ಗುರುವಾರ , ಏಪ್ರಿಲ್ 22, 2021
29 °C

ಸುದರ್ಶನ್‌ ಸಿಲ್ಕ್ಸ್‌ನಲ್ಲಿ ವಿಶೇಷ ಉಡುಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮದುವೆ ಹಾಗೂ ಹಬ್ಬದ ಋತುವಿನ ಹಿನ್ನೆಲೆಯಲ್ಲಿ ಮಾರತಹಳ್ಳಿಯಲ್ಲಿರುವ ಸುದರ್ಶನ್‌ ಸಿಲ್ಕ್ಸ್‌ ಮಳಿಗೆಯಲ್ಲಿ ವಿಶೇಷ ಉಡುಪುಗಳು ಲಭ್ಯವಿದ್ದು, ಇವುಗಳ ಮಾರಾಟಕ್ಕೆ ಮಳಿಗೆಯ ಮಾಲೀಕ ಶ್ರೀನಿವಾಸ್‌ ಮಂಗಳವಾರ ಚಾಲನೆ ನೀಡಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಟುಗೆದರ್‌ ಫಾರೆವರ್‌ ಟ್ರೂ ಲವ್‌ ವೆಡ್ಡಿಂಗ್‌ ಕಲೆಕ್ಷನ್‌’ಗೆ ಚಾಲನೆ ನೀಡಲಾಗಿದೆ. ಹಿಂದೆಲ್ಲಾ ಜವಳಿ ತೆಗೆಯಲು ಮನೆಮಂದಿಯೆಲ್ಲಾ ಬರುತ್ತಿದ್ದರು. ತಮಗಿಷ್ಟವಾದ ಉಡುಪುಗಳನ್ನು ಖರೀದಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ವಧು ಹಾಗೂ ವರ ಒಂದೇ ಬಗೆಯ ಬಟ್ಟೆ ಆಯ್ಕೆ ಮಾಡುತ್ತಾರೆ. ಅವರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ನಾವು ಹೊಸ ವಿನ್ಯಾಸದ ಉಡುಪುಗಳನ್ನು ಮಾರಾಟ ಮಾಡುತ್ತಿದ್ದೇವೆ. ಮಾರತಹಳ್ಳಿಯ ಮಳಿಗೆಯಲ್ಲಿ ಇವು ಲಭ್ಯವಿದೆ’ ಎಂದರು.

‘ಗ್ರಾಹಕರ ಹಿತ ಗಮನದಲ್ಲಿಟ್ಟುಕೊಂಡು ನಾವು ಮಾರತಹಳ್ಳಿಯಲ್ಲಿ ಪೂರ್ಣ ಪ್ರಮಾಣದ ಶಾಪಿಂಗ್‌ ಮಾಲ್‌ ತೆರೆದಿದ್ದೇವೆ. ಇಲ್ಲಿ ವಿವಿಧ ಬಗೆಯ ಸಿದ್ಧ ಉಡುಪುಗಳು, ಸಾಂಪ್ರದಾಯಿಕ ಸೀರೆಗಳು, ಶೆರ್ವಾನಿಗಳು ಲಭ್ಯವಿರುತ್ತವೆ’ ಎಂದು ತಿಳಿಸಿದರು.

ಮಳಿಗೆಯಲ್ಲಿ ನಡೆದ ಫ್ಯಾಷನ್‌ ಶೋ ಕಾರ್ಯಕ್ರಮದಲ್ಲಿ ರೂಪದರ್ಶಿಯರು ಸುದರ್ಶನ್‌ ಸಿಲ್ಕ್ಸ್‌ನಲ್ಲಿ ಲಭ್ಯವಿರುವ ಎಥ್ನಿಕ್‌, ಲೆಹೆಂಗಾ ಹಾಗೂ ಇತರೆ ವಸ್ತ್ರಗಳನ್ನು ಪ್ರದರ್ಶಿಸಿದರು. ಈ ವೇಳೆ ಶರತ್‌ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು