ಬುಧವಾರ, ಜನವರಿ 27, 2021
24 °C

ಮನೆಗೆ ನುಗ್ಗಿ ಕಳವು: ಆರೋಪಿ ಬಂಧನ ₹ 12 ಲಕ್ಷ ಮೌಲ್ಯದ ವಸ್ತು ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೀಗ ಹಾಕಿದ ಮನೆಗಳನ್ನು ಹಗಲು ವೇಳೆಯಲ್ಲಿ ಗುರುತಿಸಿ ರಾತ್ರಿ ನುಗ್ಗಿ ಕಳವು ಮಾಡುತ್ತಿದ್ದ ಕಳ್ಳನನ್ನು ಬಂಧಿಸಿರುವ ಸುದ್ದಗುಂಟೆ ಪೊಲೀಸರು, ಆರೋಪಿಯಿಂದ ₹ 12 ಲಕ್ಷ ಮೌಲ್ಯದ ಕಳವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರ್‌. ಟಿ. ನಗರದ ರೆಹಮತ್‌ ನಗರ ನಿವಾಸಿ ಸಯ್ಯದ್‌ ಮಸೂದ್ (36) ಬಂಧಿತ ಆರೋಪಿ. ಆರನಿಂದ ₹ 6 ಲಕ್ಷ ನಗದು, 171 ಗ್ರಾಂ ಚಿನ್ನಾಭರಣ, ದ್ವಿಚಕ್ರ ವಾಹನ, ಒಂದು ಮೈಕ್ರೊ ಒವೆನ್‌, ಎರಡು ಸೀರೆ, ಎರಡು ಬೆಡ್‌ ಶೀಟ್‌, ಆಸ್ತಿ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಿಟಿಎಂ ಲೇಔಟ್‌ನ ಕೆಇಬಿ ಕಾಲೊನಿಯಲ್ಲಿರುವ ತಮ್ಮ ಮನೆಯಲ್ಲಿ ನಡೆದ ಕಳವು ಬಗ್ಗೆ ಅಬ್ದುಲ್‌ ರಶೀದ್ ಮೇಕ್ರಿ ಎಂಬವರು ಸುದ್ದಗುಂಟೆ ಠಾಣೆಯಲ್ಲಿ ದೂರು ನೀಡಿದ್ದರು. ಆರೋಪಿಯ ಪತ್ತೆಗೆ ಸುದ್ದಗುಂಟೆ ಪೊಲೀಸ್‌ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.