ಬೆಂಗಳೂರು: ಬೆಂಗಳೂರು–ದಿಂಡಿಗಲ್ವರೆಗಿರುವ ಹೆದ್ದಾರಿಯಲ್ಲಿ ಸೋಮನಹಳ್ಳಿ ಬಳಿ ನಿರ್ಮಿಸಿರುವ ಟೋಲ್ನಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರಿಂದ ಶುಲ್ಕ ಸಂಗ್ರಹಿಸುತ್ತಿರುವುದನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಹಾರೋಹಳ್ಳಿ ತಾಲ್ಲೂಕು ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

‘ರಾಷ್ಟ್ರೀಯ ಹೆದ್ದಾರಿ ಕಾಯ್ದೆ 2024ರ ಪ್ರಕಾರ ಟೋಲ್ನಿಂದ 20 ಕಿ.ಮೀ ಸುತ್ತಮುತ್ತಲಿನ ಸ್ಥಳೀಯರಿಂದ ಶುಲ್ಕ ಸಂಗ್ರಹಿಸದಂತೆ ಆದೇಶವಿದ್ದರೂ ಟೋಲ್ ಗುತ್ತಿಗದಾರರು ಹಾರೋಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರಿಂದ ಶುಲ್ಕ ಸಂಗ್ರಹಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ದೂರಿದರು.

ಹಾರೋಹಳ್ಳಿ, ಮರಳವಾಡಿ ಸೇರಿದಂತೆ ಟೋಲ್ ಸುತ್ತಮುತ್ತಲಿರುವ ಗ್ರಾಮಸ್ಥರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಬೇಕು. ಮುಚ್ಚಿರುವ ಟೋಲ್ ಸಮೀಪದ ಬಿಡಬ್ಲ್ಯುಎಸ್ಎಸ್ಬಿ ರಸ್ತೆಯನ್ನು ತೆರವುಗೊಳಿಸಬೇಕು. ಟೋಲ್ನಲ್ಲಿ ಸಿಬ್ಬಂದಿ ನಿಯೋಜಿಸುವ ಮೊದಲು ಪೊಲೀಸ್ ಠಾಣೆಯಲ್ಲಿ ಆ ವ್ಯಕ್ತಿಯ ವಿವರವನ್ನು ಪಡೆದುಕೊಳ್ಳಬೇಕು. ಹಾರೋಹಳ್ಳಿ ಮಾರ್ಗದಲ್ಲಿ ಸರ್ವೀಸ್ ರಸ್ತೆ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.

‘ಬೇಡಿಕೆಗಳು ಈಡೇರದಿದ್ದರೆ ಜೂನ್ 18ರಂದು ಹಾರೋಹಳ್ಳಿಯಿಂದ ಸೋಮನಹಳ್ಳಿ ಟೋಲ್ ಮೂಲಕ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಬೈಕ್ ರ್ಯಾಲಿ ನಡೆಸಲಾಗುತ್ತದೆ’ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಮತಾ ಸೈನಿಕದಳ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಜಿ.ಗೋವಿಂದ ನಾಯ್ಕ್, ಕೆಬ್ಬೆದೊಡ್ಡಿ ಗೋವಿಂದ, ಸುರೇಶ್, ಹಾರೋಹಳ್ಳಿ ಚಂದ್ರು, ರುದ್ರೇಶ್ ಬೆಣದಕಲ್ಲುದೊಡ್ಡಿ, ಮರಳವಾಡಿ ಮಂಜು, ಬನಶಂಕರಿ ನಾಗು ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.