ಬೆಂಗಳೂರು: ‘ಪುಸ್ತಕೋದ್ಯಮದ ಸಂಕಷ್ಟ ನಿವಾರಣೆಗೆ ಸರ್ಕಾರವು ಪ್ರತಿ ವರ್ಷ ₹20 ಕೋಟಿ ಅನುದಾನವನ್ನಾದರೂ ಬಜೆಟ್ನಲ್ಲಿ ಮೀಸಲಿಡಬೇಕು. ಪುಸ್ತಕಗಳು ಪ್ರಕಟಗೊಂಡ ವರ್ಷವೇ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಖರೀದಿಸುವಂತಾಗಬೇಕು’ ಎಂದು ಲೇಖಕಿ ಡಾ. ವಸುಂಧರಾ ಭೂಪತಿ ಅಭಿಪ್ರಾಯಪಟ್ಟರು.

ಕರ್ನಾಟಕ ಪ್ರಕಾಶಕರ ಸಂಘವು ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆ ಸಮಾರಂಭದಲ್ಲಿ ರಾಯಚೂರಿನ ಬಂಡಾರ ಪ್ರಕಾಶನದ ರೇಣುಕಾ ಕೋಡುಗುಂಟಿ ಅವರಿಗೆ ‘ನಂಜನಗೂಡು ತಿರುಮಲಾಂಬ ಪ್ರಶಸ್ತಿ’ ಹಾಗೂ ಶಿವಮೊಗ್ಗದ ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಅವರಿಗೆ ‘ಎಂ. ಗೋಪಾಲಕೃಷ್ಣ ಅಡಿಗ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಈ ವೇಳೆ ಮಾತನಾಡಿದ ವಸುಂಧರಾ ಭೂಪತಿ, ‘ರಾಜ್ಯದಲ್ಲಿ 7,200 ಗ್ರಂಥಾಲಯಗಳಿವೆ. ಸರ್ಕಾರವು ಸಾರ್ವಜನಿಕ ಗ್ರಂಥಾಲಯ ಇಲಾಖೆಯಡಿ 2007ರಲ್ಲಿ ಏಕಗವಾಕ್ಷಿ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿ ಕೃತಿಯೊಂದರ 300 ಪ್ರತಿಗಳನ್ನು ಖರೀದಿಸಲಾಗುತ್ತಿತ್ತು. ಈಗ 2021ರ ಪುಸ್ತಕ ಪಟ್ಟಿ ಪ್ರಕಟವಾಗಿದೆ. ಆದರೆ, ಯೋಜನೆಯಡಿ ಪುಸ್ತಕಗಳ ಖರೀದಿಯನ್ನೇ ನಿಲ್ಲಿಸಲಾಗಿದೆ. ಪುಸ್ತಕ ಖರೀದಿಗೆ ಬಜೆಟ್ನಲ್ಲಿ ಅನುದಾನ ಮೀಸಲಿಡುವುದು ಸರ್ಕಾರದ ಜವಾಬ್ದಾರಿ. ಈ ಸಂದರ್ಭದಲ್ಲಿ ಪಟ್ಟಿ ಬಂದಿದೆಯೆಂದು ಖುಷಿ ಪಡಬೇಕೊ, ಇಲಾಖೆ ಖರೀದಿಸುತ್ತಿಲ್ಲ ಎಂದು ದುಃಖ ಪಡಬೇಕೊ ಎಂಬುದು ತಿಳಿಯದಾಗಿದೆ’ ಎಂದರು.

ಪುಸ್ತಕ ಪ್ರಕಾಶಕರು ಸರ್ಕಾರದ ನೆರವು ಬೇಡ ಎನ್ನುವ ಸ್ಥಿತಿಯಲ್ಲಿ ಇಲ್ಲ. ಏಕಗವಾಕ್ಷಿ ಯೋಜನೆಯಡಿ ವಿವಿಧ ಪ್ರದೇಶಗಳ ದುರ್ಬಲ ಪ್ರಕಾಶಕರ ಪುಸ್ತಕಗಳನ್ನು ಮೊದಲು ಖರೀದಿಸಬೇಕು.
ಅಕ್ಷತಾ ಹುಂಚದಕಟ್ಟೆ, ಪ್ರಕಾಶಕಿ

ಪ್ರಶಸ್ತಿ ಪ್ರದಾನ ಮಾಡಿದ ಸಾಹಿತಿ ಬಂಜಗೆರೆ ಜಯಪ್ರಕಾಶ್, ‘ಬರವಣಿಗೆ ಎನ್ನುವುದು ಪಂಡಿತರ ವಲಯದ ಸ್ವತ್ತಲ್ಲ. ಎಲ್ಲರೂ ಬರೆಯಬಹುದಾಗಿದೆ. ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು ಎಂಟು ಸಾವಿರ ಪುಸ್ತಕಗಳು ಪ್ರಕಟವಾಗುತ್ತವೆ. ಅವುಗಳಲ್ಲಿ ನೂರು ಕೃತಿಗಳು ಮೌಲಿಕವಾಗಿ ಉಳಿದರೂ ಕನ್ನಡ ಸಾಹಿತ್ಯ ಮುಂದಕ್ಕೆ ಹೋಗಲಿದೆ. ಓದುಗರೇ ಅಂತಿಮ ತೀರ್ಪುಗಾರರಾಗಿದ್ದು, ಅವರು ಅಗೋಚರ ನೆಲೆಯಲ್ಲಿ ತೀರ್ಪನ್ನು ನೀಡುತ್ತಾರೆ. ಈಗ ಪುಸ್ತಕೋದ್ಯಮವು ಒಂದು ರೀತಿಯಲ್ಲಿ ಸುಖದ ಹಾದಿ, ಮತ್ತೊಂದು ಕಡೆಗೆ ದುಃಖದ ಹಾದಿಯಲ್ಲಿ ಸಾಗುತ್ತಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಏಕಗವಾಕ್ಷಿ ಯೋಜನೆಯಡಿ ಪುಸ್ತಕಗಳನ್ನು ಖರೀದಿಸಿ, ಪುಸ್ತಕೋದ್ಯಮಕ್ಕೆ ಪ್ರೋತ್ಸಾಹ ನೀಡಬೇಕು’ ಎಂದು ಹೇಳಿದರು.

ಇದೇ ವೇಳೆ ಸಾಹಿತ್ಯ ಲೋಕಪಬ್ಲಿಕೇಷನ್ಸ್ನ ರಘುವೀರ್, ಅಮೂಲ್ಯ ಪುಸ್ತಕದ ಕೃಷ್ಣ ಚೆಂಗಡಿ, ಅವ್ವ ಪುಸ್ತಕಾಲಯದ ಅನಂತ್ ಕುಣಿಗಲ್, ಕದಂಬ ಪ್ರಕಾಶನದ ನಾಗೇಶ್ ಹಾಗೂ ಬುಕ್ ಸರ್ಕಲ್ನ ಶ್ರೀನಾಥ್ ಅವರಿಗೆ ‘ಪುಸ್ತಕ ಗೌರವ ಪುರಸ್ಕಾರ’ ನೀಡಿ, ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.