ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರು ಹಬ್ಬ: ವಾಹನ ಸಂಚಾರ ಮಾರ್ಗ ಬದಲಾವಣೆ

Published 10 ಮೇ 2024, 15:36 IST
Last Updated 10 ಮೇ 2024, 15:36 IST
ಅಕ್ಷರ ಗಾತ್ರ

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಹೊಸರಸ್ತೆ ಹಾಗೂ ಚನ್ನಕೇಶನಗರದಲ್ಲಿ ಮೇ 11ರಂದು ಊರು ಹಬ್ಬದ ಅಂಗವಾಗಿ ನಡೆಯುವ ರಥೋತ್ಸವ, ಕರಗ, ಪಲ್ಲಕ್ಕಿ ಉತ್ಸವಕ್ಕೆ ಹೆಚ್ಚಿನ ಭಕ್ತರು ಬರುವ ನಿರೀಕ್ಷೆಯಿದ್ದು ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಸುಗಮ ಸಂಚಾರ ಕಲ್ಪಿಸುವ ಉದ್ದೇಶದಿಂದ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.‌

ರಾಯಸಂದ್ರ ಜಂಕ್ಷನ್ ಕಡೆಯಿಂದ ಕೂಡ್ಲುಗೇಟ್ ಕಡೆಗೆ ಸಂಚರಿಸುವ ವಾಹನಗಳು ಚೂಡಸಂದ್ರ, ಬಿರ್ಲಾ ಜಂಕ್ಷನ್ ಮೂಲಕ ಕೂಡ್ಲುಗೇಟ್ ಕಡೆಗೆ ತೆರಳಬೇಕು. ರಾಯಸಂದ್ರ ಜಂಕ್ಷನ್ ಕಡೆಯಿಂದ ಎಲೆಕ್ಟ್ರಾನಿಕ್‌ ಸಿಟಿ ಕಡೆಗೆ ಸಂಚರಿಸುವ ವಾಹನಗಳು ಒಲ್ಡ್ ಆರ್‌ಟಿಒ ಜಂಕ್ಷನ್‍ನಿಂದ ದೊಡ್ಡನಾಗಮಂಗಲ ಮೂಲಕ ಎಲೆಕ್ಟ್ರಾನಿಕ್‍ ಸಿಟಿ ಕಡೆಗೆ ಸಂಚರಿಸಬಹುದು. ನಾಗನಾಥಪುರ ಜಂಕ್ಷನ್ ಕಡೆಯಿಂದ ರಾಯಸಂದ್ರ ಕಡೆಗೆ ಸಂಚರಿಸುವ ವಾಹನಗಳು ಕೂಡ್ಲುಗೇಟ್ ಜಂಕ್ಷನ್‍ನಿಂದ ಕೂಡ್ಲುರಸ್ತೆ, ಬಿರ್ಲಾ ಜಂಕ್ಷನ್, ಚೂಡಸಂದ್ರ ಜಂಕ್ಷನ್ ಮೂಲಕ ರಾಯಸಂದ್ರ ಕಡೆಗೆ ಸಂಚರಿಸಬಹುದು.

ಹೊಸೂರು ರಸ್ತೆ ಕಡೆಯಿಂದ ಜೈಲು ರಸ್ತೆ, ರಾಯಸಂದ್ರ ರಸ್ತೆಯ ಕಡೆಗೆ ಸಂಚರಿಸುವ ವಾಹನಗಳು, ಎಲೆಕ್ಟ್ರಾನಿಕ್‌ ಸಿಟಿ 2ನೇ ಹಂತದಿಂದ ದೊಡ್ಡ ನಾಗಮಂಗಲ, ಓಲ್ಡ್ ಆರ್‌ಟಿಒ ಜಂಕ್ಷನ್ ಮೂಲಕ ಸಂಚರಿಸಬಹುದು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT