ಬೆಂಗಳೂರು: ‘ನಗರದಲ್ಲಿ ಭವಿಷ್ಯದಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಯನ್ನು ಎದುರಿಸಲು ಮಳೆ ನೀರು ಸಂಗ್ರಹಿಸಿ ಹಾಗೂ ಬೂದು ನೀರನ್ನು ಸಂಸ್ಕರಿಸಿ ಬಳಸುವುದಕ್ಕೆ ಆದ್ಯತೆ ನೀಡಬೇಕು’ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ವಿ.ರಾಮ್ಪ್ರಸಾತ್ ಮನೋಹರ್ ತಿಳಿಸಿದರು.

‘ಇಂಥ ನೀರನ್ನು ಬಳಕೆ ಮಾಡುವುದಕ್ಕಾಗಿ ವಸತಿ ಸಮುಚ್ಛಯಗಳು, ಬಡಾವಣೆಗಳು, ಸೇನಾ ಸಂಸ್ಥೆಗಳು ಎರಡನೇ ಕೊಳವೆಯ ಅಳವಡಿಕೆಗೆ ಒತ್ತು ನೀಡಬೇಕು’ ಎಂದು ಅವರು ಸಲಹೆ ನೀಡಿದರು.

ನಗರದ ಕಾವೇರಿ ಭವನದಲ್ಲಿ ಜಲಮಂಡಳಿ ಆಯೋಜಿಸಿದ್ದ ‘ದೊಡ್ಡ ಮಟ್ಟದಲ್ಲಿ ಕಾವೇರಿ ನೀರು ಬಳಕೆದಾರರ ಸಭೆ’ಯಲ್ಲಿ ಮಾತನಾಡಿದ ಅವರು, ‘ಪ್ರತಿ ಬಡಾವಣೆಯವರು ಬೂದು ನೀರನ್ನು ಸಂಸ್ಕರಿಸಿ ಬಳಸಿಕೊಳ್ಳಲು ಆದ್ಯತೆ ನೀಡಬೇಕು. ದೊಡ್ಡ ಪ್ರಮಾಣದಲ್ಲಿ ಸಂಸ್ಕರಿಸಿದ ನೀರಿನ ಮರುಬಳಕೆ ಮಾಡುವವರಿಗೆ ಜಲಮಂಡಳಿಯಿಂದ ಪ್ರೋತ್ಸಾಹಧನ ನೀಡಲು ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ. ಈ ಕುರಿತು ಮಂಡಳಿಯ ಮುಂದಿನ ಸಭೆಯಲ್ಲಿ ಅಗತ್ಯ ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.

‘ಬೆಂಗಳೂರು ನಗರಕ್ಕೆ ಬೇರೆ ನದಿ, ಜಲಮೂಲಗಳಿಂದ ನೀರು ಪೂರೈಸುವ ಕುರಿತು ಗಂಭೀರ ಚಿಂತನೆ ನಡೆಯುತ್ತಿದೆ. ಪ್ರಸ್ತುತ ಜಲಮಂಡಳಿಗೆ ವಿದ್ಯುತ್ ದರ ಹೊರೆಯಾಗುತ್ತಿದೆ. ಈ ನಷ್ಟವನ್ನು ಶೇ 50 ರಷ್ಟು ಕಡಿಮೆ ಮಾಡಲು ಸೌರ ವಿದ್ಯುತ್ ಬಳಕೆಗೆ ಒತ್ತು ನೀಡುತ್ತಿದ್ದೇವೆ. ಶೇ 80 ರಷ್ಟು ಸೌರ ವಿದ್ಯುತ್ ಬಳಸಿಕೊಳ್ಳುವ ಗುರಿ ಇದೆ’ ಎಂದು ಹೇಳಿದರು.

‘ಜಲಮಂಡಳಿ ವೈಜ್ಞಾನಿಕವಾಗಿ ನೀರು ಸರಬರಾಜು ಮಾಡಲು ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಬೂದು ನೀರು ಸಂಸ್ಕರಿಸಿ ಬಳಸುವುದನ್ನು ಜಾರಿಗೆ ತರುತ್ತಿದೆ. ನಾಗರಿಕರು ಸಂಸ್ಕರಿಸಿದ ನೀರಿನ ಬಳಕೆಗೆ ಆದ್ಯತೆ ನೀಡಬೇಕು. ಸೋರಿಕೆಯಾಗುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ವಸತಿ ಸಮುಚ್ಚಯಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಲ್ಲದಿದ್ದರೆ (ಎಸ್ಟಿಪಿ)ತಿಳಿಸಿ. ನಾವೇ ನಿಮ್ಮಲ್ಲಿಗೆ ಬಂದು ಘಟಕ ನಿರ್ಮಾಣಕ್ಕೆ ನೆರವಾಗುತ್ತೇವೆ’ ಎಂದು ರಾಮ್ಪ್ರಸಾತ್ ಭರವಸೆ ನೀಡಿದರು.

ಜಲಮಂಡಳಿ 34 ಎಸ್ಟಿಪಿಗಳನ್ನು ’4 ಸ್ಟಾರ್’ ಹಂತಕ್ಕೆ ಮೇಲ್ದರ್ಜೆಗೇರಿಸಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ₹ 103 ಕೋಟಿ ಮೊತ್ತವನ್ನು ಪ್ರಶಸ್ತಿ ರೂಪದಲ್ಲಿ ಜಲಮಂಡಳಿಗೆ ನೀಡಿದೆ. ನಗರದಲ್ಲಿ ಬಿಐಎಸ್ ಗುಣಮಟ್ಟದ ನೀರು ಪೂರೈಸುತ್ತಿದೆ. ಜಲಮಂಡಳಿಯ ಜಲಸಂರಕ್ಷಣೆ ಪ್ರಯತ್ನಕ್ಕೆ ಎಲ್ಲರೂ ಸಹರಿಸಬೇಕು ಎಂದು ಅವರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.