ಬೆಂಗಳೂರು: ಇತ್ತೀಚಿಗೆ ಸುರಿದ ಸತತ ಮಳೆಗೆ ಸೊಪ್ಪು ಮತ್ತು ತರಕಾರಿ ಬೆಳೆಗಳಿಗೆ ಹಾನಿಯಾಗಿದ್ದು, ಅದರ ಪರಿಣಾಮ ಗ್ರಾಹಕರನ್ನು ಬಾಧಿಸತೊಡಗಿದೆ. ಕೊತ್ತಂಬರಿ ಕಟ್ಟಿಗೆ ₹60ರಂತೆ ಮಾರಾಟವಾಗುತ್ತಿದೆ. ಕೆಲ ತರಕಾರಿ ದರಗಳಲ್ಲಿ ಏರಳಿತವಾಗಿದೆ.

ಕೆಲ ದಿನಗಳ ಹಿಂದೆ ಕೊತ್ತಂಬರಿ ಪ್ರತಿ ಕಟ್ಟಿಗೆ ₹20ರಂತೆ ಮಾರಾಟವಾಗುತ್ತಿತ್ತು. ಮಾರುಕಟ್ಟೆಗೆ ಉತ್ಪನ್ನಗಳ ಆವಕದಲ್ಲಿ ವ್ಯತ್ಯಾಸ ಆಗಿರುವುದು ದಿಢೀರನೇ ಬೆಲೆ ಏರಿಕೆಗೆ ಕಾರಣ ಎಂದು ಎಪಿಎಂಸಿ ವರ್ತಕರು ಮತ್ತು ಕೆ. ಆರ್. ಮಾರ್ಕೆಟ್ ಸೊಪ್ಪುಗಳ ವ್ಯಾಪಾರಿ ಸೊಪ್ಪುಕುಮಾರ್ ತಿಳಿಸಿದರು.

ಸೊಪ್ಪು ತುಟ್ಟಿ: ’ಮಳೆಯ ಕಾರಣಕ್ಕೆ ಸೊಪ್ಪಿನ ಬೆಲೆ ಏರಿಕೆಯಾಗಿದೆ. ಅದರಲ್ಲೂ ನಾಟಿ ಕೊತ್ತಂಬರಿ ಆವಕ ಕಡಿಮೆಯಾಗಿದೆ. ದಪ್ಪನೆಯ ಕಟ್ಟು ₹50–60ವರೆಗೂ ಮಾರಾಟವಾಗುತ್ತಿದೆ. ಸಬ್ಬಸ್ಸಿಗೆ ಪ್ರತಿ ಕಟ್ಟಿಗೆ ₹40ರಂತೆ ಮಾರಾಟವಾಗುತ್ತಿದೆ. ಮೆಂತೆ, ಪಾಲಾಕ್ ದರದಲ್ಲೂ ಏರಿಕೆ ಆಗಿದ್ದು, ಇನ್ನೂ ಕೆಲವು ದಿನ ಈ ಪರಿಸ್ಥಿತಿ ಮುಂದುವರಿಯಲಿದೆ’ ಎಂದರು.

ಬೀಟ್‌ರೂಟ್, ಮೆಣಸಿನಕಾಯಿ, ಅವರೆಕಾಯಿ ದರಗಳೂ ಕೆ.ಜಿ.ಗೆ ₹50ಕ್ಕಿಂತ ಹೆಚ್ಚಳ ಕಂಡಿವೆ. ಈ ತರಕಾರಿಗಳ ದರ ಕಳೆದ ವಾರ ಕಡಿಮೆ ಇತ್ತು. ಪ್ರತಿ ತರಕಾರಿ ದರ ಕೆ.ಜಿಗೆ ₹20ರಿಂದ ₹30 ಹೆಚ್ಚಳವಾಗಿದೆ.

‘ಪ್ರತಿ ಕೆ.ಜಿ. ಕ್ಯಾರೆಟ್ ₹80, ಪಡವಲಕಾಯಿ ₹80, ಬೀನ್ಸ್ ₹100 ಬಟಾಣಿ ₹120ರಂತೆ ಮಾರಾಟವಾಗುತ್ತಿದೆ. ಟೊಮೊಟೊ, ಬದನೆ, ಆಲೂಗೆಡ್ಡೆ, ಈರುಳ್ಳಿ, ಹಾಗಲಕಾಯಿ ದರಗಳು ಸ್ಥಿರವಾಗಿವೆ. ಟೊಮೆಟೊ ಕೆ.ಜಿ.ಗೆ ₹20ರಿಂದ ₹30ರವರೆಗೆ ಮಾರಾಟವಾಗುತ್ತಿದೆ’ ಎನ್ನುತ್ತಾರೆ ಕೆ.ಆರ್. ಮಾರುಕಟ್ಟೆಯ ತರಕಾರಿ ವ್ಯಾಪಾರಿಗಳಾದ ವೆಂಕಟೇಶ್ ಮತ್ತು ತಬ್ರೇಜ್.

‘ಮೊದಲಿನಂತೆ ಅಗತ್ಯ ಪ್ರಮಾಣದ ತರಕಾರಿಗಳು ಮಾರುಕಟ್ಟೆಗೆ ಪೂರೈಕೆ ಯಾಗಲು ತಿಂಗಳುಗಟ್ಟಲೆ ಸಮಯ ಬೇಕು. ಅಲ್ಲಿಯವರೆಗೆ ದರ ಏರಿಕೆ ತಪ್ಪಿದ್ದಲ್ಲ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.