ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

320 ಸರ್ಕಾರಿ ಶಾಲೆಗಳ ದತ್ತು: ದೊರೆಸ್ವಾಮಿ

Last Updated 1 ಜನವರಿ 2021, 20:44 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ 30 ವಿಶ್ವವಿದ್ಯಾಲಯಗಳು 320 ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿವೆ’ ಎಂದು ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಎಂ.ಆರ್.ದೊರೆಸ್ವಾಮಿ ಹೇಳಿದರು.

ದತ್ತು ಪಡೆದ ಕುಲಪತಿಗಳು, ಸ್ವಾಯತ್ತ ಕಾಲೇಜುಗಳ ನಿರ್ದೇಶಕರು ಹಾಗೂ ಪ್ರಾಂಶುಪಾಲರೊಂದಿಗೆಶಾಲೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಅವರು ವಿಡಿಯೊ ಸಂವಾದ ನಡೆಸಿದರು.

‘ದತ್ತು ಪಡೆದಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 22 ಅಂಶಗಳ ಸೂತ್ರ ಅಳವಡಿಸಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಮೂಲಸೌಕರ್ಯಕ್ಕೆ ಸಂಬಂಧಿಸಿದ 15 ಅಂಶಗಳು ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಸಂಬಂಧಿಸಿದ 7 ಅಂಶಗಳಿವೆ. ಇದಕ್ಕೆ ಅಭಿವೃದ್ಧಿ ಪರಿವೀಕ್ಷಣೆ ಸಮಿತಿ ರಚಿಸಿ, ಒಬ್ಬ ಕಾರ್ಯನಿರ್ವಾಹಕರನ್ನು ಆಯ್ಕೆ ಮಾಡಲು ಕೋರಲಾಗಿತ್ತು’ ಎಂದರು.

‘ಎಲ್ಲ ವಿದ್ಯಾಸಂಸ್ಥೆಗಳು ಈ ಕಾರ್ಯವನ್ನು ಯಶಸ್ವಿಯಾಗಿ ಮಾಡಿವೆ. ಮೊದಲ ಹಂತದ ಅಂಶಗಳನ್ನು ಮಾರ್ಚ್‌ 31ರೊಳಗೆ ಮುಗಿಸಿ, ಎರಡನೇ ಹಂತಕ್ಕೆ ತಲುಪಲು ಒಮ್ಮತದ ತೀರ್ಮಾನ ವ್ಯಕ್ತವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT