ಸೋಮವಾರ, ಜೂನ್ 21, 2021
30 °C

ಬೆಂಗಳೂರಿನ ಸ್ಯಾಪ್‌ ಎಂಜಿನಿಯರ್‌ಗಳಲ್ಲಿ ಎಚ್‌1ಎನ್‌1 ವೈರಾಣು ಪತ್ತೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿರುವ ಜರ್ಮನಿ ಮೂಲದ ‘ಸ್ಯಾಪ್’ ಸಾಫ್ಟ್‌ವೇರ್ ಕಂಪನಿಯ ಇಬ್ಬರು ಎಂಜಿನಿಯರ್‌ಗಳಲ್ಲಿ ಎಚ್‌1ಎನ್‌1 ವೈರಾಣು ಪತ್ತೆಯಾಗಿದೆ.

ಬೆಂಗಳೂರಿನ ಎಕೊವರ್ಲ್ಡ್‌ನಲ್ಲಿ ಕಾರ್ಯನಿರ್ವಹಿಸುವ ತನ್ನ ನೌಕರರಲ್ಲಿ ಎಚ್‌1ಎನ್‌1 ವೈರಾಣು ಪತ್ತೆಯಾದ ಹಿನ್ನೆಲೆಯಲ್ಲಿ ಕಂಪನಿಯು ಸೋಂಕು ನಿವಾರಣೆಗಾಗಿ ಭಾರತದಲ್ಲಿರುವ ತನ್ನೆಲ್ಲಾ ಕಚೇರಿಗಳಲ್ಲಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ.

ಮುಂದಿನ ಸೂಚನೆ ನೀಡುವವರೆಗೆ ಎಲ್ಲ ನೌಕರರು ಮನೆಗಳಿಂದಲೇ ಕೆಲಸ ಮಾಡಬೇಕು ಎಂದು ಕಂಪನಿ ಸೂಚಿಸಿದೆ.

‘ನೌಕರರು ಮತ್ತು ಅವರ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಸ್ಯಾಪ್ ಕಾಳಜಿವಹಿಸುತ್ತದೆ. ಬೆಂಗಳೂರು, ಗುರುಗ್ರಾಮ ಮತ್ತು ಮುಂಬೈನಲ್ಲಿರುವ ಎಲ್ಲ ಸ್ಯಾಪ್‌ ಕಚೇರಿಗಳನ್ನು ಸೋಂಕು ನಿವಾರಣೆ ಕಾರ್ಯಾಚರಣೆಗಾಗಿ ಸ್ಥಗಿತಗೊಳಿಸಲಾಗಿದೆ. ಎಲ್ಲ ನೌಕರರಿಗೂ ಮನೆಗಳಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ’ ಎಂದು ಸ್ಯಾಪ್‌ ಇಂಡಿಯಾ ಮೂಲಗಳನ್ನು ಉಲ್ಲೇಖಿಸಿ ‘ಇಂಟರ್‌ನ್ಯಾಷನಲ್ ಬ್ಯುಸಿನೆಸ್ ಟೈಮ್ಸ್‌’ ವರದಿ ಮಾಡಿದೆ.

ಎಚ್‌1ಎನ್‌1 ಅಥವಾ ಹಂದಿಜ್ವರ (ಸ್ವೈನ್ ಫ್ಲು) ಗಾಳಿಯ ಮೂಲಕ ಹರಡುತ್ತದೆ. ಕೆಮ್ಮು, ಜ್ವರ, ಗಂಟಲು ಕೆರೆತ, ನೆಗಡಿ, ತಲೆನೋವು, ಚಳಿ ಮತ್ತು ಸುಸ್ತು ಈ ರೋಗದ ಲಕ್ಷಣಗಳಾಗಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು