ಬೆಂಗಳೂರು: ಕೆಂಬತ್ತಳ್ಳಿ ಕೆರೆಯಲ್ಲಿ ಭಾನುವಾರ Urban Wings Foundation ವತಿಯಿಂದ ಕೆರೆ ಶುದ್ಧೀಕರಣ ಅಭಿಯಾನವನ್ನು ಆಯೋಜಿಸಲಾಗಿತ್ತು.

ಈ ಶುದ್ಧೀಕರಣ ಅಭಿಯಾನದಲ್ಲಿ Arya Hamsa Apartment Owners Cooperative Society ನಿವಾಸಿಗಳು ಸಕ್ರಿಯವಾಗಿ ಭಾಗವಹಿಸಿ, ಸಂಸ್ಥೆಯೊಂದಿಗೆ ಕೈಜೋಡಿಸಿದರು.

ಅಭಿಯಾನವು ಸಮುದಾಯದ ಪರಿಸರ ಜಾಗೃತಿಯನ್ನು ಪ್ರತಿಬಿಂಬಿಸುವಂತಿತ್ತು.

ಸಂಸ್ಥೆಯ ಅಧ್ಯಕ್ಷರಾದ ಪಲ್ಲವಿ ಆರ್, ಮಾತನಾಡಿ, ನಗರ ವನ್ಯಜೀವಿಗಳಿಗೆ ಕೆರೆಗಳು ಹೃದಯದಂತಿವೆ ಎಂದು ತಿಳಿಸಿದರು. ಕೆರೆಗಳು ಪಕ್ಷಿಗಳು, ಮೀನುಗಳು ಮತ್ತು ಅನೇಕ ಜೀವಿಗಳಿಗೆ ಆಶ್ರಯವಾಗಿದ್ದು, ಅವು ಸ್ವತಂತ್ರವಾದ ವಾಸಸ್ಥಾನಗಳಾಗಿವೆ. ಆದ್ದರಿಂದ ಕೆರೆಗಳನ್ನು ಸಂರಕ್ಷಿಸುವುದು ನಗರ ಜೀವವೈವಿಧ್ಯತೆಯನ್ನು ಉಳಿಸಲು ಅತ್ಯಂತ ಅಗತ್ಯ ಎಂದರು.

ವ್ಯವಸ್ಥಾಪಕ ಮಲ್ಲಿಕಾರ್ಜುನ ಅಂಬಿಗರ್, ಪ್ಲಾಸ್ಟಿಕ್ ಕಸದ ಅಪಾಯಗಳ ಬಗ್ಗೆ ಮಾತನಾಡಿ, ಪ್ಲಾಸ್ಟಿಕ್ ನಮ್ಮ ಪರಿಸರಕ್ಕೆ “ವಿಷ” ಎಂದು ಹೇಳಿದರು. ಇದು ಕೇವಲ ಪ್ರಾಣಿಗಳಿಗೆ ಮಾತ್ರವಲ್ಲ, ಸಮಸ್ತ ಜೀವಿಗಳಿಗೆ ಹಾನಿ ಉಂಟುಮಾಡುತ್ತದೆ ಎಂದು ಎಚ್ಚರಿಸಿದರು.

ಸಂಸ್ಥೆಯ ಕಾರ್ಯದರ್ಶಿ ಸಂದೀಪ್ ಎನ್, ಶುದ್ಧೀಕರಣ ಕಾರ್ಯವನ್ನು ಸಮರ್ಪಕವಾಗಿ ಸಂಯೋಜಿಸಿ, ಸ್ವಯಂಸೇವಕರಿಗೆ ಪ್ರೇರಣೆ ನೀಡಿದರು. ಒಟ್ಟು 50 ಸ್ವಯಂಸೇವಕರು ಭಾಗವಹಿಸಿದ್ದರು.

ಭಾಗವಹಿಸಿದವರಿಗೆ ಕುಡಿಯುವ ನೀರು, ಕೈಗವಸು, ಸ್ಯಾನಿಟೈಸರ್ ಮತ್ತು ಕಸದ ಚೀಲಗಳನ್ನು ವ್ಯವಸ್ಥೆ ಮಾಡಲಾಗಿತ್ತು.

ಮಹಿಳೆಯರು, ಮಕ್ಕಳು, ಹಿರಿಯರು ಸೇರಿದಂತೆ ಎಲ್ಲಾ ವಯೋಮಾನದವರು ಕೆರೆಯ ಸುತ್ತಲು ತೆರಳಿ ಪ್ಲಾಸ್ಟಿಕ್ ಕವರ್ಗಳು, ಕಾಗದ, ಚಾಕಲೇಟ್ ಪೇಪರ್, ಡಯಪರ್ ಸೇರಿದಂತೆ ಅನೇಕ ರೀತಿಯ ಕಸದ ವಸ್ತುಗಳನ್ನು ಸಂಗ್ರಹಿಸಿದರು. ಅಸಹ್ಯಕರ ವಸ್ತುಗಳನ್ನೂ ಒಂದಿನಿತೂ ಹಿಂದೇಟು ಹಾಕದೆ ಎತ್ತಿ ಸಂಗ್ರಹಿಸಿದ ಸ್ವಯಂಸೇವಕರ ಸಮರ್ಪಣೆ ಗಮನಾರ್ಹವಾಗಿತ್ತು.

