ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿನಾಯಕರಾಮ್‌, ತ್ಯಾಗರಾಜನ್‌, ತಾರನಾಥನ್‌ಗೆ ಎಸ್‌ವಿಎನ್‌ ಪ್ರಶಸ್ತಿ

Published 12 ಮಾರ್ಚ್ 2024, 0:02 IST
Last Updated 12 ಮಾರ್ಚ್ 2024, 0:02 IST
ಅಕ್ಷರ ಗಾತ್ರ

ಬೆಂಗಳೂರು: ರಾಮಸೇವಾ ಮಂಡಲಿ ಟ್ರಸ್ಟ್‌ ಸಂಸ್ಥಾಪಕ ಎಸ್‌.ವಿ. ನಾರಾಯಣಸ್ವಾಮಿ ರಾವ್‌ ಸ್ಮರಣಾರ್ಥ ನೀಡುವ ಎಸ್‌ವಿಎನ್‌ ರಾಷ್ಟ್ರೀಯ ಪ್ರಶಸ್ತಿಗೆ ತಾಳ ವಾದಕ (ಘಟಂ) ವಿದ್ವಾನ್‌ ಟಿ.ಎಚ್‌. ವಿನಾಯಕರಾಮ್‌, ಸಂಗೀತ ಕಲಾ ಆಚಾರ್ಯ ಸಹೋದರರಾದ ಟಿ.ಎನ್‌. ತ್ಯಾಗರಾಜನ್‌, ಟಿ.ಎನ್. ತಾರನಾಥನ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಮಾರ್ಚ್ 16 ಕನಕಪುರ ರಸ್ತೆಯ ನೆಟ್ಟಿಗೆರೆ ಎಸ್‌ವಿಎನ್‌ ಸ್ಮಾರಕ ಸಭಾಂಗಣದಲ್ಲಿ ಎಸ್‌.ವಿ. ನಾರಾಯಣಸ್ವಾಮಿ ರಾವ್‌ ಸ್ಮರಣಾರ್ಥ ಸಂಗೀತ ಹಬ್ಬ ನಡೆಯಲಿದೆ. ಮಾರ್ಚ್‌ 17ರಂದು ಬಸವನಗುಡಿ ಎಪಿಎಸ್‌ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮಾಜಿ ಸಂಸದ ಕೆ.ಸಿ. ರಾಮಮೂರ್ತಿ, ನಿವೃತ್ತ ಐಎಎಸ್‌ ಅಧಿಕಾರಿ ಸಿ.ಸೋಮಶೇಖರ್‌, ಪಿಟೀಲು ವಾದಕ ಕುಮರೇಶ್‌ ರಾಜಗೋಪಾಲನ್‌, ಸಂಗೀತ ಕಲಾರತ್ನ ಎಂ. ಸೂರ್ಯಪ್ರಸಾದ್‌ ಭಾಗವಹಿಸುವರು ಎಂದು ರಾಮಸೇವಾ ಮಂಡಲಿ ಟ್ರಸ್ಟ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಎಸ್‌.ಎನ್‌. ರಾಮಪ್ರಸಾದ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT