ಬೆಂಗಳೂರು: ಪ್ರೇಮಿಗಳ ದಿನದ ಸಂದರ್ಭದಲ್ಲಿ ವಿಶ್ವದಾದ್ಯಂತ ತಾಜಾ ಗುಲಾಬಿಗಳಿಗೆ ಉಂಟಾದ ಭಾರಿ ಬೇಡಿಕೆಯಿಂದಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 26 ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಮತ್ತು 47 ದೇಶೀಯ ನಿಲ್ದಾಣಗಳಿಗೆ ಸುಮಾರು 60 ದಶಲಕ್ಷ ಗುಲಾಬಿ ಹೂವುಗಳನ್ನು ರವಾನಿಸಲಾಗಿದೆ.

2,700 ಮೆಟ್ರಿಕ್ ಟನ್ಗಿಂತಲೂ ಅಧಿಕ ತೂಕದ ಈ ಹೂವುಗಳ ರಫ್ತು, ಕಳೆದ ವರ್ಷಕ್ಕೆ ಹೋಲಿಸಿದರೆ ಹೂವುಗಳ ಸಂಖ್ಯೆಯಲ್ಲಿ ಶೇ. 38 ರಷ್ಟು ಮತ್ತು ಒಟ್ಟು ತೂಕದಲ್ಲಿ ಶೇ. 64 ರಷ್ಟು ಬೆಳವಣಿಗೆಯನ್ನು ಕಂಡಿದೆ.

ಈ ಮೂಲಕ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸತತ ಐದನೇ ವರ್ಷವೂ ಕೊಳೆಯುವ ಉತ್ಪನ್ನಗಳ ರಫ್ತಿನಲ್ಲಿ ಭಾರತದ ಮುಂಚೂಣಿ ವಿಮಾನ ನಿಲ್ದಾಣ ಎಂಬ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.

ಇಲ್ಲಿಂದ ಅಂತರರಾಷ್ಟ್ರೀಯ ರಫ್ತು ಸ್ಥಿರವಾಗಿದ್ದು, ಸುಮಾರು 305 ಮೆಟ್ರಿಕ್ ಟನ್ ಹೂವುಗಳನ್ನು ರವಾನಿಸಲಾಗಿದೆ. ಈ ಪೈಕಿ ಸಿಂಗಾಪುರ (SIN) ಪ್ರಮುಖ ವಿದೇಶಿ ತಾಣವಾಗಿ ಹೊರಹೊಮ್ಮಿದೆ. ನಂತರದ ಸ್ಥಾನಗಳಲ್ಲಿ ಕೌಲಾಲಂಪುರ್ (KUL), ಅಬುಧಾಬಿ (AUH), ನ್ಯೂಯಾರ್ಕ್ (JFK) ಮತ್ತು ಕುವೈತ್ (KWI) ನಗರಗಳಿವೆ. ಈ ಋತುವಿನಲ್ಲಿ ಲಾಸ್ ಏಂಜಲೀಸ್ (LAX), ಲಂಡನ್ ಗ್ಯಾಟ್ವಿಕ್ (LGW), ಡಲ್ಲಾಸ್ ಫೋರ್ಟ್ ವರ್ತ್ (DFW), ಟೊರೊಂಟೊ (YYZ) ಮತ್ತು ಒರ್ಲ್ಯಾಂಡೊ (MCO) ಸೇರಿದಂತೆ ಹೊಸ ತಾಣಗಳಿಗೆ ಗುಲಾಬಿ ಹೂವುಗಳನ್ನು ರಫ್ತು ಮಾಡಲಾಗಿದೆ.

ಹಾಗೆಯೇ, ಈ ಬಾರಿ ದೇಶೀಯ ಮಾರುಕಟ್ಟೆಯಲ್ಲಿ 2,402 ಮೆಟ್ರಿಕ್ ಟನ್ ಗುಲಾಬಿಗಳನ್ನು ಸಾಗಿಸಲಾಗಿದ್ದು, ಒಟ್ಟು ತೂಕದಲ್ಲಿ ಕಳೆದ ವರ್ಷಕ್ಕಿಂತ ಶೇ. 79 ರಷ್ಟು ಗಮನಾರ್ಹ ಏರಿಕೆ ಕಂಡುಬಂದಿದೆ. ದೆಹಲಿ (DEL) ಮತ್ತು ಕೋಲ್ಕತ್ತ (CCU) ನಗರಗಳು ಎಂದಿನಂತೆ ಹೆಚ್ಚಿನ ಬೇಡಿಕೆಯನ್ನು ಕಾಯ್ದುಕೊಂಡರೆ, ಗುವಾಹಟಿ (GAU), ಮುಂಬೈ (BOM) ಮತ್ತು ಜೈಪುರ (JAI) ನಗರಗಳಿಂದಲೂ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ವಿಶೇಷವೆಂದರೆ, ಕೋಲ್ಕತ್ತ (CCU), ಮುಂಬೈ (BOM), ಚಂಡೀಗಢ (IXC) ಮತ್ತು ಲಖನೌ(LKO) ನಗರಗಳು ಕಳೆದ ಋತುವಿಗೆ ಹೋಲಿಸಿದರೆ ಶೇ. 150 ಕ್ಕೂ ಹೆಚ್ಚು ಬೆಳವಣಿಗೆಯನ್ನು ದಾಖಲಿಸಿವೆ.

