ಬೆಂಗಳೂರು: ಕಗ್ಗದಾಸಪುರ ಮುಖ್ಯರಸ್ತೆಯಲ್ಲಿರುವ ‘ಕಂಫರ್ಟ್ ಮಲ್ಟಿ ಸ್ಪೆಷಾಲಿಟಿ’ ಆಸ್ಪತ್ರೆ ಆಡಳಿತ ಮಂಡಳಿ, ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ₹ 65 ಲಕ್ಷ ಹೆಚ್ಚುವರಿ ಶುಲ್ಕ ವಸೂಲಿ ಮಾಡಿರುವುದನ್ನು ಸರ್ಕಾರದ ಉನ್ನತ ಅಧಿಕಾರಿಗಳ ತಂಡ ಪತ್ತೆ ಹಚ್ಚಿದೆ. ಆ ಶುಲ್ಕವನ್ನು ವಾರದೊಳಗೆ ರೋಗಿಗಳಿಗೆ ಮರುಪಾವತಿ ಮಾಡುವಂತೆಯೂ ಆಸ್ಪತ್ರೆಗೆ ಗಡುವು ನೀಡಲಾಗಿದೆ.

ಸರ್ಕಾರ ನಿಗದಿ ಮಾಡಿರುವ ಶುಲ್ಕಕ್ಕಿಂತಲೂ ಹೆಚ್ಚುವರಿ ಶುಲ್ಕ ಪಡೆಯುತ್ತಿದ್ದ ಹಾಗೂ ರೋಗಕ್ಕೆ ಸಂಬಂಧವೇ ಇಲ್ಲದ ಪರೀಕ್ಷೆ ಮಾಡಿ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿದ್ದ ಬಗ್ಗೆ ಆಸ್ಪತ್ರೆ ವಿರುದ್ಧ ದೂರು ಬಂದಿತ್ತು.

ಐಪಿಎಸ್ ಹಿರಿಯ ಅಧಿಕಾರಿ ಅಲೋಕ್ ಕುಮಾರ್ ಹಾಗೂ ಐಎಎಸ್ ಹಿರಿಯ ಅಧಿಕಾರಿ ಪಿ. ಮಣಿವಣ್ಣನ್ ನೇತೃತ್ವದ ಉನ್ನತ ಅಧಿಕಾರಿಗಳ ತಂಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಚಿಕಿತ್ಸೆ ಪಡೆದ ಹಾಗೂ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳ ಪಟ್ಟಿಯನ್ನು ತಂಡ ತಪಾಸಣೆ ನಡೆಸಿತು. ಚಿಕಿತ್ಸೆಗಾಗಿ ಪ್ರತಿಯೊಬ್ಬ ರೋಗಿಯಿಂದ ಪಡೆದ ಶುಲ್ಕದ ದಾಖಲೆಗಳನ್ನೂ ಪರಿಶೀಲಿಸಿತು.

ಇದೇ ಸಂದರ್ಭದಲ್ಲೇ ಶುಲ್ಕದಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬಂತು. ಆಸ್ಪತ್ರೆ ಕೊಠಡಿ ಬಾಡಿಗೆ, ಆಮ್ಲಜನಕ ಹಾಗೂ ಇತರೆ ಸೇವೆಗಳಿಗೆ ಪ್ರತಿಯೊಬ್ಬ ರೋಗಿಯಿಂದಲೂ ಹೆಚ್ಚುವರಿ ಶುಲ್ಕ ವಸೂಲಿ ಮಾಡಿರುವುದಕ್ಕೆ ದಾಖಲೆಗಳು ಲಭ್ಯವಾದವು. ಅವುಗಳನ್ನು ತಂಡ ಜಪ್ತಿ ಮಾಡಿತು. ಕಂಪ್ಯೂಟರ್‌ನಲ್ಲಿದ್ದ ಹಾರ್ಡ್ ಡಿಸ್ಕ್ ಸಹ ಸುಪರ್ದಿಗೆ ಪಡೆಯಿತು.

‘ಖಚಿತ ಮಾಹಿತಿ ಮೇರೆಗೆ ಆಸ್ಪತ್ರೆಗೆ ಹೋಗಿ ತಪಾಸಣೆ ನಡೆಸಲಾಯಿತು. ಆಸ್ಪತ್ರೆಯವರು ರೋಗಿಗಳಿಂದ ₹ 65 ಲಕ್ಷ ಹೆಚ್ಚುವರಿ ಶುಲ್ಕ ವಸೂಲಿ ಮಾಡಿರುವುದಕ್ಕೆ ದಾಖಲೆಗಳು ಲಭ್ಯವಾಗಿವೆ. ಹೆಚ್ಚುವರಿ ಶುಲ್ಕ ಪಾವತಿಸಿದ್ದ 81 ರೋಗಿಗಳ ಪಟ್ಟಿ ಮಾತ್ರ ಸದ್ಯಕ್ಕೆ ಸಿಕ್ಕಿದ್ದು, ಉಳಿದ ರೋಗಿಗಳ ಬಗ್ಗೆಯೂ ಮಾಹಿತಿ ಕೋರಲಾಗಿದೆ’ ಎಂದು ಅಲೋಕ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಚ್ಚುವರಿಯಾಗಿ ಪಡೆದ ಶುಲ್ಕವನ್ನು ರೋಗಿಗಳಿಗೆ ಮರು ಪಾವತಿ ಮಾಡುವಂತೆ ಎಚ್ಚರಿಕೆ ನೀಡಿ ಆಸ್ಪತ್ರೆಗೆ ನೋಟಿಸ್ ನೀಡಲಾಗುವುದು. ನಿಗದಿತ ಸಮಯದಲ್ಲಿ ಶುಲ್ಕ ಮರು ಪಾವತಿ ಆಗದಿದ್ದರೆ ಆಸ್ಪತ್ರೆ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದೂ ಅವರು ಹೇಳಿದರು.

’ಪ್ರತಿಯೊಂದು ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ವಹಿಸಲಾಗಿದೆ. ಸರ್ಕಾರದ ನಿಯಮಗಳನ್ನು ಪಾಲಿಸದ ಆಸ್ಪತ್ರೆಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದೂ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.