ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ | ಟಿಕೆಟ್ ರಹಿತ ಪ್ರಯಾಣ: 3,840 ಪ್ರಯಾಣಿಕರಿಗೆ ದಂಡ

Published 19 ಏಪ್ರಿಲ್ 2024, 23:30 IST
Last Updated 19 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಎಂಟಿಸಿ ಬಸ್‌ಗಳಲ್ಲಿ ಮಾರ್ಚ್‌ ತಿಂಗಳಲ್ಲಿ ಟಿಕೆಟ್‌ ರಹಿತವಾಗಿ ಪ್ರಯಾಣಿಸಿದ 3,840 ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ. 

ಮಾರ್ಚ್‌ ತಿಂಗಳಲ್ಲಿ 17,900 ಟ್ರಿಪ್‌ಗಳನ್ನು ತಪಾಸಣೆ ನಡೆಸಲಾಗಿತ್ತು. ಟಿಕೆಟ್ ಪಡೆಯದೇ ಪ್ರಯಾಣಿಸುತ್ತಿದ್ದ 3,840 ಮಂದಿ ಪತ್ತೆಯಾಗಿದ್ದರು. ಅವರಿಂದ ₹ 7,65,090 ದಂಡ ವಸೂಲಿ ಮಾಡಲಾಯಿತು. ಕರ್ತವ್ಯ ಲೋಪವೆಸಗಿದ ಕಾರಣಕ್ಕಾಗಿ ಸಂಸ್ಥೆಯ 1,101 ನಿರ್ವಾಹಕರ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿದ 530 ಪುರುಷ ಪ್ರಯಾಣಿಕರಿಗೆ ₹ 53,000 ದಂಡ ವಿಧಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT