ಫೆ.14 ಪ್ರೇಮಿಗಳ ದಿನಾಚರಣೆ. ಫೆಬ್ರುವರಿ ತಿಂಗಳು ಬಂತೆಂದರೆ ಸಾಕು ಪ್ರೇಮಿಗಳು ಹಬ್ಬದಂತೆ ಸಂಭ್ರಮಿಸುತ್ತಾರೆ. ವಾರಕ್ಕೂ ಮುಂಚಿತವಾಗಿಯೇ ವಿವಿಧ ಹೆಸರಲ್ಲಿ ಪ್ರೇಮಿಗಳು ಆಚರಣೆ ಮಾಡುತ್ತಾರೆ. ಈ ವ್ಯಾಲೆಂಟೈನ್ಸ್ ಡೇ ದಿನದಂದು ಕೆಂಪು ಗುಲಾಬಿ ಕೇವಲ ಪ್ರೇಮಿಗಳಿಗಷ್ಟೇ ಅಲ್ಲ ಬೆಳೆಗಾರರ ಮುಖದಲ್ಲೂ ಮಂದಹಾಸ ಮೂಡಿಸುತ್ತದೆ.
.ಪ್ರಜಾವಾಣಿ ಡಿಜಿಟಲ್ – ವ್ಯಾಲೆಂಟೈನ್ಸ್ ಡೇ ರೀಲ್ಸ್ ಸ್ಪರ್ಧೆಗೆ ಆಹ್ವಾನ.ಮಂಗಳೂರು | ರಸ್ತೆ ಸುರಕ್ಷತೆ: ಕೆಂಪು ಗುಲಾಬಿ ಅಭಿಯಾನ.
ಪ್ರೀತಿಯ ಸಂಕೇತವಾಗಿರುವ ಕೆಂಪು ಗುಲಾಬಿ ಇಲ್ಲದೇ ಪ್ರೇಮಿಗಳ ದಿನಾಚರಣೆ ನಡೆಯುತ್ತಾ? ಆದ್ರೆ, ಫೆಬ್ರುವರಿ ತಿಂಗಳು ಪ್ರೇಮಿಗಳಿಗೆ ಮಾತ್ರವಲ್ಲ. ಹೂ ಬೆಳೆಯುವ ರೈತನಿಗೂ ಒಂದು ರೀತಿಯಲ್ಲಿ ಹಬ್ಬ ಎಂದರೆ ತಪ್ಪಾಗೋದಿಲ್ಲ. ಈ ಕೆಂಪು ಗುಲಾಬಿಗೆ ಫೆಬ್ರುವರಿ ತಿಂಗಳಲ್ಲಿ ಇರುವ ಬೇಡಿಕೆ ವರ್ಷದ ಬಹುತೇಕ ತಿಂಗಳಿನಲ್ಲಿ ಇರುವುದಿಲ್ಲ. ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಬೆಳೆಯುವ ಗುಲಾಬಿಗೆ ಎಲ್ಲಿಲ್ಲದ ಬೇಡಿಕೆ ಇದೆ.

ಈಗಾಗಲೇ ಮಾರುಕಟ್ಟೆಗೆ ಪ್ರೇಮಿಗಳ ದಿನದ ಅಂಗವಾಗಿ ಬಣ್ಣ ಬಣ್ಣದ ಹೂಗಳು ಬಂದಿವೆ. ಕೆಂಪು, ಗುಲಾಬಿ, ಹಳದಿ, ಬಿಳಿ, ಕೇಸರಿ ಹೀಗೆ ಹತ್ತು ಹಲವು ಬಣ್ಣಗಳಿಂದ ಕೂಡಿದ ಹೂವುಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಇನ್ನು, ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ ದೇಶ ವಿದೇಶಗಳಲ್ಲೂ ಬೇಡಿಕೆ ಹೆಚ್ಚಾಗಿದೆ.

ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಗುವಾಹಟಿ, ಚಂಡೀಗಢ, ಗುಜರಾತ್, ರಾಜಸ್ಥಾನ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಗುಲಾಬಿ ಮಾರಾಟ ಶುರುವಾಗಿವೆ. ಸದ್ಯ ಮಾರುಕಟ್ಟೆಗಳಲ್ಲಿ ವ್ಯಾಲೆಂಟೈನ್ಸ್ ಡೇಗೆ ಗುಲಾಬಿ ಹೂವಿಗೆ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಬೆಳೆಗಾರರಿಗೆ ಒಳ್ಳೆ ದರ ಕೂಡ ಸಿಗುತ್ತಿದ್ದು, ಪ್ರೇಮಿಗಳ ಜೊತೆಗೆ ಗುಲಾಬಿ ಬೆಳೆದ ರೈತರು, ಮಾರಾಟಗಾರರು ಕೂಡ ಸಂತಸದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.