ಬೆಂಗಳೂರು: ಮಹಿಳೆಯೊಬ್ಬರ ಚಿನ್ನಾಭರಣ ದೋಚಿದ್ದ ಇಬ್ಬರು ದುಷ್ಕರ್ಮಿಗಳನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ನವೀನ್ ಗೌಡ (38) ಮತ್ತು ಮಂಜುನಾಥ (35) ಬಂಧಿತರು. ಆರೋಪಿಗಳಿಂದ ₹ 2 ಲಕ್ಷ ಮೌಲ್ಯದ 62 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಕೊರಿಯರ್ ಕೊಡುವ ನೆಪದಲ್ಲಿ ಉಷಾ ಬಾಲಕೃಷ್ಣನ್ (75) ಎಂಬುವರ ಮನೆಗೆ ಹೋಗಿದ್ದ ನವೀನ್ ಗೌಡ, ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಅಪಹರಿಸಿದ್ದ. ಮನೆಯ ಒಳಗೆ ನುಗ್ಗಿದ್ದ ಆರೋಪಿ, ವೃದ್ಧೆಯನ್ನು ಬೆದರಿಸಿ, ಬೀರುವಿನಲ್ಲಿ ಹುಡುಕಾಡಿದ್ದ. ಅಲ್ಲಿ ಏನೂ ಸಿಗದೇ ಇದ್ದಾಗ ಮಹಿಳೆ ಬಳಿ ಇದ್ದ ನಾಲ್ಕು ಚಿನ್ನದ ಬಳೆಗಳು ಮತ್ತು ಕಿವಿಯೋಲೆ ದೋಚಿ ಪರಾರಿಯಾಗಿದ್ದ.

ಪ್ರಕರಣ ದಾಖಲಿಸಿಕೊಂಡಿದ್ದ ಕುಮಾರಸ್ವಾಮಿ ಲೇಔಟ್ ಪೊಲೀಸರು, ಆರೋಪಿ ನವೀನ್ ಗೌಡನನ್ನು ಬಂಧಿಸಿದ್ದರು. ಬಳಿಕ ಆತನಿಗೆ ನೆರವು ನೀಡಿ ಆರೋಪದಲ್ಲಿ ಮಂಜುನಾಥನನ್ನೂ ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.