ಬೆಂಗಳೂರು: ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷರಾಗಿ ಗಾಯಕ ವೈ.ಕೆ. ಮುದ್ದುಕೃಷ್ಣ ಅವರು ಪುನರಾಯ್ಕೆಯಾಗಿದ್ದಾರೆ.

ಭಾನುವಾರ ಇಲ್ಲಿ ನಡೆದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಪರಿಷತ್ತಿನ ನೂತನ ಕಾರ್ಯಕಾರಿ ಸಮಿತಿ ರಚನೆಯಾಯಿತು. ಅಧ್ಯಕ್ಷರಾಗಿ ಮುದ್ದುಕೃಷ್ಣ, ಕಾರ್ಯಾಧ್ಯಕ್ಷರಾಗಿ ಕಿಕ್ಕೇರಿ ಕೃಷ್ಣಮೂರ್ತಿ ಅವಿರೋಧವಾಗಿ ಆಯ್ಕೆಯಾದರು.

ಪ್ರಧಾನ ಕಾರ್ಯದರ್ಶಿಯಾಗಿ ನಗರ ಶ್ರೀನಿವಾಸ ಉಡುಪ, ಜಂಟಿ ಕಾರ್ಯದರ್ಶಿಯಾಗಿ ನಾಗಚಂದ್ರಿಕಾ ಭಟ್, ಖಜಾಂಚಿಯಾಗಿ ಪ್ರಶಾಂತ್ ಉಡುಪ, ಪ್ರಧಾನ ಸಂಚಾಲಕರಾಗಿ ಜೋಸೆಫ್ ಹಿರೋನಿಮಸ್ ಮತ್ತು ಸುನೀತಾ ಮುರಳಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಪ್ರವೀಣ್ ಬಿ.ವಿ., ಡೇವಿಡ್ ಮಂಡ್ಯ, ನಾಗರಾಜ್ ವಿ. ಬೈರಿ, ಅಮಿತ್ ಶೇಖರ್, ನಾಗೇಂದ್ರ ಕುಮಾರ್, ಜಾವಗಲ್ ಪ್ರಸನ್ನಕುಮಾರ್ ಹಾಗೂ ನಾಮ ನಿರ್ದೇಶಿತ ಸದಸ್ಯರಾಗಿ ಅಪ್ಪಗೆರೆ ತಿಮ್ಮರಾಜು ಮತ್ತು ಸಿ.ಎಂ. ನರಸಿಂಹ ಮೂರ್ತಿ ಅವರು ಆಯ್ಕೆಯಾದರು.

ಸಲಹಾ ಸಮಿತಿಯ ಅಧ್ಯಕ್ಷರಾಗಿ ಬಿ.ಆರ್. ಲಕ್ಷ್ಮಣರಾವ್ ಮತ್ತು ಸದಸ್ಯರಾಗಿ ನಾ. ದಾಮೋದರ ಶೆಟ್ಟಿ, ಪುತ್ತೂರು ನರಸಿಂಹ ನಾಯಕ್, ಇಂದು ವಿಶ್ವನಾಥ್, ರೋಹಿಣಿ ಮೋಹನ್, ಮಾಲತಿ ಶರ್ಮ, ಶ್ರೀನಿವಾಸ ಜಿ. ಕಪ್ಪಣ್ಣ, ಬಿ.ವಿ. ಶ್ರೀನಿವಾಸ್ ಅವರನ್ನು ಮುಂದುವರಿಸಲು ನಿರ್ಧರಿಸಲಾಯಿತು.

ನೂತನ ಸಮಿತಿಯು ಆಗಸ್ಟ್ 4ರಿಂದ ಮೂರು ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಲಿದೆ ಎಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.