ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವರಮಹಾಲಕ್ಷ್ಮೀ ಹಬ್ಬ ಹಾಗೂ ಬಕ್ರೀದ್ ಅನ್ನು ಮನೆಯಲ್ಲೇ ಸರಳವಾಗಿ ಆಚರಿಸುವಂತೆ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರು ನಗರದ ಜನತೆಯಲ್ಲಿ ಮನವಿ ಮಾಡಿದ್ದಾರೆ.
‘ಜನರು ಸಹಕಾರ ನೀಡಿದರೆ ಮಾತ್ರ ಕೊರೊನಾ ವಿರುದ್ಧ ಹೋರಾಡಲು ಸಾಧ್ಯ. ಹೆಚ್ಚು ಜನ ಗುಂಪು ಸೇರುವು ದರಿಂದ ಸೋಂಕು ಹರಡುವ ಆತಂಕ ಇದೆ. ಯಾರೊಬ್ಬರಿಗೂ ಯಾವುದೇ ತೊಂದರೆಯಾಗದಂತೆ ನೋಡಿ ಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ’ ಎಂದು ಅವರು ನೆನಪಿಸಿದ್ದಾರೆ.
ವರಮಹಾಲಕ್ಷ್ಮೀ ಹಬ್ಬದ ದಿನ ದೇವಸ್ಥಾನ, ಮಂದಿರಗಳಿಗೆ, ಬೇರೆ ಯವರ ಮನೆಗಳಿಗೆ ಭೇಟಿ ನೀಡದೇ ಇರುವುದು ಒಳ್ಳೆಯದು. ಮನೆಯಲ್ಲಿ ಲಭ್ಯವಿರುವ ಸಾಮಗ್ರಿಗಳನ್ನೇ ಬಳಸಿ ಹಬ್ಬ ಆಚರಿಸಿ. ಸಂಬಂಧಿಕರು ಹಾಗೂ ಸ್ನೇಹಿತರನ್ನು ಮನೆಗೆ ಆಹ್ವಾನಿಸದಿರಿ. ಮನೆಯಿಂದ ಹೊರ ಹೋಗುವುದು ಅನಿವಾರ್ಯವಾದರೆ ಸುರಕ್ಷಾ ಕ್ರಮಗಳನ್ನು ಪಾಲಿಸಿ. ಆ ಬಗ್ಗೆ ನಿಮ್ಮ ಸಂಬಂಧಿಕರು ಹಾಗೂ ಪರಿಚಯ ಸ್ಥರಿಗೆ ಅರಿವು ಮೂಡಿಸಿ ಎಂದು ಅವರು ಕೋರಿದ್ದಾರೆ.
ಹಬ್ಬದ ದಿನ ಉತ್ಪತ್ತಿಯಾಗುವ ಕಸವನ್ನು ಎಲ್ಲೂ ಬಿಸಾಡದಿರಿ. ಒಣ, ಹಸಿ ಹಾಗೂ ಸ್ಯಾನಿಟರಿ ಕಸವನ್ನು ವಿಂಗಡಿಸಿ , ಮನೆ ಮನೆಗೆ ಬಂದು ಕಸ ಸಂಗ್ರಹಿಸುವ ಪಾಲಿಕೆ ಸಿಬ್ಬಂದಿಗೆ ನೀಡಿ ಎಂದು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.