

‘ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ಐವರು ಸೇರಿ ಈ ರೀತಿ ಪ್ರಾಣಿಗಳನ್ನು ಕೊಲ್ಲುತ್ತಿದ್ದಾರೆ. ಈ ಪ್ರಾಣಿಗಳ ಮಾಂಸದಿಂದಲೇ ಆಹಾರ ತಯಾರಿಸುತ್ತಿರುವ ಶಂಕೆಯೂ ಇದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT