ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಮಂದಿರ–ಮಸೀದಿಗಳ ಮೇಲೆ ನಿಯಂತ್ರಣ; ಆರ್. ಅಶೋಕ್ ಹೇಳಿಕೆ

ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ
Last Updated 14 ಆಗಸ್ಟ್ 2021, 16:03 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವಕಾರಣ, ಮದುವೆ ಸಮಾರಂಭಗಳು, ಮಂದಿರ–ಮಸೀದಿಗಳ ಮೇಲೆನಿಯಂತ್ರಣಹೇರಲುಚಿಂತನೆನಡೆಸಲಾಗಿದೆ’ ಎಂದುಕಂದಾಯಸಚಿವಆರ್.ಅಶೋಕ್ಹೇಳಿದರು.

‘ಸ್ಮಾರ್ಟ್‌ ಪದ್ಮನಾಭ ನಗರ‘ ಕಾರ್ಯಕ್ರಮದಡಿ, ರಾಷ್ಟ್ರೀಯ ಯುವ ಪ್ರತಿಷ್ಠಾನದ ವತಿಯಿಂದ 100 ಮಕ್ಕಳಿಗೆ ಉಚಿತವಾಗಿ ಟ್ಯಾಬ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

‘ಹಬ್ಬಗಳ ಸಂದರ್ಭದಲ್ಲಿ ಮಂದಿರ–ಮಸೀದಿಗಳಲ್ಲಿ ಹೆಚ್ಚು ಜನ ಸೇರುತ್ತಾರೆ. ಅಲ್ಲದೆ, ಮದುವೆ ಸಮಾರಂಭಗಳಲ್ಲಿಯೂ ಜನಜಂಗುಳಿ ಹೆಚ್ಚು. ಅದಕ್ಕಾಗಿ ಈ ಸ್ಥಳಗಳಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’ ಎಂದರು.

‘ಕೋವಿಡ್‌ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಆದ್ಯತೆ. ಆದರೆ, ಲಾಕ್‌ಡೌನ್‌ ಹೇರಿಕೆ ಸರ್ಕಾರದ ಕೊನೆಯ ಪರ್ಯಾಯ ಕ್ರಮ. ಎಲ್ಲರೂ ಮಾರ್ಗಸೂಚಿಗಳನ್ನು ಪಾಲಿಸಬೇಕು’ ಎಂದರು.

ರಾಷ್ಟ್ರೀಯಯುವಪ್ರತಿಷ‍್ಠಾನದಸಂಸ್ಥಾಪಕಪ್ರಮೋದ್ಶ್ರೀನಿವಾಸ್ಮಾತನಾಡಿ, ‘ಆನ್‌ಲೈನ್‌ ತರಗತಿಗೆ ಹಾಜರಾಗಲು ಬೇಕಾದ ಸ್ಮಾರ್ಟ್‌ ಫೋನ್‌ ಅಥವಾ ಇನ್ನಿತರ ಸಾಧನಗಳು ಇಲ್ಲದೆ ಅನೇಕ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದರು. ಅಂತಹ ಆಯ್ದ 100 ಮಕ್ಕಳಿಗೆ ಉಚಿತವಾಗಿ ಟ್ಯಾಬ್‌ ನೀಡಿದ್ದೇವೆ’ ಎಂದರು.

‘ಸಾರ್ವಜನಿಕ ಶಿಕ್ಷಣಇಲಾಖೆಇತ್ತೀಚೆಗೆನಡೆಸಿದಸಮೀಕ್ಷೆಯಲ್ಲಿ 93.01 ಲಕ್ಷ ವಿದ್ಯಾರ್ಥಿಗಳ ಪೈಕಿ ಶೇ33ರಷ್ಟು ವಿದ್ಯಾರ್ಥಿಗಳ ಬಳಿಸ್ಮಾರ್ಟ್‌ ಫೋನ್‌ಗಳಿಲ್ಲ. ಈ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT