ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಕುಸಿತ: ಟೊಮೆಟೊ ಬುಡಕ್ಕೆ ಕುಡುಗೋಲು

Last Updated 22 ಡಿಸೆಂಬರ್ 2020, 21:26 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಮಾರುಕಟ್ಟೆಯಲ್ಲಿ ಟೊಮೆಟೊಗೆ ಉಂಟಾಗಿರುವ ಬೆಲೆ ಕುಸಿತದಿಂದ ಬೇಸತ್ತ ರೈತರು ಕಷ್ಟಪಟ್ಟು ಬೆಳೆದ ಟೊಮೆಟೊ ಗಿಡಗಳನ್ನು ಫಸಲು ಸಹಿತ ಕೊಯ್ದು ತೋಟದಿಂದ ಹೊರಗೆ ಎಸೆಯುತ್ತಿದ್ದಾರೆ.

‘ಸಗಟು ಮಾರುಕಟ್ಟೆಯಲ್ಲಿ 15 ಕೆಜಿ ತೂಗುವ ಟೊಮೆಟೊ ಬಾಕ್ಸೊಂದು ₹30 ರಿಂದ ₹70 ರವರೆಗೆ ಮಾರಾಟವಾಗುತ್ತಿದೆ. ಈ ಬೆಲೆಯಲ್ಲಿ ಟೊಮೆಟೊ ಬಿಡಿಸಿ ಮಾರುಕಟ್ಟೆಗೆ ಸಾಗಿಸಿದ ವೆಚ್ಚವೂ ಸಿಗುವುದಿಲ್ಲ. ಮಾರುಕಟ್ಟೆಗೆ ಹಾಕಿ ಕೈ ಸುಟ್ಟುಕೊಂಡು ಸಾಕಾಗಿದೆ. ಆದ್ದರಿಂದಲೇ ಗಿಡದ ಬುಡಕ್ಕೆ ಕುಡುಗೋಲು ಹಾಕಿದ್ದೇನೆ, ಎಂದು ರೈತ ಚಂದನ್‌ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನಲ್ಲಿ ಕೃಷಿ ಕೊಳವೆ ಬಾವಿಗಳ ಆಶ್ರಯದಲ್ಲಿ ಮುಖ್ಯ ಬೆಳೆಯಾಗಿ ಟೊಮೆಟೊ ಬೆಳೆಯಲಾಗಿದೆ. ಬೆಲೆ ಕುಸಿತದ ಪರಿಣಾಮವಾಗಿ ಬಹುತೇಕ ರೈತರು ಬಿಡಿಸುವ ಗೋಜಿಗೆ ಹೋಗಿಲ್ಲ. ಹಾಗಾಗಿ ಟೊಮೆಟೊ ಹಣ್ಣಾಗಿ ಕೊಳೆಯುತ್ತಿದೆ. ಹುಳಿ ಸೋರುವಿಕೆಯಿಂದ ನೆಲದ ಆರೋಗ್ಯ ಕೆಡುವ ಭೀತಿಯಿಂದ, ಕೆಲವು ರೈತರು ಹಣ್ಣನ್ನು ಬಿಡಿಸಿ ಹೊರಗೆಎಸೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT