ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುಜಿಸಿಇಟಿ: ರ‍್ಯಾಂಕ್‌ ಪಡೆದವರ ಅಭಿಪ್ರಾಯ

Published 1 ಜೂನ್ 2024, 16:04 IST
Last Updated 1 ಜೂನ್ 2024, 16:04 IST
ಅಕ್ಷರ ಗಾತ್ರ

ಸಿಇಟಿ ಎಂಜಿನಿಯರಿಂಗ್‌ನಲ್ಲಿ 3ನೇ ರ‍್ಯಾಂಕ್‌ ಬಂದಿರುವುದನ್ನು ಕಂಡು ಖುಷಿಯಾಯಿತು. ನನಗೆ ಶಿಕ್ಷಕರು ನೀಡುತ್ತಿದ್ದ ಸಲಹೆ, ಬೋಧನೆಯಿಂದ ಪರೀಕ್ಷೆ ಬರೆಯಲು ಸುಲಭವಾಯಿತು. ಅವರಿಗೆ ಮತ್ತು ಮನೆಯಲ್ಲಿ ಪ್ರೋತ್ಸಾಹ ನೀಡಿದ ಹೆತ್ತವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. 

- ಅಭಿನವ್ ಪಿ.ಜೆ., ನೆಹರೂ ಸ್ಮಾರಕ ವಿದ್ಯಾಲಯ, 7ನೇ ಬ್ಲಾಕ್, ಜಯನಗರ, ಬೆಂಗಳೂರು

ಎಂಜಿನಿಯರಿಂಗ್‌ನಲ್ಲಿ ಮೂರನೇ ರ‍್ಯಾಂಕ್‌ ಪಡೆದ ವಿದ್ಯಾರ್ಥಿ.

ಕಾಲೇಜಿನಲ್ಲಿಯೇ ಸಿಇಟಿಗೆ ತಯಾರಿ ನಡೆಸುತ್ತಿದ್ದೆ. ಅದನ್ನು ಹೊರತುಪಡಿಸಿ ಯಾವುದೇ ಕೋಚಿಂಗ್‌ ಕ್ಲಾಸ್‌ಗಳಿಗೆ ಹೋಗಿಲ್ಲ. ಶ್ರದ್ಧೆಯಿಂದ ಓದಿದರೆ ಕೋಚಿಂಗ್‌ ಬೇಕಾಗಿಲ್ಲ. ಇದೇ ರೀತಿ ಓದಿ ಎಸ್ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿಯೂ ರ‍್ಯಾಂಕ್‌ ಪಡೆದಿದ್ದೆ. ಮುಂದೆ ವೈದ್ಯಕೀಯ ಶಿಕ್ಷಣ ಪಡೆಯಬೇಕು ಎಂಬುದು ನನ್ನ ಗುರಿ.

- ಪ್ರೀತಮ್ ರಾವಲಪ್ಪ ಪಣಸುಧಾಕರ್‌, ಶೇಷಾದ್ರಿಪುರಂ ಪಿ.ಯು. ಕಾಲೇಜು

ಬಿಎನ್‌ವೈಎಸ್‌ (ಬ್ಯಾಚುಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್)ನಲ್ಲಿ 3ನೇ ರ‍್ಯಾಂಕ್‌ ಪಡೆದ ವಿದ್ಯಾರ್ಥಿ.

ಬೇರೆ ಪರೀಕ್ಷೆಗಳಿಗೆ ಹೋಲಿಸಿದರೆ ಈ ಪರೀಕ್ಷೆ ಸುಲಭವಾಗಿತ್ತು. ವಿದ್ಯಾರ್ಥಿಗಳು ಸಮಯದ ಸರಿಯಾದ ಬಳಕೆಯನ್ನು ಕಲಿತರೆ ಯಾವ ಪರೀಕ್ಷೆಯೂ ಕಷ್ಟವಲ್ಲ. ಸಿಇಟಿ ಪರೀಕ್ಷೆಯ ತಯಾರಿಗಾಗಿ ಸಮಯವನ್ನು ನಿಗದಿಪಡಿಸಿದ್ದೆ. ಅದೇ ಸಮಯದಲ್ಲಿ ಓದುತ್ತಿದ್ದೆ.

-ಅನಿಮೇಶ್ ಸಿಂಗ್ ರಾಥೋರ್, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್

ಬಿ.ಎಸ್‌.ಸಿ(ಕೃಷಿ)ಯಲ್ಲಿ ಮೂರನೇ ರ‍್ಯಾಂಕ್‌ ಪಡೆದ ವಿದ್ಯಾರ್ಥಿ.

ನಾನು ಬೆಳಿಗ್ಗೆ 8 ರಿಂದ ರಾತ್ರಿ 8ರ ತನಕ ಕೋಚಿಂಗ್‌ ತೆಗೆದುಕೊಳ್ಳುತ್ತಿದ್ದೆ. ಓದಿಗೆ ಹೆಚ್ಚು ಗಮನ ನೀಡಿದ್ದರಿಂದ ಈ ಫಲಿತಾಂಶ ಪಡೆಯಲು ಸಾಧ್ಯವಾಯಿತು. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟರೆ ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ. ಮುಂದೆ ವೈದ್ಯನಾಗುವ ಗುರಿ ಇಟ್ಟುಕೊಂಡಿದ್ದೇನೆ.

-ಡಿ.ಎನ್. ನಿತಿನ್‌, ನಾರಾಯಣ ಇ., ಟೆಕ್ನೋ ಪಾರ್ಕ್ ಸ್ಕೂಲ್‌, ದೊಡ್ಡಬೆಟ್ಟಹಳ್ಳಿ, ಯಲಹಂಕ 

ಪಶು ವೈದ್ಯಕೀಯ ಪರೀಕ್ಷೆಯಲ್ಲಿ 2ನೇ ಹಾಗೂ ಬಿ.ಫಾರ್ಮಾದಲ್ಲಿ 3ನೇ ರ‍್ಯಾಂಕ್‌ ಗಳಿಸಿರುವ ವಿದ್ಯಾರ್ಥಿ. 

ಅಮಿನೇಶ್ ಸಿಂಗ್ ರಾಥೋರ್
ಅಮಿನೇಶ್ ಸಿಂಗ್ ರಾಥೋರ್
ಪ್ರೀತಮ್ ರಾವಲಪ್ಪ ಪಣಸುಧಾಕರ್
ಪ್ರೀತಮ್ ರಾವಲಪ್ಪ ಪಣಸುಧಾಕರ್
ಅಭಿನವ್.ಪಿ.ಜೆ
ಅಭಿನವ್.ಪಿ.ಜೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT