ಗುರುವಾರ , ಫೆಬ್ರವರಿ 20, 2020
20 °C

ಚಾರುಕೀರ್ತಿ ಭಟ್ಟಾರಕರ ದೀಕ್ಷಾ ಸುವರ್ಣ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಶ್ರವಣಬೆಳಗೊಳ ಜೈನ ಮಠದ ಚಾರುಕೀರ್ತಿ ಭಟ್ಟಾರಕರ ದೀಕ್ಷಾ ಸುವರ್ಣ ಮಹೋತ್ಸವ ಮೈಸೂರಿನಲ್ಲಿ ನೆರವೇರಿತು. ಚಾರುಕೀರ್ತಿ ಭಟ್ಟಾರಕರು ಸನ್ಯಾಸ ದೀಕ್ಷೆ ಪಡೆದು ಗುರುವಾರಕ್ಕೆ (12–12–1969) ಐವತ್ತು ವರ್ಷ ತುಂಬಿದ್ದರಿಂದ, ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದ ಪ್ರಾಕೃತ ಸಮಾವೇಶದಲ್ಲೂ ಸ್ವಾಮೀಜಿಗೆ ಗುರುವಂದನೆ ಸಲ್ಲಿಸಲಾಯಿತು.ಕೋಟೆ ಶಾಂತಿನಾಥ ಜೈನ ಬಸದಿಯಲ್ಲಿಯೂ ದೀಕ್ಷಾ ಸುವರ್ಣ ಮಹೋತ್ಸವ ಆಚರಿಸಲಾಯಿತು.

ಹಂಪಿಯಲ್ಲಿ ಪ್ರಾಕೃತ ಅಧ್ಯಯನ ಕೇಂದ್ರ

‘ಜೈನ ಧರ್ಮದ ಪ್ರಭಾವ ಕರ್ನಾಟಕದಲ್ಲಿ ಹೆಚ್ಚಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯ 100ಕ್ಕೂ ಹೆಚ್ಚು ಜೈನ ಕೃತಿಗಳನ್ನು ಬಿಡುಗಡೆಗೊಳಿಸಿದೆ. ಇವು ಮರು ಮುದ್ರಣ ಕಂಡಿವೆ. ಪ್ರಾಕೃತ ಅಧ್ಯಯನ ಕೇಂದ್ರ ತೆರೆಯಲು ಸಿದ್ಧತೆ ನಡೆಸಿಕೊಳ್ಳಲಾಗಿದೆ’ ಎಂದು ವಿ.ವಿ ಕುಲಪತಿ ಸ.ಚಿ.ರಮೇಶ್‌ ತಿಳಿಸಿದರು.

‘ಜೈನ ಸಾಹಿತ್ಯದ ಕೆಲ ಕೃತಿಗಳು ಮುದ್ರಣಗೊಂಡಿವೆ. ಸ್ವಾಮೀಜಿ ಜತೆ ಈ ನಿಟ್ಟಿನಲ್ಲಿ ಚರ್ಚಿಸಿದ್ದು, ಶ್ರವಣಬೆಳಗೊಳದಲ್ಲಿ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)