ಬೆಂಗಳೂರು: ‘ಉನ್ನತ ಸ್ಥಾನಕ್ಕೆ ಏರುವುದು, ಕೈತುಂಬಾ ವೇತನ ಪಡೆಯುವುದು ನಿಜವಾದ ಯಶಸ್ಸು ಅಲ್ಲ. ಇತರರೂ ಸಂತೋಷವಾಗಿರುವಂತೆ ಮಾಡುವುದೇ ಯಶಸ್ಸು’ ಎಂದು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಟಿ.ಜಿ. ಸೀತಾರಾಂ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಆಯೋಜಿಸಿದ್ದ ಮಾಸಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಾರ್ವತ್ರಿಕ ಮಾನವೀಯ ಮೌಲ್ಯ’ ಕುರಿತು ಅವರು ಮಾತನಾಡಿದರು.

‘ಎಂಜಿನಿಯರ್ಗಳು ತಾಂತ್ರಿಕವಾಗಿ ಹೆಚ್ಚು ಬಲಶಾಲಿಯಾಗಿದ್ದ ಮಾತ್ರಕ್ಕೆ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬಾರದು ಎಂದೇನಿಲ್ಲ. ಪ್ರತಿ ಮನುಷ್ಯನಿಗೂ ಮಾನವೀಯ ಮೌಲ್ಯಗಳು ಅಮೂಲ್ಯ. ಇದು ಮನುಷ್ಯನಲ್ಲಿರುವ ಒತ್ತಡವನ್ನು ಕಡಿಮೆ ಮಾಡಲಿದೆ. ನಿಮ್ಮ ಗುರಿಯನ್ನು ತಲುಪುವುದಕ್ಕೆ ಸಹಾಯ ಮಾಡಲಿದೆ. ತಂತ್ರಜ್ಞಾನ ಹೊರತಾದ ಒಂದು ಲೋಕವಿದೆ ಎಂಬ ಅರಿವು ಇರಬೇಕು’ ಎಂದು ತಿಳಿಸಿದರು.

ವಿಟಿಯು ಬೆಂಗಳೂರು ಪ್ರಾದೇಶಿಕ ಕಚೇರಿಯ ನಿರ್ದೇಶಕ ಎಚ್.ಆರ್. ಸುದರ್ಶನ ರೆಡ್ಡಿ ಮಾತನಾಡಿ, ‘ತಂತ್ರಜ್ಞಾನವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಯಂತ್ರೋಪಕರಣದ ರೀತಿ ಆಗಬಾರದು ಎಂಬ ಕಾರಣಕ್ಕೆ ಮಾನವೀಯ ಮೌಲ್ಯಗಳನ್ನು ತುಂಬಲು ಈ ರೀತಿಯ ಉಪನ್ಯಾಸ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದೇವೆ’ ಎಂದರು.

ವಿಟಿಯು ಕುಲಸಚಿವ ಪ್ರಸಾದ್ ಬಿ.ರಾಮ್ಪುರೆ, ಕುಲಸಚಿವ(ಮೌಲ್ಯಮಾಪನ) ಯು.ಜೆ. ಉಜ್ವಲ್ ಭಾಗವಹಿಸಿದ್ದರು.