ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾದಕ ವ್ಯಸನದ ವಿರುದ್ಧ ಅಭಿಯಾನ’

ಯುವಜನರು ಪಾಲ್ಗೊಳ್ಳುವಂತೆ ಕ್ಯಾನ್ಸರ್ ತಜ್ಞ ಡಾ.ವಿಶಾಲ್ ರಾವ್ ಮನವಿ
Last Updated 26 ಜೂನ್ 2022, 15:50 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾದಕ ವ್ಯಸನಕ್ಕೆ ಗಾಂಜಾ ಪ್ರವೇಶ ಕಲ್ಪಿಸುತ್ತದೆ. ಯೌವ್ವನದಲ್ಲಿ ಆರಂಭವಾಗುವ ಈ ವ್ಯಸನಗಳು, ಜೀವನದ ಉದ್ದಕ್ಕೂ ಮುಂದುವರಿಯುತ್ತವೆ. ಆದ್ದರಿಂದ ಮಾದಕ ವ್ಯಸನದ ವಿರುದ್ಧ ಅಭಿಯಾನ ಕೈಗೊಳ್ಳಲಾಗತ್ತಿದೆ’ ಎಂದು ಕ್ಯಾನ್ಸರ್ ತಜ್ಞ ಡಾ.ವಿಶಾಲ್ ರಾವ್ ತಿಳಿಸಿದ್ದಾರೆ.

‘ಯುವ ಸಬಲೀಕರಣ ಇಲಾಖೆ ನೇತೃತ್ವದಲ್ಲಿ ಈ ಅಭಿಯಾನ ನಡೆಯಲಿದೆ.ಬಿಬಿಎಂಪಿ ಮತ್ತು ರೋಟರಿ ಕ್ಲಬ್ ಜೊತೆಗೆ ಎನ್‌ಎಸ್‌ಎಸ್, ಎನ್‌ಸಿಸಿ ಮತ್ತು ಸ್ಕೌಟ್ಸ್ ಸ್ವಯಂ ಸೇವಕರೂ ಪಾಲ್ಗೊಳ್ಳುತ್ತಾರೆ. ಶಾಲೆಗಳಲ್ಲಿಯೂ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಅಭಿಯಾನದಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.

‘ಗಾಂಜಾಸೇವನೆವ್ಯಸನಕ್ಕೆ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಒಳಪಡುತ್ತಿದ್ದಾರೆ. ಖುಷಿ, ಮನರಂಜನೆಗಾಗಿ ಹೆಚ್ಚಿನವರು ಇದನ್ನು ತೆಗೆದುಕೊಳ್ಳುತ್ತಾರೆ. ಇದು ದೇಹ ಹಾಗೂ ಮಿದುಳಿನ ಮೇಲೆ ಬಲವಾದ ಪರಿಣಾಮ ಬೀರುತ್ತದೆ.ಗಾಂಜಾ ಸೇದಿದಾಗ ಅದರಲ್ಲಿರುವ ಟಿ.ಎಚ್.ಸಿ. ರಾಸಾಯನಿಕ, ಶ್ವಾಸಕೋಶಗಳಿಂದ ರಕ್ತ ಸೇರುತ್ತದೆ. ರಕ್ತ ಮಿದುಳಿಗೆ ಹಾಗೂ ದೇಹದ ಇತರ ಭಾಗಗಳಿಗೆ ರಾಸಾಯನಿಕವನ್ನು ಒಯ್ಯುತ್ತದೆ. ಇದರಿಂದ ಮಿದುಳು ದುರ್ಬಲವಾಗುತ್ತದೆ. ಹೆಚ್ಚಿನವರಿಗೆ ಇದರ ಸೇವನೆಯಿಂದ ನರ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.‌ ವ್ಯಕ್ತಿ ಮಾನಸಿಕವಾಗಿಯೂ ಕುಗ್ಗುತ್ತಾ ಹೋಗುತ್ತಾನೆ’ ಎಂದು ತಿಳಿಸಿದ್ದಾರೆ.

‘ತಂಬಾಕುಉತ್ಪನ್ನಗಳ ಸೇವೆಯನ್ನು ದೇಶದಲ್ಲಿ ಕಾನೂನುಬದ್ಧಗೊಳಿಸಲಾಗಿದೆ. ಇದರ ಪರಿಣಾಮ ದೇಶದದಲ್ಲಿ ಶೇ 80ಕ್ಕಿಂತ ಅಧಿಕ ಮಂದಿ ಮಾದಕ ವ್ಯಸನವನ್ನು ತಂಬಾಕಿನಿಂದಲೇ ಪ್ರಾರಂಭಿಸುತ್ತಾರೆ.ಯುವಜನರಿಗೆ ಗಾಂಜಾದಿಂದ ಉಂಟಾಗುವ ಅಪಾಯಗಳ ಬಗ್ಗೆ ಅರಿವು ನೀಡಬೇಕು. ತಂಬಾಕು ಉತ್ಪನ್ನಗಳ ಸೇವನೆಗೆ ಕಡಿವಾಣ ಹಾಕಿದರೆ, ಗಾಂಜಾ ಸೇವನೆಗೂ ತಡೆ ಒಡ್ಡಲು ಸಾಧ್ಯ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT