ಬುಧವಾರ, ಜೂನ್ 29, 2022
26 °C

ಟ್ಯಾಂಕರ್ ಹರಿದು ಬಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಜಾಪುರ ರಸ್ತೆಯ ಸೆರಿನಿಟಿ ಬಡಾವಣೆಯಲ್ಲಿ ಟ್ಯಾಂಕರ್ ಮೈ ಮೇಲೆ ಹರಿದು ಮೂರು ವರ್ಷದ ಬಾಲಕ ಪ್ರತಿಷ್ಠ್ ಮೃತಪಟ್ಟಿದ್ದಾನೆ.

‘ಮೃತ ಪ್ರತಿಷ್ಠ್, ನೇಪಾಳದ ಕೀಮ್ ರಾಜ್ ಹಾಗೂ ಜಯಂತಿ ದಂಪತಿಯ ಮಗ. ಕೆಲ ವರ್ಷಗಳ ಹಿಂದೆಯಷ್ಟೇ ಬಾಲಕನ ಪೋಷಕರು ನಗರಕ್ಕೆ ಬಂದಿದ್ದರು. ತಂದೆ ಕೀಮ್‌ ರಾಜ್, ಸೆರಿನಿಟಿ ಬಡಾವಣೆಯ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದರು’ ಎಂದು ಎಚ್‌ಎಸ್‌ಆರ್ ಬಡಾವಣೆಯ ಸಂಚಾರ ಪೊಲೀಸರು ಹೇಳಿದರು.

‘ಅಪಾರ್ಟ್‌ಮೆಂಟ್ ಸಮುಚ್ಚಯದವರು ಟ್ಯಾಂಕರ್‌ ವಾಹನದಲ್ಲಿ ನೀರು ತರಿಸಿದ್ದರು. ನಿಗದಿತ ಟ್ಯಾಂಕ್‌ನಲ್ಲಿ ನೀರು ತುಂಬಿಸಿದ್ದ ಚಾಲಕ, ವಾಹನವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದರು. ಅದೇ ಸ್ಥಳದಲ್ಲಿ ಬಾಲಕ ಆಟವಾಡುತ್ತಿದ್ದ. ಅದನ್ನು ಚಾಲಕ ನೋಡಿರಲಿಲ್ಲ. ಬಾಲಕನ ಮೇಲೆಯೇ ಟ್ಯಾಂಕರ್ ಚಕ್ರ ಹರಿದಿತ್ತು’ ಎಂದೂ ತಿಳಿಸಿದರು.

‘ಅಜಾಗರೂಕತೆಯ ಚಾಲನೆ ಮಾಡಿದ್ದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ಚಾಲಕನನ್ನು ವಶಕ್ಕೆ ಪಡೆಯಲಾಗಿದೆ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು