ಬೆಂಗಳೂರು: ನಗರದ ಮಾರುಕಟ್ಟೆಗಳಲ್ಲಿ ಟೊಮೆಟೊ ದರ ಏರಿಕೆ ಕಂಡಿದೆ. ಎರಡು ತಿಂಗಳವರೆಗೆ ಟೊಮೊಟೊಬೆಲೆ ಹೆಚ್ಚಿರಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಲಾಕ್‍ಡೌನ್ ಹಾಗೂ ಅದರ ಬಳಿಕ ಟೊಮೆಟೊ ಚಿಲ್ಲರೆ ದರ ಪ್ರತಿ ಕೆ.ಜಿ.ಗೆ ₹20ಕ್ಕಿಂತ ದಾಟಿರಲಿಲ್ಲ. ಆದರೆ, ಒಂದು ವಾರದಿಂದ ದಿಢೀರ್ ಏರಿಕೆ ಕಂಡಿರುವ ಟೊಮೊಟೊ ಪ್ರತಿ ಕೆ.ಜಿ.ಗೆ ₹50ರಂತೆ ಬುಧವಾರ ಮಾರಾಟವಾಯಿತು. ಸಿಂಗೇನ ಅಗ್ರಹಾರ ಹಾಗೂ ದಾಸನಪುರ ಎಪಿಎಂಸಿ ಮಾರುಕಟ್ಟೆಗಳಲ್ಲೂ ಟೊಮೊಟೊ ಆವಕ ಪ್ರಮಾಣ ಕಡಿಮೆಯಾಗಿದೆ.

ಕ್ಯಾರೆಟ್, ಬೀಟ್‍ರೂಟ್, ಮೂಲಂಗಿ, ಆಲೂಗಡ್ಡೆ ದರಗಳು ಏರಿವೆ. ಕೊತ್ತಂಬರಿ ಸೊಪ್ಪು ಪ್ರತಿ ಕಟ್ಟಿಗೆ ₹10, ಮೆಂತ್ಯೆ ₹8, ಪಾಲಕ್ ₹10 ರಂತೆ ಮಾರಾಟವಾಗುತ್ತಿದೆ.

'8 ತಿಂಗಳಿನಿಂದ ಟೊಮೊಟೊ ದರ ಏರಿಕೆ ಆಗಿರಲಿಲ್ಲ. ಲಾಕ್‍ಡೌನ್ ವೇಳೆ ನೆಲಕಚ್ಚಿದ್ದ ತರಕಾರಿ ದರಗಳಿಂದ ರೈತರು ಟೊಮೊಟೊ ಬೆಳೆಯಲು ಮುಂದಾಗಿಲ್ಲ. ಇತ್ತೀಚೆಗೆ ಸುರಿದ ಮಳೆಯಿಂದಲೂ ತೋಟಗಳಲ್ಲಿ ಬೆಳೆದಿದ್ದ ಟೊಮೊಟೆ ಹಾನಿಗೊಳಗಾಗಿವೆ. ಇದರ ಪರಿಣಾಮ ಮಾರುಕಟ್ಟೆಗಳಿಗೆ ಅಗತ್ಯ ಪ್ರಮಾಣದ ಟೊಮೊಟೊ ಪೂರೈಕೆಯಾಗುತ್ತಿಲ್ಲ. ಇದರಿಂದ ಬೇಡಿಕೆ ಹೆಚ್ಚಾಗಿದ್ದು, ಬೆಲೆಯೂ ಏರಿದೆ' ಎಂದು ದಾಸನಪುರ ಎಪಿಎಂಸಿ ಮಾರುಕಟ್ಟೆಯ ತರಕಾರಿ ಮತ್ತು ಸೊಪ್ಪಿನ ವ್ಯಾಪಾರಿ ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.