ಕೆಂಪೇಗೌಡ ವಿಮಾನ ನಿಲ್ದಾಣ ಬೆಂಗಳೂರಿನ ವಿಸ್ತೃತ ಕಾರ್ಗೊ ಮೂಲಸೌಕರ್ಯವು ಈ ವೇಗಕ್ಕೆ ಮತ್ತಷ್ಟು ಬೆಂಬಲ ನೀಡುತ್ತಿದ್ದು, ಹೂವುಗಳ ತಾಜಾತನ, ವೇಗ ಮತ್ತು ನಿಖರವಾದ ತಾಪಮಾನವನ್ನು ಕಾಯ್ದುಕೊಳ್ಳುವುದನ್ನು ಖಚಿತಪಡಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ನೈಜ-ಸಮಯದ ಟ್ರ್ಯಾಕಿಂಗ್ ಮತ್ತು ಸುಧಾರಿತ ತಂತ್ರಜ್ಞಾನವನ್ನು ಹೊಂದಿರುವ ಅತ್ಯಾಧುನಿಕ 'ಕೋಲ್ಡ್ ಚೈನ್' ಸೌಲಭ್ಯಗಳು ಪ್ರತಿಯೊಂದು ರವಾನೆಯನ್ನೂ ಸುರಕ್ಷಿತವಾಗಿಡುತ್ತವೆ. ಅಲ್ಲದೆ, ತಾಪಮಾನದಲ್ಲಿ ಉಂಟಾಗುವ ಏರಿಳಿತಗಳನ್ನು ಮೊದಲೇ ಗುರುತಿಸಿ ನಿರ್ವಹಿಸುವ ಮೂಲಕ, ಉತ್ಪನ್ನಗಳ ಶೇಖರಣೆ, ನಿರ್ವಹಣೆ ಮತ್ತು ಸಾಗಣೆಯು ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತವೆ ಎಂದು ಹೇಳಿದೆ.

ಈ ಸೌಲಭ್ಯಗಳು ಸರಕು ಸಾಗಣೆಯ ಪ್ರಮುಖ ಹೆಬ್ಬಾಗಿಲಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತಿವೆ. ಅದರಲ್ಲೂ ವಿಶೇಷವಾಗಿ ಹೆಚ್ಚಿನ ಬೇಡಿಕೆಯ ಸಮಯದಲ್ಲಿ ಅತ್ಯಮೂಲ್ಯವಾದ ಸರಕುಗಳ ಸಾಗಣೆಗೆ ಪೂರಕವಾಗಿವೆ ಎಂದಿದೆ.

ದಕ್ಷತೆ, ಭದ್ರತೆ ಮತ್ತು ಕಾರ್ಯಾಚರಣೆಯ ವೇಗವನ್ನು ಹೆಚ್ಚಿಸುವ ಮೂಲಕ, ಜಾಗತಿಕವಾಗಿ ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸಲು ವಿಮಾನ ನಿಲ್ದಾಣವು ಸನ್ನದ್ಧವಾಗಿದೆ. ಜೊತೆಗೆ, ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ವಿಶ್ವಾಸಾರ್ಹವಾದ ಹಾಗೂ ಸುಗಮವಾದ ಸಂಪರ್ಕವನ್ನು ಇದು ಖಚಿತಪಡಿಸುತ್ತದೆ ಎಂದು KIAL ಪ್ರಕಟಣೆ ತಿಳಿಸಿದೆ.
.Valentine's Day:ಪ್ರೇಮಿಗಳಿಗಷ್ಟೇ ಅಲ್ಲ ಬೆಳೆಗಾರರಿಗೂ ಖುಷಿ ತರುವ ಕೆಂಪು ಗುಲಾಬಿ.Valentine's Day : ಯಾವ ಬಣ್ಣದ ಗುಲಾಬಿ ಏನನ್ನು ಸಂಕೇತಿಸುತ್ತದೆ?ಇಲ್ಲಿದೆ ಮಾಹಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.