ಪಾಲಿಕೆ ಅಧಿಕಾರಿಗಳು ಹಾಗೂ ಕಾರ್ಮಿಕರು ಸ್ಥಳಕ್ಕೆ ಆಗಮಿಸಿ ಸಂಗ್ರಹಿಸಿದ ಕಸವನ್ನು ನಗರಪಾಲಿಕೆಯ ವಾಹನದಲ್ಲಿ ಸಾಗಿಸಲು ಸಹಕರಿಸಿದರು. ಚೀಲಗಳನ್ನು ಖಾಲಿ ಮಾಡಿದ ಬಳಿಕ ಸ್ವಯಂಸೇವಕರು ಮತ್ತೊಮ್ಮೆ ಶುದ್ಧೀಕರಣ ಕಾರ್ಯ ಮುಂದುವರಿಸಿದರು.

ಸ್ಥಳೀಯ ಮಾಜಿ ಕಾರ್ಪೊರೇಟರ್ ಕೆ.ಸೋಮಶೇಖರ್, ಕಾರ್ಯಕ್ರಮಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿ, ಕೆರೆಯ ಪುನರುಜ್ಜೀವನಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪರಿಸರ ಮತ್ತು ಪ್ರಕೃತಿ ಸಂಬಂಧಿತ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡುವುದಾಗಿ ಅವರು ತಿಳಿಸಿದರು.

ಮುಂದಿನ ಕ್ರಮವಾಗಿ Urban Wings Foundation ಹಾಗೂ Arya Hamsa Apartment Owners Cooperative Society ಒಟ್ಟಾಗಿ ಸ್ಥಳೀಯ ಶಾಸಕರಿಗೂ ಮತ್ತು BBMP ಮುಖ್ಯ ಇಂಜಿನಿಯರ್ರಿಗೆ ಕೆರೆಯ ಸಮಗ್ರ ಪುನರುಜ್ಜೀವನಕ್ಕಾಗಿ ಮನವಿ ಪತ್ರವನ್ನು ಸಿದ್ಧಪಡಿಸಿದರು. ಈ ಪತ್ರಕ್ಕೆ ನಿವಾಸಿಗಳು ಮತ್ತು ಸ್ವಯಂಸೇವಕರ ಸಹಿಗಳನ್ನು ಸಂಗ್ರಹಿಸಿ, ಸಮುದಾಯದ ಏಕಮುಖ ಬೇಡಿಕೆಯನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಂತ್ಯದಲ್ಲಿ Urban Wings Foundation ಸದಸ್ಯರು ಸ್ವಯಂಸೇವಕರನ್ನು ಅಭಿನಂದಿಸಿ, ನಗರ ಪ್ರದೇಶಗಳಲ್ಲಿ ಪಕ್ಷಿಗಳು ಮತ್ತು ಕೀಟಗಳ ವಾಸಸ್ಥಾನಗಳನ್ನು ಪುನರುಜ್ಜೀವನಗೊಳಿಸುವುದು ಸಂಸ್ಥೆಯ ಪ್ರಮುಖ ಉದ್ದೇಶ ಎಂದು ವಿವರಿಸಿದರು. ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸಿದಾಗ ನಾಗರಿಕರು ಸಂತೋಷ ವ್ಯಕ್ತಪಡಿಸಿ ತಮ್ಮ ಬೆಂಬಲದ ಭರವಸೆ ನೀಡಿದರು.

ಈ ಅಭಿಯಾನದ ವಿಶೇಷತೆಯಾಗಿ ಶ್ರೀ ಪನ್ನಗ ಅವರ ಕುಟುಂಬದ ಭಾಗವಹಿಸುವಿಕೆ ಗಮನಾರ್ಹವಾಗಿತ್ತು. ಕುಟುಂಬದ 6–8 ಮಂದಿ ಶುದ್ಧೀಕರಣ ಕಾರ್ಯದಲ್ಲಿ ಪಾಲ್ಗೊಂಡು ಇತರರಿಗೆ ಆದರ್ಶವಾಗಿದ್ದಾರೆ.

ಈ ಅಭಿಯಾನವು ನಗರ ಪರಿಸರ ಸಂರಕ್ಷಣೆಯಲ್ಲಿ ನಾಗರಿಕರ ಜವಾಬ್ದಾರಿತನವನ್ನು ಪ್ರತಿಬಿಂಬಿಸಿದ್ದು, ಸಾಮೂಹಿಕ ಪ್ರಯತ್ನಗಳಿಂದ ನಗರ ಪರಿಸರವನ್ನು ಉಳಿಸಬಹುದೆಂಬ ಸಂದೇಶವನ್ನು ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.