ಬೆಂಗಳೂರು: ರೈಲ್ವೆ ಕಂಟೊನ್ಮೆಂಟ್ ಕಾಲೊನಿಯಲ್ಲಿ 371 ಮರಗಳಿರುವ ಎಂಟು ಎಕರೆಗೂ ಹೆಚ್ಚು ಪ್ರದೇಶವನ್ನು ‘ಜೀವವೈವಿಧ್ಯ ಪಾರಂಪರಿಕ ತಾಣ’ ಎಂದು ಘೋಷಿಸಿ, ಅರಣ್ಯ ಇಲಾಖೆ ಹೊರಡಿಸಿದ್ದ ಅಧಿಸೂಚನೆ ಹಿಂಪಡೆದಿರುವುದನ್ನು ‘ಪರಿಸರಕ್ಕಾಗಿ ನಾವು’ ಸಂಘಟನೆ ಖಂಡಿಸಿದೆ.

‘ಮೂರು ನಾಲ್ಕು ದಶಕಗಳ ಹಿಂದೆ ಉದ್ಯಾನ ನಗರಿ ಆಗಿದ್ದ ಬೆಂಗಳೂರು ಈಗ ಅಧ್ವಾನ ನಗರಿಯಾಗಿದೆ. ನಗರದಲ್ಲಿ ಇರುವ ಮರಗಳನ್ನು ಉಳಿಸಿಕೊಂಡು, ಇನ್ನೂ ಹೆಚ್ಚಿನ ಗಿಡಗಳನ್ನು ನೆಟ್ಟು, ಬೆಳೆಸಿ ಹಸಿರು ಹೊದಿಕೆ ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ. ಈ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕು’ ಎಂದು ಸಂಘಟನೆಯ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಆಗ್ರಹಿಸಿದ್ದಾರೆ.

‘ಖಾಸಗಿ ಕಂಪನಿ ಕಟ್ಟಡ ಕಟ್ಟಲು ರೈಲ್ವೆ ಭೂ ಪ್ರಾಧಿಕಾರವು ತನ್ನ ಸುಪರ್ದಿಯಲ್ಲಿರುವ ಬೇರೆ ಜಾಗವನ್ನು (ಮರಗಳು ಇರದಿರುವ ಜಾಗ) ಕೊಡಲಿ ಅಥವಾ ಹಳೆಯ ಕ್ವಾರ್ಟರ್ಸ್ಗಳನ್ನು ಕೆಡವಿ ಅಲ್ಲಿ ಬಹುಮಹಡಿ ಕಟ್ಟಡ ಕಟ್ಟಲು ಅಥವಾ ವಿದೇಶಗಳಲ್ಲಿ ಕಟ್ಟಿರುವಂತೆ ರೈಲು ನಿಲ್ದಾಣಗಳ ಮೇಲೆ ಬಹು ಮಹಡಿ ಕಟ್ಟಡ ಕಟ್ಟಲು ಅವಕಾಶ ನೀಡಲಿ’ ಎಂದು ತಿಳಿಸಿದ್ದಾರೆ.

ಕಂಟೊನ್ಮೆಂಟ್ ಪ್ರದೇಶದಲ್ಲಿ ಈಗಿರುವ ಜೀವ ಪರಿಸರ ವ್ಯವಸ್ಥೆಯನ್ನು ಹಾಳು ಮಾಡಿ, ಮತ್ತೆ ಪುನರ್ ನಿರ್ಮಾಣ ಮಾಡಲು ನೂರಾರು ವರ್ಷಗಳು ಬೇಕು. ಅರಣ್ಯ ಸಚಿವರಿಗೆ ಈ ವಿಷಯಗಳ ಅರಿವಿಲ್ಲದೆ ಮರಗಳನ್ನು ಕಡಿಯಲು ಅನುಮತಿ ಕೊಡುತ್ತಾರೆಯೇ? ವೃಕ್ಷ ಪ್ರಾಧಿಕಾರ ರಚಿಸಲು ಬಹಳ ಹಿಂದೆಯೇ ಹೈಕೋರ್ಟ್ ಆದೇಶ ನೀಡಿದ್ದರೂ, ಸರ್ಕಾರ ಇನ್ನೂ ಆ ಆದೇಶವನ್ನು ಪಾಲಿಸಿಲ್ಲ. ಮರಗಳ ರಕ್ಷಣೆ ವಿಷಯದಲ್ಲಿ ನ್ಯಾಯಾಲಯಗಳಿಗೆ ಇರುವ ಕಾಳಜಿ ಅರಣ್ಯ ಇಲಾಖೆಗೆ ಇಲ್ಲ. ಕೂಡಲೇ ವೃಕ್ಷ ಪ್ರಾಧಿಕಾರ ರಚಿಸಲು ಅರಣ್ಯ ಸಚಿವರು ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.