ಮಂಗಳವಾರ, ಮಾರ್ಚ್ 28, 2023
34 °C

ಇನ್‌ಸ್ಪೈರ್ ಸ್ಪರ್ಧೆ: ರಾಜ್ಯದ ಐವರಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಆವಿಷ್ಕಾರ, ಸೃಜನಶೀಲತೆ ಹಾಗೂ ಸಂಶೋಧನಾ ಪ್ರವೃತ್ತಿ ಬೆಳೆಸಲು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಆಯೋಜಿಸಲಾಗುವ ರಾಷ್ಟ್ರಮಟ್ಟದ ಇನ್‌ಸ್ಪೈರ್ ಸ್ಪರ್ಧೆಯಲ್ಲಿ ರಾಜ್ಯದ ಐವರು ವಿದ್ಯಾರ್ಥಿಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾದ ದೇಶದ ವಿವಿಧ ರಾಜ್ಯಗಳ 60 ವಿದ್ಯಾರ್ಥಿಗಳ ಪೈಕಿ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಭಾತಂಬ್ರ ಸರ್ಕಾರಿ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಓವೈಸ್ ಅಹ್ಮದ್ ಎರಡನೇ ಸ್ಥಾನ ಪಡೆದಿದ್ದಾನೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ಓವೈಸ್
ಅಹ್ಮದ್ ರೂಪಿಸಿದ್ದ ‘ಸೇಫ್ಟಿ ಹಾರಿಝೋಂಟಲ್‌ ಸ್ಟ್ರೆಚರ್‌’ ಪ್ರಾಜೆಕ್ಟ್‌‌ ಪ್ರಶಸ್ತಿ ಪಡೆದಿದೆ.

ಉಳಿದ ಪ್ರಶಸ್ತಿ ವಿಜೇತರು: ಹರಪನಹಳ್ಳಿ ತಾಲ್ಲೂಕು ಹಲುವಾಗಲು ಗ್ರಾಮದ ಜಿಎಂಎಚ್‌ಪಿಎಸ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಕೆ. ಸಮರ್ಥ ರೂಪಿಸಿ ‘ಗುಜರಿ ಕಬ್ಬಿಣದಿಂದ ಇಟ್ಟಿಗೆ ಎತ್ತುವ ಸಾಧನ‘ ಪ್ರಾಜೆಕ್ಟ್‌, ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಕಲ್ಲನಕುಪ್ಪೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ದೇವೇಗೌಡ ರೂಪಿಸಿದ ‘ಸುಧಾರಿತ ದನ ದೊಡ್ಡಿ’ ಪ್ರಾಜೆಕ್ಟ್, ವಿಜಯಪುರ ಜಿಲ್ಲೆಯ ನಾದ (ಕೆಡಿ) ಸರ್ಕಾರಿ ಪ್ರೌಢ ಶಾಲೆ 10ನೇ ತರಗತಿ ವಿದ್ಯಾರ್ಥಿ ದೇವೀಂದ್ರ ಬಿ. ಬಿರಾದಾರ್ ಸಿದ್ಧಪಡಿಸಿದ್ದ  ‘ಬೆಳೆ ಕೊಯ್ಲು‘ ಸಾಧನ, ಬೆಂಗಳೂರಿನ ಜಾಲಹಳ್ಳಿಯ ಕೇಂದ್ರಿಯ ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿ ಆಯುಷ್ ತಯಾರಿಸಿದ್ದ ‘ರೋಡ್‌ ಗಲ್ಲೀಸ್‌’ ಪ್ರಾಜೆಕ್ಟ್‌ ಪ್ರಶಸ್ತಿಗೆ ಪಾತ್ರವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು